Gruha Lakshmi New: ಈ ಒಂದು ಕಾರಣಕ್ಕೆ ಈ ಮಹಿಳೆಯರ ಖಾತೆಗೆ ಜಮಾ ಆಗಲ್ಲ ಗೃಹಲಕ್ಷ್ಮಿ 2000 ರೂ, ಲಕ್ಷ್ಮಿ ಹೆಬ್ಬಾಳ್ಕರ್ ಘೋಷಣೆ.

ಯಾವ ಕಾರಣಕ್ಕೆ Gruha Lakshmi ಯೋಜನೆಯ ಹಣ ಜಮಾ ಆಗಿಲ್ಲ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ.

Lakshmi Hebbalakar About Gruha Lakshmi 2000 Credit: ರಾಜ್ಯದಲ್ಲಿ ಕಾಂಗ್ರೆಸ್ ನ ಉಚುಯಿಟಿ ಗ್ಯಾರಂಟಿಗಳಲ್ಲಿ ಒಂದಾದ Gruha Lakshmi ಯೋಜನೆಯ ಬಗ್ಗೆ ದಿನಕ್ಕೊಂದು ಅಪ್ಡೇಟ್ ಹೊರಬೀಳುತ್ತಿದೆ. August 30 ರಂದು ಅನುಷ್ಠಾನಗೊಂಡಿರುವ Gruha Lakshmi ಯೋಜನೆ ಇನ್ನು ಕೂಡ ಸಂಪೂರ್ಣವಾಗಿಲ್ಲ.

ಏಕೆಂದರೆ Gruha Lakshmi ಯೋಜನೆಯಡಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ಕೂಡ ಯೋಜನೆಯ ಹಣ ಜಮಾ ಆಗಿಲ್ಲ. ಅರ್ಹ ಅಜಿದಾರರರ 50% ರಷ್ಟು ಮಾತ್ರ ಹಣ ಖಾತೆಗೆ ತಲುಪಿದೆ. ಇನ್ನು ಉಳಿದ 50% ಅರ್ಹ ಮಹಿಳೆಯರಿಗೆ Gruha Lakshmi ಯೋಜನೆಯಡಿ ಹಣ ಜಮಾ ಆಗಿಲ್ಲ.

Lakshmi Hebbalkar About Gruha Lakshmi
Image Credit: Varthabharati

ಗೃಹ ಲಕ್ಷ್ಮಿ ಯೋಜನೆಯ ಹಣ ಏಕೆ ಖಾತೆಗೆ ಜಮಾ ಆಗುತ್ತಿಲ್ಲ..?
ಈಗಾಗಲೇ ರೇಷನ್ ಕಾರ್ಡ್ ತಿದ್ದುಪಡಿ ಅವಕಾಶ ನೀಡಲಾಗಿದ್ದು, ಸಾಕಷ್ಟು ಮಂದಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಂಡಿದ್ದರೂ ಕೂಡ ಇನ್ನು ಯೋಜನೆಯ ಹಣ ಖಾತೆಗೆ ಜಮಾ ಆಗಿಲ್ಲ. ಯಾವ ಕಾರಣಕ್ಕೆ ಯೋಜನೆಯ ಹಣ ಜಮಾ ಆಗುತ್ತಿಲ್ಲ ಎಂದು ರಾಜ್ಯದ ಗೃಹಿಣಿಯರು ಚಿಂತಿಸುತ್ತಿದ್ದಾರೆ.

ಎಲ್ಲ ಸಮಸ್ಯೆಯನ್ನು ಸರಿ ಮಾಡಿದರು ಕೂಡ ಹಣ ಖಾತೆಗೆ ಏಕೆ ಜಮಾ ಜಮಾ ಆಗುತ್ತಿಲ್ಲ ಎಂದು ಮಹಿಳೆಯರು ಸರ್ಕಾರಕ್ಕೆ ಪ್ರಶ್ನಿಸುವಂತಾಗಿದೆ. ಸದ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ Lakshmi Hebbalakar, Gruha Lakshmi ಯೋಜನೆಯ ಹಣ ಜಮಾ ಆಗದೆ ಇರುವುದಕ್ಕೆ ಸೂಕ್ತ ಕಾರಣವನ್ನು ನೀಡಿದ್ದಾರೆ.

Lakshmi Hebbalkar About Gruha Lakshmi 2000 Credit
Image Credit: Zeebiz

ಈ ಒಂದು ಕಾರಣಕ್ಕೆ ಈ ಮಹಿಳೆಯರ ಖಾತೆಗೆ ಜನ ಆಗಲ್ಲ ಗೃಹಲಕ್ಷ್ಮಿ 2000 ರೂ.
ಸದ್ಯ ಗೃಹಲಕ್ಷ್ಮಿ 2000 ರೂ. ಅರ್ಹ ಮಹಿಳೆಯರ ಖಾತೆಗೆ ಏಕೆ ಜಮಾ ಆಗುತ್ತಿಲ್ಲ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ. ಆಧಾರ್ ಹಾಗೂ ಬ್ಯಾಂಕ್ ನ ಖಾತೆ ಜೋಡಣೆಯಲ್ಲಿ ವ್ಯತ್ಯಾಸವಾಗಿದ್ದು, ಈ ನಿಟ್ಟಿನಲ್ಲಿ ಅವುಗಳನ್ನು ಸರಿಪಡಿಸುವ ಕಾರ್ಯ ನಡೆದಿದೆ. ಇದೆ ವೇಳೆ 1,59,356 ಅರ್ಜಿದಾರರ ಡೆಮೋ ದೃಡೀಕರಣ ವಿಫಲವಾಗಿದ್ದು, 3082 ಅರ್ಜಿದಾರರು ಮರಣ ಹೊಂದಿದ್ದರಿಂದ ಅವರನ್ನು ಅನರ್ಹಗೊಳಿಸಲಾಗಿದೆ ಎಂದು ಹೇಳಲಾಗಿದೆ.

Join Nadunudi News WhatsApp Group

ಇನ್ನು ಬ್ಯಾಂಕ್ ಗಳ ಮೂಲಕ ಫಲಾನುಭವಿಗಳ ಇ- ಕೆವೈಸಿ ಮಾಡಿಸಲು ಇಲಾಖೆ ಕ್ರಮ ವಹಿಸಿದ್ದು, ಶೀಘ್ರದಲ್ಲೇ ಈ ಬಗ್ಗೆ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಇನ್ನು ಗೃಹ ಲಕ್ಷ್ಮಿ ಯೋಜನೆಯಡಿ ಇಲ್ಲಿಯವರೆಗೆ 1.10 ಕೋಟಿ ಅರ್ಹ ಮಹಿಳೆಯರು ಯೋಜನೆಗೆ ಅರ್ಜಿ ಸಲ್ಲಿಸಿದ್ದು ಅದರಲ್ಲಿ ಅದರಲ್ಲಿ ಕೇವಲ 82 ಲಕ್ಷ ಮಂದಿಗೆ ಹಣ ಜಮಾ ಆಗಿದೆ. ಇನ್ನುಳಿದ 28 ಲಕ್ಷ ಮಂದಿಗೆ ಇನ್ನು ಕೂಡ ಹಣ ಖಾತೆಗೆ ಜಮಾ ಆಗಿಲ್ಲ. ಇನ್ನು ಕೂಡ ಶೇ. 30 ರಷ್ಟು ಅರ್ಹರಿಗೆ ಹಣ ಜಮಾ ಆಗಬೇಕಿದೆ. ಸದ್ಯದಲ್ಲೇ ಅರ್ಹರ ಖಾತೆಗೆ ಹಣ ಜಮಾ ಆಗುವುದಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.

Join Nadunudi News WhatsApp Group