Lalu Prasad Yadav: ಮುಂದಿನ ತಿಂಗಳು ರಾಜೀನಾಮೆ ಕೊಡಲಿದ್ದಾರೆ ನರೇಂದ್ರ ಮೋದಿ, ಲಾಲು ಸ್ಪೋಟಕ ಹೇಳಿಕೆ

ಮುಂದಿನ ತಿಂಗಳು ಮೋದಿ ರಾಜೀನಾಮೆ...! ಲಾಲು ಪ್ರಸಾದ್ ಯಾದವ್ ಸ್ಪೋಟಕ ಭವಿಷ್ಯವಾಣಿ.

Lalu Prasad Yadav About Modi: ಸದ್ಯ ರಾಜ್ಯದಲ್ಲಿ ರಾಜಕೀಯದ ವಿಚಾರಗಳು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಸ್ಥಾನವನ್ನು ಪಡೆದಿರುವ ಬಿಜೆಪಿ ಸರ್ಕಾರದ ಬಗ್ಗೆ ಅನೇಕ ವಿಚಾರಗಳು ಮುನ್ನೆಲೆಗೆ ಬರುತ್ತಿದೆ.

ಮೋದಿ ಸರ್ಕಾರ ಪತನವಾಗುತ್ತದೆ ಎನ್ನುವುದು ಸದ್ಯದ ಚರ್ಚೆಯಾಗಿದೆ ಎನ್ನಬಹುದು. ಇವೆಲ್ಲದರ ಮದ್ಯೆ ಲಾಲು ಪ್ರಸಾದ್ ಯಾದವ್ ಅವರು ಮೋದಿ ಸರ್ಕಾರ ಪತನವಾಗುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಸದ್ಯ ಲಾಲು ಪ್ರಸಾದ್ ಅವರ ಈ ಹೇಳಿಕೆ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ ಎನ್ನಬಹುದು.

Lalu Prasad Yadav About Modi
Image Credit: Businesstoday

ಮುಂದಿನ ತಿಂಗಳು ಮೋದಿ ರಾಜೀನಾಮೆ
ಟಿಡಿಪಿ ಮತ್ತು ಜೆಡಿಯು ಸೇರಿದಂತೆ ಹಲವು ಪಕ್ಷಗಳ ಒಕ್ಕೂಟವಾದ ಎನ್‌ಡಿಎ ಮೈತ್ರಿಕೂಟ ಕೇಂದ್ರದಲ್ಲಿ ಸರ್ಕಾರ ರಚಿಸಿದೆ. ಸರ್ಕಾರ ರಚಿಸಿದ ಕೆಲವೇ ದಿನಗಳಲ್ಲಿ ನರೇಂದ್ರ ಮೋದಿ ಸರ್ಕಾರ ಪತನವಾಗಲಿದೆ ಎಂದು ವಿರೋಧ ಪಕ್ಷದ ನಾಯಕರು ಹೇಳುತ್ತಿದ್ದಾರೆ. ಮೊದಮೊದಲು ಮಮತಾ ಬ್ಯಾನರ್ಜಿ, ನಂತರ ಮಲ್ಲಿಕಾರ್ಜುನ ಖರ್ಗೆ ‘ಶೀಘ್ರದಲ್ಲೇ ಮೋದಿ ಸರ್ಕಾರ ಪತನವಾಗಲಿದೆ’ ಎಂದು ಹೇಳಿದ್ದರು. ಇದೀಗ ಮೋದಿ ಸರಕಾರ ಕಣ್ಮರೆಯಾಗಲಿದೆ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ, ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಭವಿಷ್ಯ ನುಡಿದಿದ್ದಾರೆ.

Lalu Prasad Yadav And Modi Latest News
Image Credit: India TV News

ಲಾಲು ಪ್ರಸಾದ್ ಯಾದವ್ ಸ್ಪೋಟಕ ಭವಿಷ್ಯವಾಣಿ
ನರೇಂದ್ರ ಮೋದಿ ಸರ್ಕಾರ ತುಂಬಾ ದುರ್ಬಲವಾಗಿದೆ. ಇದು ಆಗಸ್ಟ್‌ ನಲ್ಲಿ ಪತನವಾಗುವ ಸಾಧ್ಯತೆಯಿದೆ. ಯಾವಾಗ ಬೇಕಾದರೂ ಚುನಾವಣೆ ಘೋಷಣೆಯಾಗಬಹುದು. ಹೀಗಾಗಿ ಪಕ್ಷದ ಕಾರ್ಯಕರ್ತರು, ಮುಖಂಡರು ಚುನಾವಣೆಗೆ ಸಿದ್ಧರಾಗಬೇಕು’’ ಎಂದು ರಾಷ್ಟ್ರೀಯ ಜನತಾದಳ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಲಾಲು ಪ್ರಸಾದ್ ಯಾದವ್ ಅವರು ರಾಷ್ಟ್ರೀಯ ಜನತಾ ದಳದ ಸಂಸ್ಥಾಪನಾ ದಿನಾಚರಣೆಯಲ್ಲಿ ಮೋದಿ ಸರ್ಕಾರದ ಪತನದ ಬಗ್ಗೆ ಭವಿಷ್ಯವಾಣಿ ನುಡಿದಿದ್ದಾರೆ . ಮುಂದಿನ ತಿಂಗಳು ನರೇಂದ್ರ ಮೋದಿ ಸರಕಾರ ಪತನವಾಗಲಿದೆ. ಹೀಗಾಗಿ ಪಕ್ಷದ ಕಾರ್ಯಕರ್ತರು ಚುನಾವಣೆಗೆ ಸಿದ್ಧರಾಗಬೇಕು ಎನ್ನುವ ಅಚ್ಚರಿಯ ಭವಿಷ್ಯವಾಣಿ ನುಡಿದ್ದಾರೆ. ಸದ್ಯ ಈ ಹೇಳಿಕೆ ಬಾರಿ ಚರ್ಚೆಗೆ ಕಾರಣವಾಗಿದೆ ಎನ್ನಬಹುದು.

Join Nadunudi News WhatsApp Group

Lalu Yadav and Narendra Modi
Image Credit: Theprint

Join Nadunudi News WhatsApp Group