Land Old Documents: ದೇಶದ ಎಲ್ಲಾ ರೈತರಿಗೆ ಗುಡ್ ನ್ಯೂಸ್, ಇನ್ಮುಂದೆ ಮೊಬೈಲ್ ನಲ್ಲೆ ಸಿಗಲಿದೆ ಈ ದಾಖಲೆಗಳು

ಈ ರೀತಿಯಾಗಿ ಮೊಬೈಲ್ ಮೂಲಕ ನಿಮ್ಮ ಜಮೀನಿನ ಹಳೆಯ ದಾಖಲೆಯನ್ನು ಪಡೆದುಕೊಳ್ಳಿ

Land Old Documents In Mobile: ಸದ್ಯ ಸ್ಮಾರ್ಟ್ ಫೋನ್ ಮಾನವನ ಅವಿಭಾಜ್ಯ ಅಂಗ ಆಗಿದೆ ಅಂದರೆ ತಪ್ಪಾಗಲಾರದು. ಇತ್ತೀಚಿನ ದಿನಗಳಲ್ಲಿ ಎಲ್ಲರ ಕೈಯಲ್ಲೂ Smart Phone ಇದ್ದೆ ಇರುತ್ತದೆ. ಸದ್ಯ ಈಗಂತೂ ಎಲ್ಲವು ಡಿಜಿಟಲೀಕರಣಗೊಳ್ಳುತ್ತಿದೆ. ಮೊಬೈಲ್ ಬಳಕೆಯು ಜನರಿಗೆ ಹೆಚ್ಚು ಉಪಯೋಗಕಾರಿಯಾಗಿದೆ.

Mobile ಇದ್ದರೆ ಸಾಕು ಕುಳಿತಲ್ಲಿಯೇ ಸಾಕಷ್ಟು ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳಬಹುದು. ಇದೀಗ ಕೃಷಿಗೆ ಸಂಬಂಧಪಟ್ಟ ಕೆಲಸಗಳಲ್ಲಿ ಕೂಡ ಸ್ಮಾರ್ಟ್ ಫೋನ್ ಅನ್ನು ಬಳಕೆ ಮಾಡುತ್ತಿದ್ದಾರೆ. ಹೌದು ಇದೀಗ ನೀವು ನಿಮ್ಮ ಜಮೀನಿನ ಹಳೆಯ ದಾಖಲೆಯನ್ನು ಫೋನ್ ಮೂಲಕ ಪಡೆದುಕೊಳ್ಳಬಹುದಾಗಿದೆ. ಅದು ಹೇಗೆಂದು ನಾವೀಗ ತಿಳಿದುಕೊಳ್ಳೋಣ.

Krushi Old Documents In Mobile
Image Credit: Futurefarming

ಇನ್ನುಮುಂದೆ ರೈತರು ಮೊಬೈಲ್ ಮೂಲಕ ಭೂ ದಾಖಲೆಯನ್ನು ಪಡೆದುಕೊಳ್ಳಬಹುದು
ರೈತರಿಗೆ ಕೃಷಿ ಭೂಮಿ ದಾಖಲೆಗಳು ಬಹಳ ಅಗತ್ಯವಾಗಿರುತ್ತದೆ. ಕೃಷಿ ಸಾಲ ಹಾಗೂ ಇನ್ನಿತರ ಕೆಲಸಗಳಿಗೆ ಜಮೀನಿನ ದಾಖಲೆಗಳು ಬಹಳ ಅಗತ್ಯವಾಗಿರುತ್ತದೆ. ಕೆಲ ಸಮಯದಲ್ಲಿ ದಾಖಲೆಗಳು ಲಭ್ಯವಿರುವುದಿಲ್ಲ ಅಥವಾ ದಾಖಲೆಗಳು ಕಳೆದು ಹೋಗಿರಬಹುದು.

ಈ ಸಂದರ್ಭದಲ್ಲಿ ಜಮೀನಿನ ದಾಖಲೆಗಳು ಬೇಕು ಎಂದಾಗ, ತಾಲೂಕು ಕಚೇರಿಗಳಿಗೆ ಹೋಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಇದಕ್ಕಾಗಿ ಹಲವು ದಿನ ಅಲೆದಾಡಬೇಕಾಗುತ್ತದೆ. ಈ ಎಲ್ಲಾ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ರೈತರಿಗಾಗಿ ಹೊಸ ಅಪ್ಲಿಕೇಶನ್ ಅನ್ನು ಬಿಡುಗಡೆಮಾಡಿದೆ. ಇದರ ಮೂಲಕ ರೈತರು ತಮ್ಮ ಹಳೆಯ ಜಮೀನಿನ ದಾಖಲೆಯ ಪ್ರಿಂಟ್ ಔಟ್ ಅನ್ನು ಪಡೆದುಕೊಳ್ಳಬಹುದಾಗಿದೆ.

ಈ ರೀತಿಯಾಗಿ ಮೊಬೈಲ್ ಮೂಲಕ ನಿಮ್ಮ ಜಮೀನಿನ ಹಳೆಯ ದಾಖಲೆಯನ್ನು ಪಡೆದುಕೊಳ್ಳಿ
*ಮೊದಲು ರಾಜ್ಯದ ಕಂದಾಯ ಇಲಾಖೆಯ ಅಧಿಕೃತ ವೆಬ್ ಸೈಟ್ landrecords.karnataka.gov.in ಗೆ ಭೇಟಿ ನೀಡಬೇಕು.

Join Nadunudi News WhatsApp Group

*ಹೋಂ ಪೇಜ್ ಗೆ ಬಂದು View RTC and MR ಮೇಲೆ ಕ್ಲಿಕ್ ಮಾಡಬೇಕು.

* ನಂತರ view current year RTC, old year RTC and MR, Mutation Status ಅನ್ನು ಆಯ್ಕೆ ಮಾಡಬೇಕು.

*ನಂತರ ಹೊಸ ಪೇಜ್ ಓಪನ್ ಆಗುತ್ತದೆ, ಅಲ್ಲಿ RTC, Mutation Status, Khata Extract ಹಾಗೂ Survey documents ಎಂದು ಆಯ್ಕೆ ಸಿಗುತ್ತದೆ. ಅದರಲ್ಲಿ Survey documents ಅನ್ನು ಸೆಲೆಕ್ಟ್ ಮಾಡಬೇಕು.

Agricultural Land Document
Image Credit: Vikalpsangam

*ಈಗ Karnataka land records Image retrieval system ಎನ್ನುವ ಹೊಸ ಪೇಜ್ ಓಪನ್ ಆಗುತ್ತದೆ.

*ನಂತರ ಫೋನ್ ನಂಬರ್, ಕ್ಯಾಪ್ಚ್ಯಾ ಕೋಡ್ ಹಾಕಿ OTP ಬಂದ ನಂತರ, ಒಟಿಪಿ ನಮೂದಿಸಿ ಲಾಗಿನ್ ಆಗಬೇಕು.

*ಈಗ Select Survey number ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.

*ಅದರಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ವನ್ನು ಸೆಲೆಕ್ಟ್ ಮಾಡಬೇಕು.

*ಈಗ ಸರ್ವೇ ನಂಬರ್ ಹಾಕಿ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು.

*ಇದರಲ್ಲಿ ಮತ್ತೊಂದು ಹೊಸ ಪೇಜ್ ಓಪನ್ ಆಗುತ್ತದೆ. ಅದರಲ್ಲಿ ಹಿಸ್ಸಾ ಸರ್ವೆ ಟಿಪ್ಪಣಿ ಪುಸ್ತಕ, ಮೂಲ ಸರ್ವೇ ಪ್ರತಿ ಪುಸ್ತಕ, ಮೂಲ ಸರ್ವೆ ಟಿಪ್ಪಣಿ ಪುಸ್ತಕ, ಎರಡನೇ ರಿಕ್ಲಾಸಿಫಿಕೇಶನ್ ಪ್ರತಿ ಪುಸ್ತಕ, ರೀ ಸರ್ವೆ ಟಿಪ್ಪಣಿ ಪುಸ್ತಕ ಹಿಸ್ಸ ಸರ್ವೆ ಪಕ್ಕ ಪುಸ್ತಕ, ಎರಡನೇ ರಿಕ್ಲಾಸಿಫಿಕೇಶನ್ ಟಿಪ್ಪಣಿ ಪುಸ್ತಕ, ಎಂದು ಸಾಕಷ್ಟು ದಾಖಲೆಗಳ ಆಯ್ಕೆ ಸಿಗುತ್ತದೆ. ಅದರಲ್ಲಿ ನಿಮಗೆ ಬೇಕಾದ ದಾಖಲೆ ಮೇಲೆ ಕ್ಲಿಕ್ ಮಾಡಿ, View Document ಮೇಲೆ ಕ್ಲಿಕ್ ಮಾಡಿ, ಪ್ರಿಂಟ್ ಔಟ್ ತೆಗೆದುಕೊಳ್ಳಬಹುದು.

download old property record online by mobile
Image Credit: Original Source

Join Nadunudi News WhatsApp Group