Ads By Google

Land Survey: ಈಗ ನಿಮ್ಮ ಮೊಬೈಲ್ ಮೂಲಕ ನಿಮ್ಮ ಜಾಗದ ಅಳತೆ ಮಾಡಿ, ಸರ್ಕಾರದ ಹೊಸ ಸೇವೆ ಆರಂಭ.

Measure Your Land Area Using App

Image Credit: Original Source

Ads By Google

Measure Your Land Area Using App: ಇಂದಿನ ಯುಗದಲ್ಲಿ Smart Phone ಅನ್ನು ವಯಸ್ಸಾದವರಿಂದ ಹಿಡಿದು ಚಿಕ್ಕ ಮಕ್ಕಳ ತನಕ ಎಲ್ಲರೂ Smart Phone ಅನ್ನು ಬಳಕೆ ಮಾಡುತ್ತಾರೆ. ಹಾಗೆ ನೀವು Smart Phone ಸಹಾಯದಿಂದ ಹೆಚ್ಚಿನ ಕೆಲಸವನ್ನು ಮಾಡಿಕೊಳ್ಳಬಹುದಾಗಿದೆ.
ರೈತರು ಅಥವಾ ಇತರರು ಭೂಮಿ ಅಥವಾ ಮನೆಯ ಪ್ಲಾಟ್ ಅನ್ನು ಅಳೆಯಲು ಲೆಸ್ ಅಥವಾ ಹಗ್ಗವನ್ನುಬಳಕೆ ಮಾಡುತ್ತಾರೆ.

ಲೆಸ್ ಅಥವಾ ಹಗ್ಗದ ಸಹಾಯದಿಂದ ಭೂಮಿಯನ್ನು ಅಳೆಯಲು ಅನೇಕ ಜನರು ಬೇಕಾಗುತ್ತಾರೆ. ಇದಕ್ಕಾಗಿ ಜನರು ಹೆಚ್ಚಿನ ಹಣವನ್ನು ಖರ್ಚು ಮಾಡುತ್ತಾರೆ. ಆದರೆ ಈಗ ನೀವು ಬಯಸಿದರೆ ನಿಮ್ಮ ಮೊಬೈಲ್ ಮೂಲಕವೇ ನಿಮ್ಮ Land Survey ಮಾಡಬಹುದಾಗಿದೆ. ಇದರ ಬಗ್ಗೆ ನಾವೀಗ ಒಂದಿಷ್ಟು ಮಾಹಿತಿ ತಿಳಿದುಕೊಳ್ಳೋಣ.

Image Credit: Khetkhajana

ಇನ್ನುಮುಂದೆ ಮೊಬೈಲ್ ಮೂಲಕ ಭೂಮಿಯನ್ನು ಅಳತೆ ಮಾಡಬಹುದಾಗಿದೆ
ಹೌದು ಇದೀಗ ನೀವು ಬಳಕೆ ಮಾಡುವ Smart Phone ಮೂಲಕವೇ ನಿಮ್ಮ Land Survey ಮಾಡಬಹುದಾಗಿದೆ. ಇದಕ್ಕಾಗಿ ನೀವು ನಿಮ್ಮ ಮೊಬೈಲ್ ನಲ್ಲಿ ಒಂದು Application Download ಮಾಡಿಕೊಳ್ಳಬೇಕಾಗುತ್ತದೆ. ಈ Application ಮೂಲಕ ನೀವು ನಿಮ್ಮ ಮನೆಯ ಪ್ಲಾಟ್ ಅನ್ನು ಸುಲಭವಾಗಿ ಅಳತೆ ಮಾಡಬಹುದಾಗಿದೆ. ಹಾಗಾದರೆ ನಾವೀಗ ಆ ಅಪ್ಲಿಕೇಶನ್ ಯಾವುದು ಎನ್ನುವ ಬಗ್ಗೆ ತಿಳಿಯೋಣ.

ಪ್ರದೇಶಗಳನ್ನು ಅಳೆಯುವ ಸ್ಮಾರ್ಟ್ ಸಾಧನ
ನೀವು ಸ್ಮಾರ್ಟ್ ಫೋನ್ ಅನ್ನು ಹೊಂದಿದ್ದರೆ, ಅದರ ಸಹಾಯದಿಂದ ನಿಮ್ಮ ಭೂಮಿಯನ್ನು ಅಳತೆ ಮಾಡಲು ಬಯಸಿದರೆ GPS Fields Area Measure ಅಥವಾ GPS Area Calculator ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬೇಕಾಗುತ್ತದೆ. ಇದು ಪ್ರದೇಶಗಳನ್ನು ಅಳೆಯುವ ಅತ್ಯುತ್ತಮ ಸಾಧನವಾಗಿದೆ. ಇದರಿಂದ ಹೇಗೆ Land Survey ಸಾಧ್ಯ ಎಂಬುದನ್ನು ನಾವೀಗ ನೋಡೋಣ.

Image Credit: Appagg

ಮೊಬೈಲ್ ನಲ್ಲಿ ನೆಲವನ್ನು ಅಳೆಯುದು ಹೇಗೆ…?
ಮೊದಲು GPS Fields Area Measure ಅಥವಾ GPS Area Calculator ಅಪ್ಲಿಕೇಶನ್ ಅನ್ನು ಮೊಬೈಲ್ ನಲ್ಲಿ ತೆರೆಯಿರಿ, ನಂತರ ನಿಮಗೆ ಹೊಸ ಪುಟ ಸಿಗುತ್ತದೆ. ಅದರಲ್ಲಿ ನೀವು ಹುಡುಕಾಟದ ಆಯ್ಕೆಯನ್ನು ನೋಡುತ್ತಿರಿ. ಇದರಲ್ಲಿ ನೀವು ಅಳೆಯಲು ಬಯಸುವ ಸ್ಥಳವನ್ನು ಹುಡುಕಬೇಕಾಗುತ್ತದೆ. ಈಗ ನೀವು ಚಿತ್ರದ ಪ್ರಕಾರ ಸಂಖ್ಯೆ 1 ಬಟನ್ ಅನ್ನು ಕ್ಲಿಕ್ ಮಾಡಬೇಕು. ನೀವು ನಂಬರ್ 1 ಬಟನ್ ಗೆ ಹೋದಾಗ ನಿಮಗೆ ಮೂರೂ ಆಯ್ಕೆಗಳು ಸಿಗುತ್ತವೆ. ಆಗ ನೀವು ಸಂಖ್ಯೆ 2 ರ ಆಯ್ಕೆಗೆ ಹೋಗಬೇಕು.

ಈಗ ಮೇಲಿನ ಚಿತ್ರದ ಪ್ರಕಾರ ನೀವು ಅಳೆಯ ಬೇಕಾದ ಸ್ಥಳವನ್ನು ನಿಧಾನವಾಗಿ ಸ್ಪರ್ಶಿಸಿ. ಇದನ್ನು ಮಾಡುದರಿಂದ ನಿಮ್ಮ ಭೂಮಿ ಅಥವಾ ಹೊಲದ ಅಳತೆ ನಿಮಗೆ ಸಿಗುತ್ತದೆ. ಉದಾಹರಣೆಗೆ ನಿಮ್ಮ ಹೊಲ 20×40 ಅಡಿ ಎಂದು ಭಾವಿಸೋಣ. ನಂತರ ನಿಮ್ಮ ಮೊಬೈಲ್ ನಲ್ಲಿ ಸುಮಾರು 205 ಡಿಗ್ರಿ ಗಳನ್ನೂ ನೋಡುತ್ತಿರಿ. ಅದನ್ನು (೦) ಶೂನ್ಯ ಡಿಗ್ರಿ ಬರುವರೆಗೆ ತಿರುಗಿಸಬೇಕಾಗುತ್ತದೆ. ಶೂನ್ಯ ಡಿಗ್ರಿ ಬಂದಾಗ ಅದನ್ನು ನಿಮ್ಮ Smart Phone ನಲ್ಲಿ ಸರಿಯಾದ ದಿಕ್ಕು ಎಂದು ಪರಿಗಣಿಸಲಾಗುತ್ತದೆ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field