Land Purchase: ಭಾರತದಲ್ಲಿ ಒಬ್ಬ ವ್ಯಕ್ತಿ ಎಷ್ಟು ಭೂಮಿ ಖರೀದಿ ಮಾಡಬಹುದು, ಕೇಂದ್ರದಿಂದ ನಿಯಮ ತಿಳಿದುಕೊಳ್ಳಿ.

ಭಾರತದ ಕೆಲವು ರಾಜ್ಯಗಳಲ್ಲಿ ಇಂತಿಷ್ಟು ಭೂಮಿಯನ್ನು ಮಾತ್ರ ಖರೀದಿಸಬಹುದಾಗಿದೆ.

Land Purchase Limit In India: ಭಾರತೀಯ ಜನರು ಉಳಿತಾಯ ಮಾಡುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಇದಕ್ಕಾಗಿ ಹಲವಾರು ಉಳಿತಾಯ ಯೋಜನೆ ಗಳಿವೆ. ದೇಶದಲ್ಲಿ ಉತ್ತಮ ಹೂಡಿಕೆಯ ವಿಧಾನ ಎಂದರೆ ಅದು ಆಸ್ತಿ ಖರೀದಿ ಎನ್ನಬಹದು. ಹಾಗಾಗಿ ಜನರು ಹೆಚ್ಚಾಗಿ ತಮ್ಮ ಬಳಿ ಇರುವ ಹಣವನ್ನು ಆಸ್ತಿ ಖರೀದಿಗೆ ವ್ಯಯಿಸಲು ಬಯಸುತ್ತಾರೆ.

ಭಾರತೀಯ ಕಾನೂನಿನಲ್ಲಿ ಆಸ್ತಿ ಖರೀದಿಗೆ ಕೂಡ ನಿಯಮಗಳನ್ನು ವಿಧಿಸಲಾಗಿದೆ. ಒಬ್ಬ ವ್ಯಕ್ತಿ ಎಷ್ಟು ಭೂಮಿಯ ಮಾಲೀಕತ್ವವನ್ನು ಪಡೆಯಲು ಸಾಧ್ಯ ಎನ್ನುವುದಕ್ಕೆ ಪ್ರತ್ಯೇಕ ನಿಯಮವಿದೆ. ಇದೀಗ ನಾವು ಭಾರತದಲ್ಲಿ ಒಬ್ಬ ವ್ಯಕ್ತಿ ಎಷ್ಟು ಭೂಮಿ ಖರೀದಿ ಮಾಡಬಹುದು ಎನ್ನುವ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಕೊಳ್ಳೋಣ.

Land Purchase Latest Update
Image Credit: Housing

ಭಾರತದಲ್ಲಿ ಭೂ ಖರೀದಿಯ ಮಿತಿ
ಆದಾಯವನ್ನು ಚಿನ್ನದ ಮೇಲೆ ಹೂಡಿಕೆ ಮಾಡುದಕ್ಕಿಂತ ಭೂ ಖರೀದಿಯ ಮೇಲೆ ಮಾಡಿದರೆ ಅದರ ಬೆಲೆ ಮುಂದಿನ ದಿನಗಳಲ್ಲಿ ಹೆಚ್ಚಾಗುತ್ತಾ ಹೋಗುತ್ತದೆ. ಹಾಗಾಗಿ ಜನರು ಭೂಮಿ ಖರೀದಿ ಮಾಡುವ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಾರೆ. ಭಾರತದಲ್ಲಿ ಕೃಷಿ ಭೂಮಿ ಖರೀದಿಯ ಮೇಲೆ ಮಿತಿಯನ್ನು ಅಳವಡಿಸಲಾಗಿದೆ. ಕೃಷಿ ಭೂಮಿಯನ್ನು ಖರೀದಿಸಲು ಗರಿಷ್ಠ ಮಿತಿ ವಿವಿಧ ರಾಜ್ಯಗಳ ಮೇಲೆ ಅವಲಂಬಿತವಾಗಿರುತ್ತದೆ. ಇದೀಗ ಯಾವ ರಾಜ್ಯದಲ್ಲಿ ಭೂ ಖರೀದಿಯ ಮೇಲೆ ಎಷ್ಟು ಮಿತಿಯನ್ನು ಅಳವಡಿಸಲಾಗಿದೆ ಎಂದು ತಿಳಿಯೋಣ.

ಕೆಲವು ರಾಜ್ಯಗಳಲ್ಲಿ ಇಂತಿಷ್ಟು ಭೂಮಿಯನ್ನು ಮಾತ್ರ ಖರೀದಿಸಬಹುದಾಗಿದೆ
*ಕೇರಳದಲ್ಲಿ ಅವಿವಾಹಿತ ವ್ಯಕ್ತಿ 7 .5 ಎಕರೆ ಭೂಮಿಯನ್ನು ಮಾತ್ರ ಖರೀದಿಸಬಹುದಾಗಿದೆ. ಕುಟುಂಬದಲ್ಲಿ 5 ಜನ ಸದಸ್ಯರಿದ್ದರೆ ಅವರು 15 ಎಕರೆ ಭೂಮಿಯನ್ನು ಖರೀದಿಸಲು ಅವಕಾಶವಿದೆ.

*ಮಹಾರಾಷ್ಟ್ರದಲ್ಲಿ ರೈತರು ಮಾತ್ರ ಕೃಷಿ ಭೂಮಿಯನ್ನು ಖರೀದಿಸಲು ಅರ್ಹತೆ ಹೊಂದಿರುತ್ತಾರೆ. ಇಲ್ಲಿ ಒಬ್ಬ ರೈತ ಗರಿಷ್ಟ 54 ಎಕರೆ ಭೂಮಿಯನ್ನು ಮಾತ್ರ ಖರೀದಿಸಬಹುದಾಗಿದೆ.

Join Nadunudi News WhatsApp Group

*ಕರ್ನಾಟಕದ ರೈತರು ಗರಿಷ್ಟ 54 ಎಕರೆ ಭೂಮಿಯನ್ನು ಖರೀದಿಸಬಹುದು.

Land Purchase Limit In India
Image Credit: Deccanherald

*ಪಶ್ಮಿಮ ಬಂಗಾಳದ ಜನರು 24 .5 ಎಕರೆ ಭೂಮಿಯನ್ನು ಖರೀದಿಸಬಹುದು.

*ಹಿಮಾಚಲ ಪ್ರದೇಶದಲ್ಲಿ 32 ಎಕರೆ ಭೂಮಿ ಖರೀದಿಸಬಹುದು.

* ಉತ್ತರ ಪ್ರದೇಶದಲ್ಲಿ ಗರಿಷ್ಠ 12 .5 ಎಕರೆ ಭೂಮಿಯನ್ನು ಮಾತ್ರ ಖರೀದಿಸಬಹುದಾಗಿದೆ.

*ಬಿಹಾರದಲ್ಲಿ 15 ಎಕರೆ ಭೂಮಿಯನ್ನು ಮಾತ್ರ ಖರೀದಿಸಲು ಅವಕಾಶವಿದೆ.

*ಗುಜರಾತ್‌ ನಲ್ಲಿ ಕೃಷಿ ಭೂಮಿಯನ್ನು ಆ ವೃತ್ತಿಯಲ್ಲಿ ತೊಡಗಿರುವವರು ಮಾತ್ರ ಖರೀದಿಸಬಹುದಾಗಿದೆ.

ಇಂತಹ ಜನರು ಕೃಷಿ ಭೂಮಿ ಖರೀದಿಸಲು ಸಾಧ್ಯವಿಲ್ಲ
ಅನಿವಾಸಿ ಭಾರತೀಯರು ಭಾರತದಲ್ಲಿ ಕೃಷಿಯೋಗ್ಯ ಭೂಮಿಯನ್ನು ಖರೀದಿಸುವಂತಿಲ್ಲ. ಅವರು ತೋಟದ ಮನೆ ಅಥವಾ ತೋಟದ ಆಸ್ತಿಯನ್ನು ಖರೀದಿಸಲು ಸಾಧ್ಯವಿಲ್ಲ. ಆದರೆ ಯಾರಾದರೂ ಅವರಿಗೆ ಭೂಮಿಯನ್ನು ಪಿತ್ರಾರ್ಜಿತವಾಗಿ ನೀಡಲುಬಹುದು.

Join Nadunudi News WhatsApp Group