Cheapest Mobile: ಕೇವಲ 6,999 ರೂ ಗೆ ಖರೀದಿಸಿ ದೇಶಿಯ ಮೊಬೈಲ್, ಬಡವರ ಬಂಧುವಾಗಿದೆ ಈ ಅಗ್ಗದ ಮೊಬೈಲ್.
ಅತಿ ಕಡಿಮೆ ಬೆಲೆಗೆ ಬಿಡುಗಡೆಯಾದ ಭಾರತದ ಈ ಸ್ಮಾರ್ಟ್ ಫೋನ್.
Lava Yuva 2 Smart Phone: ದೇಶಿಯ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯಿಂದ ಹಿಡಿದು ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಗಳು ಲಭ್ಯವಿರುತ್ತದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮೊಬೈಲ್ ಕಂಪನಿಗಳು ಹೊಸ ಹೊಸ ಸ್ಮಾರ್ಟ್ ಫೋನ್ ಗಳನ್ನೂ ಬಿಡುಗಡೆ ಮಾಡುತ್ತಲೇ ಇರುತ್ತವೆ.
ಇದೀಗ ಪ್ರಸಿದ್ಧ ಸ್ಮಾರ್ಟ್ ಫೋನ್(Smart Phone) ಕಂಪನಿಯಾದ ಲಾವಾ (Lava) ಅತಿ ಕಡಿಮೆ ಬೆಲೆಗೆ ಒಂದು ಮೊಬೈಲ್ ಅನ್ನು ಬಿಡುಗಡೆ ಮಾಡಿದೆ. ಇದರ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.
ಲಾವಾ ಯುವ 2 ಸ್ಮಾರ್ಟ್ ಫೋನ್
ಭಾರತೀಯ ಮಾರುಕಟ್ಟೆಯಲ್ಲಿ ಲಾವಾ ಯುವ 2 ಸ್ಮಾರ್ಟ್ ಫೋನ್ ಅನ್ನು ಕೇವಲ ಒಂದು ಆಯ್ಕೆಯಲ್ಲಿ ಮಾತ್ರ ಬಿಡುಗಡೆ ಮಾಡಿದೆ. ದೊಡ್ಡ ಬ್ಯಾಟರಿ, ಆಕರ್ಷಕ ಡಿಸ್ ಪ್ಲೇ, ಕ್ಯಾಮರಾ ಮತ್ತು ಬೆಲೆಗೆ ತಕ್ಕಂತೆ ಪ್ರೊಸೆಸರ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಹಾಗಾದರೆ ಈ ಫೋನ್ ನ ಬೆಲೆ ಎಷ್ಟು? ಯಾವೆಲ್ಲ ಫೀಚರ್ಸ್ ಇದೆ ಎನ್ನುವ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.
ಲಾವಾ ಯುವ 2 ಸ್ಮಾರ್ಟ್ ಫೋನ್ ಬೆಲೆ ಹಾಗೂ ಫೀಚರ್ಸ್
ಹೆಚ್ಚಾಗಿ ಬಜೆಟ್ ಬೆಲೆಗೆ ಬಿಡುಗಡೆ ಮಾಡುವ ಕಂಪನಿ ಇದೀಗ ಅತಿ ಕಡಿಮೆ ಬೆಲೆಗೆ ಒಂದು ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಲಾವಾ ಯುವ 2 ಸ್ಮಾರ್ಟ್ ಫೋನ್ 3GB RAM + 64GB ಸ್ಟೋರೇಜ್ ಮಾದರಿಗೆ 6,999 ರೂ. ಗಳನ್ನೂ ನಿಗದಿ ಮಾಡಿದೆ.
ಪ್ರಸ್ತುತ ಭಾರತದಲ್ಲಿ ಲಾವಾ ಇ-ಸ್ಟೋರ್ ಮೂಲಕ ಈ ಸ್ಮಾರ್ಟ್ ಫೋನ್ ಮಾರಾಟ ಕಾಣುತ್ತಿದೆ. ಹಾಗೆ ಈ ಸ್ಮಾರ್ಟ್ ಫೋನ್ ಗ್ಲಾಸ್ ಬ್ಲೂ, ಗ್ಲಾಸ್ ಗ್ರೀನ್, ಮತ್ತು ಗ್ಲಾಸ್ ಲೇವೆಂಡರ್ ಬಣ್ಣಗಳಲ್ಲಿ ಲಭ್ಯವಿದೆ. ಇದರ ಫೀಚರ್ಸ್ ಗಳ ಬಗ್ಗೆ ಹೇಳುವುದಾದರೆ ದುವೆಲ್ ಸಿಮ್ ಸಿಸ್ಟಮ್ ಅನ್ನು ಹೊಂದಿದೆ.
90Hs ರಿಫ್ರೆಶ್ ದರ ಮತ್ತು 269ppi ಪಿಕ್ಸೆಲ್ ಸಾಂದ್ರತೆಯೊಂದಿದೆ 6.51 – ಇಂಚಿನ HD +(720×1600 ಪಿಕ್ಸೆಲ್ ಗಳು) ಡಿಸ್ ಪ್ಲೇ ಅನ್ನು ಹೊಂದಿದೆ. ಸೆಲ್ಫಿ ಶೂಟರ್ ಅನ್ನು ಇರಿಸಲು ಪರದೆಯು ವಾಟರ್ ಡ್ರಾಪ್ ಶೈಲಿಯ ಕಟೌಟ್ ಅನ್ನು ಹೊಂದಿದೆ. ಹೊಸ ಲಾವಾ ಫೋನ್ ಆಕ್ಟಾ -ಕೋರ್ ಯುನಿಸೋಕ್ T606 SoC ನಿಂದ ಚಾಲಿತವಾಗಿದೆ.
ಲಾವಾ ಯುವ 2 ಕ್ಯಾಮರಾ ರಚನೆ
ಲಾವಾ ಯುವ 2 ಸ್ಮಾರ್ಟ್ ಫೋನ್ ಎಲ್ಇಡಿ ಪ್ಲಾಶ್ ನೊಂದಿಗೆ 13 ಮೆಗಾ ಪಿಕ್ಸೆಲ್ ಡುಯೆಲ್ ಕ್ಯಾಮರಾ ಸೆಟಪ್ ಅನ್ನು ಹೊಂದಿದೆ. ಹಾಗೆ ಹಿಂಬದಿಯ ಕ್ಯಾಮರಾ ಪೋರ್ಟ್ರೇಟ್, ಬ್ಯುಟಿ ಮತ್ತು ಸ್ಲೋ ಮೋಷನ್ ಸೇರಿದಂತೆ ಫಿಲ್ಟರ್ ಗಳೊಂದಿಗೆ ಲಭ್ಯವಿದೆ.
ಸೆಲ್ಫಿ ಹಾಗೂ ವಿಡಿಯೋ ಕರೆ ಗಳಿಗಾಗಿ ಮುಂಭಾಗದಲ್ಲಿ 5- ಮೆಗಾ ಪಿಕ್ಸೆಲ್ ಕ್ಯಾಮರಾ ಸಂವೇದಕ ವನ್ನು ಹೊಂದಿದೆ. ಈ ಫೋನ್ 64GB ಯ ಆಂತರಿಕ ಸಂಗ್ರಹಣೆಯೊಂದಿಗೆ ಬರುತ್ತದೆ ಮತ್ತು ಇದನ್ನು ಮೈಕ್ರೋ SD ಕಾರ್ಡ್ ಮೂಲಕ 512GB ವರೆಗೆ ವಿಸ್ತರಿಸಬಹುದು.
ಲಾವಾ ಯುವ 2 ವಿಶೇಷತೆ
ಲಾವಾ ಯುವ 2 ಸ್ಮಾರ್ಟ್ ಫೋನ್ 5G ಬೆಂಬಲವನ್ನು ಪಡೆದಿಲ್ಲ ಹಾಗೆ 4G , ಬ್ಲೂ ಟೂಥ್ 5 , Wi -Fi , 3 .5mm ಆಡಿಯೋ ಜ್ಯಾಕ್ ಮತ್ತು USB ಟೈಪ್ C ಪೋರ್ಟ್ ಸೇರಿವೆ. ಸೈಡ್ ಮೌಂಟೆಡ್ ಪಿಂಗರ್ ಪ್ರಿಂಟ್ ಆಯ್ಕೆ ಯನ್ನು ನೀಡಲಾಗಿದೆ. ಹಾಗೆ ಈ ಸ್ಮಾರ್ಟ್ ಫೋನ್ ಫೇಸ್ ಅನ್ ಲಾಕ್ ವೈಶಿಷ್ಟ್ಯವನ್ನ ಒಳಗೊಂಡಿದೆ.
ಲಾವಾ ಯುವ 2 10W ಚರ್ಗಿನ್ಗ್ ಬೆಂಬಲದೊಂದಿಗೆ 5000 mAh ಬ್ಯಾಟರಿ ಸಾಮರ್ಥ್ಯ ವನ್ನು ಹೊಂದಿದೆ. ಈ ಬ್ಯಾಟರಿಯು 40 ಗಂಟೆಗಳ ಟಾಕ್ ಟೈಮ್, 533 ನಿಮಿಷಗಳ ಯು ಟ್ಯೂಬ್ ಪ್ಲೇ ಬ್ಯಾಕ್ ಸಮಯ ಮತ್ತು ಒಂದೇ ಚಾರ್ಜ್ ನಲ್ಲಿ 600 ಗಂಟೆಗಳ ವರೆಗೆ ಸ್ಟಾಂಡ್ ಬೈ ಸಮಯವನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.