Ads By Google

Lenovo Laptop: ವಿದ್ಯಾರ್ಥಿಗಳಿಗಾಗಿ ಅಗ್ಗದ ಬೆಲೆಗೆ ಲಾಂಚ್ ಆಯಿತು ಲೆನೊವೊ ಲ್ಯಾಪ್ ಟಾಪ್, ಆಕರ್ಷಕ ಫೀಚರ್

Lenovo Legion 9i Laptop price and features

Image Credit: Original Source

Ads By Google

Lenovo Legion 9i Laptop: ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿ ಹಲವಾರು ಜನಪ್ರಿಯ ಕಂಪನಿಗಳು ಲ್ಯಾಪ್ ಟಾಪ್, ಕಂಪ್ಯೂಟರ್ ಮುಂತಾದವುಗಳನ್ನು ಬಿಡುಗಡೆ ಮಾಡುತ್ತಿರುತ್ತವೆ. ಆ ಜನಪ್ರಿಯ ಕಂಪೆನಿಗಳಲ್ಲಿ ಲೆನೋವೋ ಕೂಡ ಒಂದಾಗಿದೆ. ಮಾರುಕಟ್ಟೆಯಲ್ಲಿ ಲೆನೋವೋ ಕಂಪನಿ (Lenovo Company) ಗ್ರಾಹಕರಿಗೆ ಇಷ್ಟವಾಗುವ ರೀತಿಯಲ್ಲಿ ಡಿವೈಸ್ ಗಳನ್ನೂ ಬಿಡುಗಡೆ ಮಾಡುತ್ತಿರುದರಿಂದ ಆ ಕಂಪನಿಯ ಡಿವೈಸ್ ಗಳಿಗೆ ಬಾರಿ ಬೇಡಿಕೆ ಇದೆ.

ಇದೀಗ ಲೆನೋವೋ ಕಂಪನಿ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಹೊಸ ಲ್ಯಾಪ್ ಟಾಪ್ (Laptop) ಒಂದನ್ನು ಮಾರುಕಟ್ಟೆಯಲ್ಲಿ ಪರಿಚಯಿಸಲು ಸಿದ್ಧತೆ ನೆಡೆಸುತ್ತಿದೆ. ಯಾರು ಊಹೆ ಮಾಡಿರದ ಫೀಚರ್ ಗಳೊಂದಿಗೆ ಈ ಲ್ಯಾಪ್ ಟಾಪ್ ಮಾರುಕಟ್ಟೆಗೆ ಕಾಲಿಡಲಿದೆ. ಹಾಗಾದರೆ ನಾವೀಗ ಇದರಲ್ಲಿ ಯಾವ ಯಾವ ಫೀಚರ್ ಅನ್ನು ಅಳವಡಿಸಲಾಗಿದೆ ಎನ್ನುವ ಬಗ್ಗೆ ತಿಳಿದುಕೊಳ್ಳೋಣ.

Image Credit: Lenovo

Lenovo Legion 9i Laptop Display
ಇದೀಗ ಲೆನೋವೋ ಕಂಪನಿ ಭಾರತದಲ್ಲಿ Lenovo Legion 9i ಲ್ಯಾಪ್ ಟಾಪ್ ಅನ್ನು ಪರಿಚಯಿಸಿದೆ. ಈ ಲ್ಯಾಪ್ ಟಾಪ್ 16 ಇಂಚಿನ 3.2K ಮಿನಿ LED ಡಿಸ್ಪ್ಲೇ ಅನ್ನು ಪಡೆದುಕೊಂಡಿದೆ. ಡಿಸ್ಪ್ಲೇ 2000*3200 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಷನ್ ಸಾಮರ್ಥ್ಯದೊಂದಿಗೆ ಬರಲಿದೆ. ಇದರ ಜೊತೆಗೆ 165Hz ವರೆಗಿನ ವೇರಿಯೇಬಲ್ ರಿಫ್ರೆಶ್ ರೇಟ್, 3ms ರೆಸ್ಪಾನ್ಸ್ ಟೈಂ ಅನ್ನು ನೀಡಲಿದೆ. Lenovo Legion 9i ಲ್ಯಾಪ್ ಟಾಪ್ ಡಿಸ್ಪ್ಲೇ 1200nits ಗರಿಷ್ಠ ಬ್ರೈಟ್ನೆಸ್ ಅನ್ನು ಪಡೆದುಕೊಂಡಿದೆ. ಅಲ್ಲದೆ DCI-P3 ಬಣ್ಣದ ಹರವು 100 ಪ್ರತಿಶತ ಕವರೇಜ್ ಅನ್ನು ನೀಡಲಿದ್ದು, HDR 1000 ಪ್ರಮಾಣೀಕರಣವನ್ನು ನೀಡಲಿದೆ.

Lenovo Legion 9i Laptop Other Features
Lenovo Legion 9i ಲ್ಯಾಪ್ ಟಾಪ್ 13 ನೇ ಜಾನ್ ಇಂಟೆಲ್ ಕೋರ್ i9-13980HX CPU ನಲ್ಲಿ ಕಾರ್ಯನಿರ್ವಹಿಸಲಿದೆ, ಮತ್ತು ಇದು ವಿಂಡೋಸ್ 11 ಹೋಂ ನಲ್ಲಿ ರನ್ ಆಗಲಿದೆ. ಈ ಲ್ಯಾಪ್ ಟಾಪ್ Nvidia GeForce RTX 4090 ಹಾಗೂ 16GB GDDR6 ಮೀಸಲಾದ ಗ್ರಾಫಿಕ್ಸ್ ಮೆಮೋರಿಯಿಂದ ಚಾಲಿತವಾಗಿದೆ. ಇದಲ್ಲದೆ 5600MHz ಆವರ್ತನವನ್ನು ಹೊಂದಿರುವ 64GB DDR5 RAM ಸಹ ಹೊಂದಿದೆ. ಈ ಲ್ಯಾಪ್ ಟಾಪ್ ಗರಿಷ್ಠ 2TB SSD M.2 ಸ್ಟೋರೇಜ್ ಕ್ಯಾಪಾಸಿಟಿ ಅನ್ನು ಹೊಂದಿದೆ.

Image Credit: Digitaltrends

RGB ಲೈಟಿಂಗ್ ನೊಂದಿಗೆ ಪೂರ್ಣ ಗಾತ್ರದ ಕೀಬೋರ್ಡ್ ಅನ್ನು ಪಡೆದುಕೊಂಡಿದೆ. Lenovo LA-2 AI ಚಿಪ್ ಅನ್ನು ಸಹ ಅಳವಡಿಸಲಾಗಿದೆ. Lenovo Legion 9i ಲ್ಯಾಪ್ ಟಾಪ್ ರಾಪಿಡ್ ಚಾರ್ಜ್ ತಂತ್ರಜ್ಞಾನದೊಂದಿಗೆ 99.99 Whr ಬ್ಯಾಟರಿ ಅನ್ನು ಪಡೆದುಕೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಯಲ್ಲಿ Wi-Fi 6E, ಬ್ಲೂಟೂತ್ 5.1, ಎರಡು Thunderbolt 4 ಪೋರ್ಟ್‌ಗಳು, USB ಟೈಪ್-A ಪೋರ್ಟ್, RJ45 ಈಥರ್ನೆಟ್ ಮತ್ತು HDMI ಪೋರ್ಟ್ ಸಹ ನೀಡಲಾಗಿದೆ. ಈ ಲ್ಯಾಪ್ ಟಾಪ್ ಫಾಸ್ಟ್ ಚಾರ್ಜಿಂಗ್ ಆಯ್ಕೆಯನ್ನು ಪಡೆದುಕೊಂಡಿದ್ದು 30 ನಿಮಿಷದಲ್ಲಿ 0% ನಿಂದ 70% ವರೆಗೆ ಚಾರ್ಜ್ ಆಗಲಿದೆ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field