LG Smart TV: ಅಗ್ಗದ ಬೆಲೆ 97 ಇಂಚಿನ ಸ್ಮಾರ್ಟ್ ಟಿವಿ ಲಾಂಚ್ ಮಾಡಿದ LG, ದೀಪಾವಳಿ ಹಬ್ಬಕ್ಕೆ ಇಂದೇ ಬುಕ್ ಮಾಡಬಹುದು.
ಸಾಕಷ್ಟು ಫೀಚರ್ ಹೊಂದಿದ LG ಯ ನೂತನ ಸ್ಮಾರ್ಟ್ ಟಿವಿ ಬಿಡುಗಡೆ.
LG G2 97 inch 4K OLED Smart TV: ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಸ್ಮಾರ್ಟ್ ಫೋನ್, ಸ್ಮಾರ್ಟ್ ಟಿವಿ, ಸ್ಮಾರ್ಟ್ ವಾಚ್ ಗಳ ಮೇಲಿನ ಬೇಡಿಕೆ ಹೆಚ್ಚುತ್ತಿದೆ. ಮೊದಲೆಲ್ಲ ಟಿವಿ ಗಳು ಸ್ಟಾಂಡ್ ಮೇಲೆ ಕಾಣುಸುತ್ತಿದ್ದವು ಆದರೆ ಇತ್ತೀಚಿನ ದಿನಗಳಲ್ಲಿ ಟಿವಿ ಗಳು ಗೋಡೆಗಳ ಮೇಲೆ ಕಾಣಸಿಗುತ್ತಿವೆ.
ಮಾರುಕಟ್ಟೆಯಲ್ಲಿ ಸ್ಮಾರ್ಟ್ ಟಿವಿ ಟ್ರೆಂಡ್ ಆಗುತ್ತಿದ್ದಂತೆ ಹೊಸ ಹೊಸ ಸ್ಮಾರ್ಟ್ ಟಿವಿಗಳು ಪರಿಚಯವಾಗುತ್ತಿವೆ. ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಫೀಚರ್ ಹೊಂದಿದ LG Smart TV ಗಳಿದ್ದು ಇದೀಗ ಇವುಗಳ ಸಾಲಿಗೆ ಮತ್ತೊಂದು ಹೊಸ ಸ್ಮಾರ್ಟ್ ಟಿವಿ ಸೇರ್ಪಡೆಯಾಗಿದೆ. ಹಾಗಾದರೆ ನಾವೀಗ ಆ ಸ್ಮಾರ್ಟ್ ಟಿವಿ ಯಾವುದು..? ಬೆಲೆ ಎಷ್ಟು..? ಅದರ ಫೀಚರ್ ಗಳ ಬಗ್ಗೆ ಮಾಹಿತಿ ತಿಳಿಯೋಣ.
LG G2 97 ಇಂಚಿನ 4K OLED ಸ್ಮಾರ್ಟ್ ಟಿವಿ ಡಿಸ್ಪ್ಲೇ
ಇದೀಗ ಲೋಟಸ್ ಎಲೆಕ್ಟ್ರಾನಿಕ್ಸ್ ಇಂದೋರ್ ನಲ್ಲಿ LG G2 97 ಇಂಚಿನ 4K OLED ಸ್ಮಾರ್ಟ್ ಟಿವಿ ಅನ್ನು ಲಾಂಚ್ ಮಾಡಿದೆ. LG G2 ಸ್ಮಾರ್ಟ್ ಟಿವಿ 97 ಇಂಚಿನ 4K OLED ಡಿಸ್ಪ್ಲೇ ಅನ್ನು ಪಡೆದುಕೊಂಡಿದೆ. ಪ್ರೀಮಿಯಂ ವಿಭಾಗದಲ್ಲಿ ಉತ್ತಮ ಆಯ್ಕೆಯಾಗಿದೆ. ಇದರಲ್ಲಿರುವ ಡಿಸ್ಪ್ಲೇ 3840 x 2160 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಷನ್ ಹಾಗೂ 120Hs ರಿಫ್ರೆಶ್ ರೇಟ್ ನಿಮ್ಮ ವೀಕ್ಷಣೆಯ ಅನುಭವವನ್ನು ಇನ್ನು ಉತ್ತಮ ಗೊಳಿಸುತ್ತದೆ.
LG G2 97 ಇಂಚಿನ 4K OLED ಸ್ಮಾರ್ಟ್ ಟಿವಿ ಫೀಚರ್ಸ್
LG G2 97 ಇಂಚಿನ 4K OLED ಸ್ಮಾರ್ಟ್ ಟಿವಿ ಪಡೆದುಕೊಂಡಿರುವ ವೈಶಿಷ್ಟ್ಯಗಳ ಬಗ್ಗೆ ಮಾತನಾದುದಾದರೆ ಈ ಸ್ಮಾರ್ಟ್ ಟಿವಿ ಗುಣಮಟ್ಟದ ಡಿಸ್ಪ್ಲೇ ಹಾಗೂ ಆಡಿಯೋ ಅನ್ನು ಪಡೆದುಕೊಂಡಿದೆ. ಇದು ಅಲ್ಪಾ 9 ಜನ್ 5 AI ಪ್ರೊಫೆಸರ್ ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಇಷ್ಟೇ ಅಲ್ಲದೆ 4K 120 fps ಸಾಮರ್ಥ್ಯ, ಜಿ ಸಿಂಕ್, ಫ್ರೀ ಸಿಂಕ್ ಹೊಂದಾಣಿಕೆ, LLM, VRR ಗೇಮಿಂಗ್ ಫೀಚರ್ ಅನ್ನು ಪಡೆದುಕೊಂಡಿದೆ. ಗೇಮರ್ ಗಳಿಗೆ ಇದು ಉತ್ತಮವಾದ ಆಯ್ಕೆ ಆಗಿದೆ.
LG G2 97 ಇಂಚಿನ 4K OLED ಸ್ಮಾರ್ಟ್ ಟಿವಿ ಬೆಲೆ
ಸದ್ಯ LG G2 97 ಇಂಚಿನ 4K OLED ಸ್ಮಾರ್ಟ್ ಟಿವಿಯ ಬೆಲೆಯನ್ನು ಘೋಷಣೆ ಮಾಡಿಲ್ಲ. ಹಾಗೆ ಇದನ್ನು ಲೋಟಸ್ ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಇದನ್ನು ಮಾರಾಟ ಮಾಡಲಾಗುತ್ತಿದೆ.