Aadhaar Shila: 87 ರೂ ಹೂಡಿಕೆ ಮಾಡಿದರೆ ಸಿಗಲಿದೆ 11 ಲಕ್ಷ ರೂ, ದೀಪಾವಳಿ ಹಬ್ಬದಂದು ಈ LIC ಯೋಜನೆಗೆ ಅರ್ಜಿ ಹಾಕಿ.
LIC ಈ ಯೋಜನೆಯಲ್ಲಿ ಸಿಗಲಿದೆ 11 ಲಕ್ಷ ರೂಪಾಯಿ ಲಾಭ.
LIC Aadhaar Shila Policy Investment: ದೇಶದ ಅತಿ ದೊಡ್ಡ ವಿಮಾ ಕಂಪನಿಯಾದ LIC ಒಂದು ರೀತಿಯಲ್ಲಿ ಹೂಡಿಕೆಗೆ ಉತ್ತಮ ಆಯ್ಕೆ ಎನ್ನಬಹುದು. LIC ಜನಸಾಮಾನ್ಯರಿಗಾಗಿ ಅದರಲ್ಲೂ ಮಹಿಳೆಯರಿಗಾಗಿ ಸಾಕಷ್ಟು ವಿಮಾ ಯೋಜನೆಗಳನ್ನು ಪರಿಚಯಿಸಿದೆ. ಕಡಿಮೆ ಹೂಡಿಕೆಯ ಹೆಚ್ಚಿನ ಲಾಭದಾಯಕ ಯೋಜನಗಳು lic ಯಲ್ಲಿ ಸಾಕಷ್ಟಿವಿದೆ.
ಉತ್ತಮ ಆದಾಯ ಹಾಗೂ ಭವಿಷ್ಯದ ಭದ್ರತೆಗಾಗಿ LIC ಯಲ್ಲಿನ ಹೂಡಿಕೆ ಉತ್ತಮ ಎನ್ನಬಹುದು. ನೀವು ಹೂಡಿಕೆ ಮಾಡಲು ಯೋಜನೆಯನ್ನು ಹೂಡಿಕುತ್ತಿದ್ದರೆ ಈ ಮಾಹಿತಿ ನಿಮಗೆ ಉಪಯುಕ್ತವಾಗಲಿದೆ. ಇದೀಗ ಭಾರತೀಯ ಜೀವ ವಿಮಾ ಯೋಜನೆಯು ಮಹಿಳೆಯರಿಗಾಗಿ ಹೊಸ ಯೋಜನೆಯನ್ನು ಬಿಡುಗಡೆ ಮಾಡಿದ್ದು ಮಹಿಳೆಯರು ಈ ಯೋಜನೆಯ ಲಾಭ ಪಡೆಯಬಹುದಾಗಿದೆ.
LIC Aadhaar Shila Policy
ದೀರ್ಘವದಿಯ ಹಣವನ್ನು ಉಳಿಸಲು ಈ LIC Aadhaar Shila ಯೋಜನೆ ಸಹಾಯವಾಗಲಿದೆ. 8 ರಿಂದ 55 ವರ್ಷದ ಮಹಿಳೆಯರು ಈ LIC Aadhaar shila ಯೋಜನೆಯ ಲಾಭವನ್ನು ಪಡೆಯಬಹುದು. ಈ ಯೋಜನೆಯು 10 ರಿಂದ 20 ವರ್ಷದ ಅವಧಿಯನ್ನು ಹೊಂದಿದೆ. ಈ LIC ಯೋಜನೆಯ ಮುಕ್ತಾಯದ ವರ್ಷವೂ 70 ವರ್ಷವಾಗಿರುತ್ತದೆ. ಮಹಿಳೆಯರು 15 ನೇ ವಯಸ್ಸಿನಲ್ಲಿ 87 ರೂಪಾಯಿ ಹೂಡಿಕೆ ಮಾಡಲು ಆರಂಭ ಮಾಡಿದರೆ ವಾರ್ಷಿಕವಾಗಿ 31,755 ರೂಪಾಯಿ ಉಳಿತಾಯ ಮಾಡಬಹುದು.
87 ರೂ ಹೂಡಿಕೆ ಮಾಡಿದರೆ ಸಿಗಲಿದೆ 11 ಲಕ್ಷ ರೂ.
ಈ ಯೋಜನೆಯಡಿಯಲ್ಲಿ ಹತ್ತು ವರ್ಷಗಳ ಕಾಲ 3,17,550 ರೂ ಹೂಡಿಕೆ ಮಾಡಿದರೆ ಸುಮಾರು 11 ಲಕ್ಷದ ತನಕ ಲಾಭವನ್ನ ಪಡೆದುಕೊಳ್ಳಬಹುದು. ಯೋಜನೆಯ ಮುಕ್ತಾಯದ ಹಂತದಲ್ಲಿ 11 ಲಕ್ಷವನ್ನು ಪಡೆಯಬಹುದು. ಇನ್ನು ಕಂತುಗಳನ್ನ ವಾರ್ಷಿಕ, ತ್ರೈಮಾಸಿಕ ಅಥವಾ ಆರು ತಿಂಗಳಿಗೆ ಒಮ್ಮೆ ಕಟ್ಟುವ ಆಯ್ಕೆ ಕೂಡ ಇರುತ್ತದೆ.
ಈ ಯೋಜನೆಯಲ್ಲಿ ಕನಿಷ್ಠ ಹೂಡಿಕೆಯ ಮೊತ್ತ 75 ಸಾವಿರ ರೂ. ಹಾಗೂ ಗರಿಷ್ಟ 3 ಲಕ್ಷ ಹೂಡಿಕೆ ಮಾಡಬಹುದು. ಮಹಿಳೆಯರಿಗೆ ಈ ಎಲ್ ಐಸಿ ಯೋಜನೆಯು ಉತ್ತಮ ಆದಾಯವನ್ನು ನೀಡುವ ಯೋಜನೆಯಾಗಿದೆ. ನೀವು ಈ ಆಧಾರ್ ಶೀಲಾ ಯೋಜನೆಗೆ ಇನ್ನು ಅರ್ಜಿ ಸಲ್ಲಿಸದಿದ್ದರೆ ಈ ಕೊಡಲೇ ಅರ್ಜಿ ಸಲ್ಲಿಸುವ ಮೂಲಕ ಯೋಜನೆಯ ಲಾಭವನ್ನು ಪಡೆಯಬಹುದು.
ಕೇವಲ 87 ರೂ ಪ್ರತಿನಿತ್ಯ ಹೂಡಿಕೆಯಲ್ಲಿ 11 ಲಕ್ಷ ಲಾಭವನ್ನು ಪಡೆಯುವ ಮೂಲಕ ನೀವು ನಿಮ್ಮ ಭವಿಷ್ಯಕ್ಕೆ ಆರ್ಥಿಕ ಭದ್ರತೆಯನ್ನು ನೀಡಬಹುದು. ಇನ್ನು ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ನೀವು ಹತ್ತಿರ LIC ಕಚೇರಿ ಅಥವಾ ಲೈಕ್ ಏಜೆಂಟ್ ಗಳನ್ನ ಸಂಪರ್ಕ ಮಾಡಬಹುದಾಗಿದೆ.