LIC Policy: ಕೇವಲ 50 ರೂ ಹೂಡಿಕೆ ಮಾಡಿದರೆ ನಿಮಗೇ ಸಿಗಲಿದೆ 6 ಲಕ್ಷ ರೂ, LIC ಯೋಜನೆಗೆ ಅರ್ಜಿ ಹಾಕುತ್ತಿರುವ ಜನರು.
ಎಲ್ ಐಸಿ ಆಧಾರ್ ಶೀಲಾ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಹೂಡಿಕೆದಾರರಾಗಿ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.
LIC Aadhaar Shila Policy: LIC ಜನಸಾಮಾನ್ಯರಿಗಾಗಿ ವಿವಿಧ ರೀತಿಯ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಸಣ್ಣ ಮಕ್ಕಳಿಂದ ಹಿಡಿದು ನಿವೃತ್ತಿಯ ಪಿಂಚಣಿಯನ್ನು ಸಹ ನೀಡಲು ಭಾರತೀಯ ಜೀವ ವಿಮೆ ವಿವಿಧ ರೀತಿಯ ಯೋಜನೆಯನ್ನು ಪರಿಚಯಿಸುತ್ತದೆ. ಇದೀಗ ನೀವು ವಿಮಾ ಪಾಲಿಸಿಯನ್ನು ಮಾಡಲು ಬಯಸಿದರೆ ಕಡಿಮೆ ಪ್ರೀಮಿಯಂ ನೊಂದಿಗೆ ಹೆಚ್ಚಿನ ಪ್ರಯೋಜನವನ್ನು ಪಡೆಯಲು ಎಲ್ ಐಸಿ ನಿಮಗೆ ಹೊಸ ಯೋಜನೆ ಪರಿಚಯಿಸಿದೆ.
ಎಲ್ ಐಸಿ ಯೋಜನೆಯಲ್ಲಿನ ಹೂಡಿಕೆಯು ಮಧ್ಯಮ ವರ್ಗದವರಿಗೆ ಸಹಾಯವಾಗುತ್ತದೆ. ಇನ್ನು ಎಲ್ ಐಸಿ ಹೂಡಿಕೆಯು ಕಡಿಮೆ ಬಡ್ಡಿದರದಲ್ಲಿ ಹೆಚ್ಚಿನ ಲಾಭವನ್ನು ನೀಡುತ್ತದೆ. ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದಲ್ಲಿ ಲಭ್ಯವಿರುವ ಎಲ್ಲ ಯೋಜನೆಯು ಹೆಚ್ಚಿನ ಸುರಕ್ಷತೆಯನ್ನು ನೀಡುತ್ತದೆ. ಎಲ್ ಐಸಿ ಈ ಯೋಜನೆಯು ಮಹಿಳೆಯರಿಗೆ ಆರ್ಥಿಕ ನೆರವನ್ನು ನೀಡಲು ಸಹಾಯವಾಗುತ್ತದೆ.
ಎಲ್ ಐಸಿ ಆಧಾರ್ ಶೀಲಾ ಯೋಜನೆ (LIC Aadhaar Shila Policy)
ಎಲ್ ಐಸಿಯಲ್ಲಿ ಈಗಾಗಲೇ ಸಾಕಷ್ಟು ಯೋಜನೆಗಳಿವೆ. ಎಲ್ ಐಸಿ ಯೋಜನೆಯು ಹೆಚ್ಚಾಗಿ ಮಹಿಳೆಯರಿಗೆ ಅನುಕೂಲವಾಗುತ್ತದೆ. ಮಹಿಳೆಯರಿಗಾಗಿ ಎಲ್ ಐಸಿ ವಿವಿದಿ ಯೋಜನೆಯನ್ನು ಪರಿಚಯಿಸುತ್ತದೆ. ಈಗಾಗಲೇ ಎಲ್ ಐಸಿಯಲ್ಲಿ ಮಹಿಳೆಯರಿಗಾಗಿ ಸಾಕಷ್ಟು ಯೋಜನೆಗಳಲ್ಲಿ ಅದರಲ್ಲಿ ಎಲ್ ಐಸಿ ಆಧಾರ್ ಶೀಲಾ ಯೋಜನೆ ಕೂಡ ಸೇರಿಕೊಂಡಿದೆ.
ಯೋಜನೆಗೆ ಯಾರು ಅರ್ಹರು
ನೀವು ಈ ಎಲ್ ಐಸಿ ಆಧಾರ್ ಶೀಲಾ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಹೂಡಿಕೆದಾರರಾಗಿ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು. ದೀರ್ಘವದಿಯ ಹಣವನ್ನು ಉಳಿಸಲು ಈ ಎಲ್ ಐಸಿ ಆಧಾರ್ ಶೀಲಾ ಯೋಜನೆ ಸಹಾಯವಾಗಲಿದೆ. 8 ರಿಂದ 55 ವರ್ಷದ ಮಹಿಳೆಯರು ಈ ಎಲ್ ಐಸಿ ಆಧಾರ್ ಶೀಲಾ ಯೋಜನೆಯ ಲಾಭವನ್ನು ಪಡೆಯಬಹುದು. ಈ ಯೋಜನೆಯು 10 ರಿಂದ 20 ವರ್ಷದ ಅವಧಿಯನ್ನು ಹೊಂದಿದೆ. ಈ ಎಲ್ ಐಸಿ ಯೋಜನೆಯ ಮುಕ್ತಾಯದ ವರ್ಷವೂ 70 ವರ್ಷವಾಗಿರುತ್ತದೆ.
ಕೇವಲ 50 ರೂ ಹೂಡಿಕೆ ಮಾಡಿದರೆ ನಿಮಗೇ ಸಿಗಲಿದೆ 6 ಲಕ್ಷ ರೂ
ಈ ಯೋಜನೆಯಲ್ಲಿ ಕನಿಷ್ಠ ಊಡಿಕೆ 75 ಸಾವಿರ ರೂ. ಹಾಗು ಗರಿಷ್ಟ 3 ಲಕ್ಷ ರೂ. ಆಗಿದೆ. ಇನ್ನು ನೀವು 3 ಲಕ್ಷ ವಿಮ ಮೊತ್ತಕ್ಕೆ ಪಾಲಿಸಿ ಆಯ್ಕೆ ಮಾಡಿದರೆ, 30 ವರ್ಷ ವಯಸ್ಸಿನವರಾಗಿದ್ದರೆ ನೀವು ತಿಂಗಳಿಗೆ 900 ರೂ. ಪಾವತಿಸಬೇಕಾಗುತ್ತದೆ. ಪ್ರತಿ ದಿನ 30 ರೂ. ಹೂಡಿಕೆ ಮಾಡಿದರೆ ನೀವು ಮೆಚ್ಯುರಿಟಿ ಅವಧಿಯ ನಂತರ 3 ಲಕ್ಷ ಹಣ ಪಡೆಯಬಹುದು. ಇನ್ನು ನೀವು ಪ್ರತಿ ದಿನ 50 ರೂ. ಹೂಡಿಕೆ ಮಾಡಿದರೆ, ಮಾಸಿಕ 1500 ರೂ. ಪಾವತಿಸಬೇಕಾಗುತ್ತದೆ. ನೀವು ಮೆಚ್ಯುರಿಟಿ ಅವಧಿಯ ನಂತರ 6 ಲಕ್ಷ ಹಣ ಪಡೆಯಬಹುದು.