Aadhaar Shila: ಕೇವಲ 87 ರೂಪಾಯಿ ಹೂಡಿಕೆಯಲ್ಲಿ ಸಿಗಲಿದೆ 11 ಲಕ್ಷ, ಮಹಿಳೆಯರಿಗಾಗಿ ಬಂತು ಹೊಸ ಯೋಜನೆ.
LIC ಯ ಈ ಯೋಜನೆಯಲ್ಲಿ ಕಡಿಮೆ ಹೂಡಿಕೆ ಮಾಡುವ ಮೂಲಕ ಪಡೆಯಿರಿ ಹೆಚ್ಚಿನ ಲಾಭ.
LIC Aadhaar Shila Policy: LIC ಜನಸಾಮಾನ್ಯರಿಗಾಗಿ ವಿವಿಧ ರೀತಿಯ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಸಣ್ಣ ಮಕ್ಕಳಿಂದ ಹಿಡಿದು ನಿವೃತ್ತಿಯ ಪಿಂಚಣಿಯನ್ನು ಸಹ ನೀಡಲು ಭಾರತೀಯ ಜೀವ ವಿಮೆ ವಿವಿಧ ರೀತಿಯ ಯೋಜನೆಯನ್ನು ಪರಿಚಯಿಸುತ್ತದೆ.
ಇದೀಗ ನೀವು ವಿಮಾ ಪಾಲಿಸಿಯನ್ನು ಮಾಡಲು ಬಯಸಿದರೆ ಕಡಿಮೆ ಪ್ರೀಮಿಯಂ ನೊಂದಿಗೆ ಹೆಚ್ಚಿನ ಪ್ರಯೋಜನವನ್ನು ಪಡೆಯಲು ಎಲ್ ಐಸಿ ನಿಮಗೆ ಹೊಸ ಯೋಜನೆ ಪರಿಚಯಿಸಿದೆ. ಎಲ್ ಐಸಿ ಯೋಜನೆಯಲ್ಲಿನ ಹೂಡಿಕೆಯು ಮಾಧ್ಯಮ ವರ್ಗದವರಿಗೆ ಸಹಾಯವಾಗುತ್ತದೆ.
ಇನ್ನು ಎಲ್ ಐಸಿ ಹೂಡಿಕೆಯು ಕಡಿಮೆ ಬಡ್ಡಿದರದಲ್ಲಿ ಹೆಚ್ಚಿನ ಲಾಭವನ್ನು ನೀಡುತ್ತದ್ಫ್. ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದಲ್ಲಿ ಲಭ್ಯವಿರುವ ಎಲ್ಲ ಯೋಜನೆಯು ಹೆಚ್ಚಿನ ಸುರಕ್ಷತೆಯನ್ನು ನೀಡುತ್ತದೆ.
ಎಲ್ ಐಸಿ ಆಧಾರ್ ಶೀಲಾ ಯೋಜನೆ (LIC Aadhaar Shila Policy)
ಎಲ್ ಐಸಿಯಲ್ಲಿ ಈಗಾಗಲೇ ಸಾಕಷ್ಟು ಯೋಜನೆಗಳಿವೆ. ಎಲ್ ಐಸಿ ಯೋಜನೆಯು ಹೆಚ್ಚಾಗಿ ಮಹಿಳೆಯರಿಗೆ ಅನುಕೂಲವಾಗುತ್ತದೆ. ಮಹಿಳೆಯರಿಗಾಗಿ ಎಲ್ ಐಸಿ ವಿವಿದಿ ಯೋಜನೆಯನ್ನು ಪರಿಚಯಿಸುತ್ತದೆ. ಈಗಾಗಲೇ ಎಲ್ ಐಸಿಯಲ್ಲಿ ಮಹಿಳೆಯರಿಗಾಗಿ ಸಾಕಷ್ಟು ಯೋಜನೆಗಳಲ್ಲಿ ಅದರಲ್ಲಿ ಎಲ್ ಐಸಿ ಆಧಾರ್ ಶೀಲಾ ಯೋಜನೆ ಕೂಡ ಸೇರಿಕೊಂಡಿದೆ.
ಈ ಯೋಜನೆಯು ಮಹಿಳೆಯರಿಗೆ ಆರ್ಥಿಕ ನೆರವನ್ನು ನೀಡಲು ಸಹಾಯವಾಗುತ್ತದೆ. ನೀವು ಈ ಎಲ್ ಐಸಿ ಆಧಾರ್ ಶೀಲಾ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಹೂಡಿಕೆದಾರರಾಗಿ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು. ನೀವು ಪ್ರತಿನಿತ್ಯ 87 ರೂಪಾಯಿ ಹೂಡಿಕೆ ಮಾಡುವುದರಿಂದ 11 ಲಕ್ಷದಷ್ಟು ಲಾಭವನ್ನು ಪಡೆಯಬಹುದು.
ಕೇವಲ 87 ರೂಪಾಯಿ ಹೂಡಿಕೆಯಲ್ಲಿ ಸಿಗಲಿದೆ 11 ಲಕ್ಷ
ದೀರ್ಘವದಿಯ ಹಣವನ್ನು ಉಳಿಸಲು ಈ ಎಲ್ ಐಸಿ ಆಧಾರ್ ಶೀಲಾ ಯೋಜನೆ ಸಹಾಯವಾಗಲಿದೆ. 8 ರಿಂದ 55 ವರ್ಷದ ಮಹಿಳೆಯರು ಈ ಎಲ್ ಐಸಿ ಆಧಾರ್ ಶೀಲಾ ಯೋಜನೆಯ ಲಾಭವನ್ನು ಪಡೆಯಬಹುದು. ಈ ಯೋಜನೆಯು 10 ರಿಂದ 20 ವರ್ಷದ ಅವಧಿಯನ್ನು ಹೊಂದಿದೆ. ಈ ಎಲ್ ಐಸಿ ಯೋಜನೆಯ ಮುಕ್ತಾಯದ ವರ್ಷವೂ 70 ವರ್ಷವಾಗಿರುತ್ತದೆ.
ಮಹಿಳೆಯರು 15 ನೇ ವಯಸ್ಸಿನಲ್ಲಿ 87 ರೂಪಾಯಿ ಹೂಡಿಕೆ ಮಾಡಲು ಆರಂಭ ಮಾಡಿದರೆ ವಾರ್ಷಿಕವಾಗಿ 31,755 ರೂಪಾಯಿ ಉಳಿತಾಯ ಮಾಡಬಹುದು. ಈ ಯೋಜನೆಯಡಿಯಲ್ಲಿ ಹತ್ತು ವರ್ಷಗಳ ಕಾಲ ಹೂಡಿಕೆ ಮಾಡಿದರೆ 3,17,550 ಮೊತ್ತವನ್ನು ಪಡೆಯಬಹುದು. ಯೋಜನೆಯ ಮುಕ್ತಾಯದ ಹಂತದಲ್ಲಿ 11 ಲಕ್ಷವನ್ನು ಪಡೆಯಬಹುದು.
ಇನ್ನು ಕಂತುಗಳನ್ನ ವಾರ್ಷಿಕ, ತ್ರೈಮಾಸಿಕ ಅಥವಾ ಆರು ತಿಂಗಳಿಗೆ ಒಮ್ಮೆ ಕಟ್ಟುವ ಆಯ್ಕೆ ಕೂಡ ಇರುತ್ತದೆ. ಈ ಯೋಜನೆಯಲ್ಲಿ ಕನಿಷ್ಠ ಹೂಡಿಕೆಯ ಮೊತ್ತ 75 ಸಾವಿರ ರೂ. ಹಾಗೂ ಗರಿಷ್ಟ 3 ಲಕ್ಷ ಹೂಡಿಕೆ ಮಾಡಬಹುದು. ಮಹಿಳೆಯರಿಗೆ ಈ ಎಲ್ ಐಸಿ ಯೋಜನೆಯು ಉತ್ತಮ ಆದಾಯವನ್ನು ನೀಡುವ ಯೋಜನೆಯಾಗಿದೆ. ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಇಂದೇ ಹತ್ತಿರದ LIC ಕೇಂದ್ರವನ್ನ ಬೇಟಿಮಾಡಿ.