Aadhaar Shila: 87 ರೂಪಾಯಿ ಹೂಡಿಕೆ ಮಾಡಿದರೆ ಸಿಗಲಿದೆ 11 ಲಕ್ಷ, LIC ಯ ಹೊಸ ಯೋಜನೆಗೆ ಭರ್ಜರಿ ಬೇಡಿಕೆ.

ದಿರ್ಘವದಿಯ ಹಣವನ್ನು ಉಳಿಸಲು ಮಹಿಳೆಯರಿಗಾಗಿ LIC ಯ ಹೊಸ ಯೋಜನೆ

LIC Aadhaar Shila Yojana: ಲೈಫ್ ಇನ್ಶೂರೆನ್ಸ್ ಕೊರ್ಪೊರೇಷನ್ ಆಫ್ ಇಂಡಿಯಾ (LIC ) ಪ್ರಮುಖ ವಿಮಾ ಕಂಪನಿಯು ಉತ್ತಮ ಪಾಲಿಸಿಗಳನ್ನು ನೀಡುತ್ತಿದೆ. ಜನಸಾಮಾನ್ಯರಿಗೆ ಅನುಕೂಲವಾಗಲು ಎಲ್ ಐಸಿ ವಿಮಾ ಯೋಜನೆ ಈಗಾಗಲೇ ಜಾರಿಗೆ ಬಂದಿದೆ. ಇದೀಗ ನೀವು ವಿಮಾ ಪಾಲಿಸಿಯನ್ನು ಮಾಡಲು ಬಯಸಿದರೆ ಕಡಿಮೆ ಪ್ರೀಮಿಯಂ ನೊಂದಿಗೆ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದಾಗಿದೆ.

LIC ಜನಸಾಮಾನ್ಯರಿಗಾಗಿ ಅದರಲ್ಲೂ ಮಹಿಳೆಯರಿಗಾಗಿ ಸಾಕಷ್ಟು ವಿಮಾ ಯೋಜನೆಗಳನ್ನು ಪರಿಚಯಿಸಿದೆ. ಕಡಿಮೆ ಹೂಡಿಕೆಯ ಹೆಚ್ಚಿನ ಲಾಭದಾಯಕ ಯೋಜನಗಳು ಎಲ್ ಐಸಿ ಯಲ್ಲಿ ಸಾಕಷ್ಟಿವಿದೆ. ಇದೀಗ ಭಾರತೀಯ ಜೀವ ವಿಮಾ ಯೋಜನೆಯು ಮಹಿಳೆಯರಿಗಾಗಿ ಹೊಸ ಯೋಜನೆಯನ್ನು ಬಿಡುಗಡೆ ಮಾಡಿದ್ದು ಮಹಿಳೆಯರು ಈ ಯೋಜನೆಯ ಲಾಭ ಪಡೆಯಬಹುದಾಗಿದೆ.

LIC Aadhaar Sheela Scheme for Women
Image Credit: Sugermint

ಮಹಿಳೆಯರಿಗಾಗಿ ಎಲ್ ಐಸಿ ಆಧಾರ್ ಶೀಲಾ ಯೋಜನೆ (LIC Aadhaar Shila Yojana) 
ಭಾರತೀಯ ವಿಮಾ ಕಂಪನಿಯು ಮಹಿಳೆಯರಿಗಾಗಿ ಎಲ್ ಐಸಿ ಆಧಾರ್ ಶೀಲಾ ಯೋಜನೆಯನ್ನು ಬಿಡುಗಡೆ ಮಾಡಿದೆ. ವಿಶೇಷವಾಗಿ ಈ ಯೋಜನೆಯನ್ನು ಮಹಿಳೆಯರಿಗಾಗಿಯೇ ರೂಪಿಸಲಾಗಿದೆ. ಎಲ್ ಐಸಿ ಆಧಾರ್ ಶೀಲಾ ಯೋಜನೆಯು ಕಳೆದ ನಾಲ್ಕು ವರ್ಷಗಳಲ್ಲಿ ಸಾಕಷ್ಟು ಲಾಭವನ್ನು ತಂದು ಕೊಟ್ಟಿದೆ. ಈ ಯೋಜನೆಯು ಉತ್ತಮ ಉಳಿತಾಯದೊಂದಿಗೆ ಸುರಕ್ಷಿತವಾಗಿದೆ. ನೀವು ಪ್ರತಿನಿತ್ಯ 87 ರೂಪಾಯಿ ಹೂಡಿಕೆ ಮಾಡುವುದರಿಂದ 11 ಲಕ್ಷದಷ್ಟು ಲಾಭವನ್ನು ಪಡೆಯಬಹುದು.

87 ರೂಪಾಯಿ ಹೂಡಿಕೆ ಮಾಡಿದರೆ ಸಿಗಲಿದೆ 11 ಲಕ್ಷ
ದೀರ್ಘವದಿಯ ಹಣವನ್ನು ಉಳಿಸಲು ಈ ಎಲ್ ಐಸಿ ಆಧಾರ್ ಶೀಲಾ ಯೋಜನೆ ಸಹಾಯವಾಗಲಿದೆ. 8 ರಿಂದ 55 ವರ್ಷದ ಮಹಿಳೆಯರು ಈ ಎಲ್ ಐಸಿ ಆಧಾರ್ ಶೀಲಾ ಯೋಜನೆಯ ಲಾಭವನ್ನು ಪಡೆಯಬಹುದು. ಈ ಯೋಜನೆಯು 10 ರಿಂದ 20 ವರ್ಷದ ಅವಧಿಯನ್ನು ಹೊಂದಿದೆ. ಈ ಎಲ್ ಐಸಿ ಯೋಜನೆಯ ಮುಕ್ತಾಯದ ವರ್ಷವೂ 70 ವರ್ಷವಾಗಿರುತ್ತದೆ. ಮಹಿಳೆಯರು 15 ನೇ ವಯಸ್ಸಿನಲ್ಲಿ 87 ರೂಪಾಯಿ ಹೂಡಿಕೆ ಮಾಡಲು ಆರಂಭ ಮಾಡಿದರೆ ವಾರ್ಷಿಕವಾಗಿ 31,755 ರೂಪಾಯಿ ಉಳಿತಾಯ ಮಾಡಬಹುದು.

If you invest 87 rupees, you will get 11 lakhs
Image Credit: News18

ಈ ಯೋಜನೆಯಡಿಯಲ್ಲಿ ಹತ್ತು ವರ್ಷಗಳ ಕಾಲ ಹೂಡಿಕೆ ಮಾಡಿದರೆ 3,17,550 ಮೊತ್ತವನ್ನು ಪಡೆಯಬಹುದು. ಯೋಜನೆಯ ಮುಕ್ತಾಯದ ಹಂತದಲ್ಲಿ 11 ಲಕ್ಷವನ್ನು ಪಡೆಯಬಹುದು. ಇನ್ನು ಕಂತುಗಳನ್ನ ವಾರ್ಷಿಕ, ತ್ರೈಮಾಸಿಕ ಅಥವಾ ಆರು ತಿಂಗಳಿಗೆ ಒಮ್ಮೆ ಕಟ್ಟುವ ಆಯ್ಕೆ ಕೂಡ ಇರುತ್ತದೆ. ಈ ಯೋಜನೆಯಲ್ಲಿ ಕನಿಷ್ಠ ಹೂಡಿಕೆಯ ಮೊತ್ತ 75 ಸಾವಿರ ರೂ. ಹಾಗೂ ಗರಿಷ್ಟ 3 ಲಕ್ಷ ಹೂಡಿಕೆ ಮಾಡಬಹುದು.

Join Nadunudi News WhatsApp Group

ಮಹಿಳೆಯರಿಗೆ ಈ ಎಲ್ ಐಸಿ ಯೋಜನೆಯು ಉತ್ತಮ ಆದಾಯವನ್ನು ನೀಡುವ ಯೋಜನೆಯಾಗಿದೆ. ನೀವು ಈ ಆಧಾರ್ ಶೀಲಾ ಯೋಜನೆಗೆ ಇನ್ನು ಅರ್ಜಿ ಸಲ್ಲಿಸದಿದ್ದರೆ ಈ ಕೊಡಲೇ ಅರ್ಜಿ ಸಲ್ಲಿಸುವ ಮೂಲಕ ಯೋಜನೆಯ ಲಾಭವನ್ನು ಪಡೆಯಬಹುದು.

Join Nadunudi News WhatsApp Group