LIC Aadhar Shila: LIC ಅಲ್ಲಿ 87 ರೂಪಾಯಿ ಹೂಡಿಕೆ ಮಾಡಿದರೆ ಸಿಗಲಿದೆ 11 ಲಕ್ಷ, ಮಹಿಳೆಯರಿಗಾಗಿ ಯೋಜನೆ.
ಮಹಿಳೆಯರು LIC ಆಧಾರ್ ಶೀಲಾ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಸಾಕಷ್ಟು ದೊಡ್ಡ ಮೊತ್ತದ ಲಾಭವನ್ನ ಪಡೆದುಕೊಳ್ಳಬಹುದು.
LIC Policy: LIC ಜನಸಾಮಾನ್ಯರಿಗಾಗಿ ಸಾಕಷ್ಟು ವಿಮಾ ಯೋಜನೆಗಳನ್ನು ಪರಿಚಯಿಸಿದೆ. ಕಡಿಮೆ ಹೂಡಿಕೆಯ ಹೆಚ್ಚಿನ ಲಾಭದಾಯಕ ಯೋಜನಗಳು ಎಲ್ ಐಸಿ ಯಲ್ಲಿ (LIC) ಸಾಕಷ್ಟಿವಿದೆ. ಇದೀಗ ಭಾರತೀಯ ಜೀವ ವಿಮಾ ಯೋಜನೆಯು ಮಹಿಳೆಯರಿಗಾಗಿ ಹೊಸ ಯೋಜನೆಯನ್ನು ಬಿಡುಗಡೆ ಮಾಡಿದೆ. ಮಹಿಳೆಯರಿಗಾಗಿ ಎಲ್ ಐಸಿ ಜಾರಿಗೊಳಿಸಿದ ಹೊಸ ಯೋಜನೆಯ ಬಗ್ಗೆ ಮಾಹಿತಿ ತಿಳಿಯೋಣ.
ಮಹಿಳೆಯರಿಗಾಗಿ ಎಲ್ ಐಸಿ ಆಧಾರ್ ಶೀಲಾ ಯೋಜನೆ (LIC Aadhar Shila Yojana)
ಭಾರತೀಯ ವಿಮಾ ಕಂಪನಿಯು ಮಹಿಳೆಯರಿಗಾಗಿ ಎಲ್ ಐಸಿ ಆಧಾರ್ ಶೀಲಾ ಯೋಜನೆಯನ್ನು ಬಿಡುಗಡೆ ಮಾಡಿದೆ. ವಿಶೇಷವಾಗಿ ಈ ಯೋಜನೆಯನ್ನು ಮಹಿಳೆಯರಿಗಾಗಿಯೇ ರೂಪಿಸಲಾಗಿದೆ.
ನೀವು ಪ್ರತಿನಿತ್ಯ 87 ರೂಪಾಯಿ ಹೂಡಿಕೆ ಮಾಡುವುದರಿಂದ 11 ಲಕ್ಷದಷ್ಟು ಲಾಭವನ್ನು ಪಡೆಯಬಹುದು. ಎಲ್ ಐಸಿ ಆಧಾರ್ ಶೀಲಾ ಯೋಜನೆಯು ಕಳೆದ ನಾಲ್ಕು ವರ್ಷಗಳಲ್ಲಿ ಸಾಕಷ್ಟು ಲಾಭವನ್ನು ತಂದು ಕೊಟ್ಟಿದೆ. ಈ ಯೋಜನೆಯು ಉತ್ತಮ ಉಳಿತಾಯದೊಂದಿಗೆ ಸುರಕ್ಷಿತವಾಗಿದೆ.
ಎಲ್ ಐಸಿ ಆಧಾರ್ ಶೀಲಾ ಯೋಜನೆ
ಈ ಯೋಜನೆಯು ಮಹಿಳೆಯರಿಗಾಗಿ ವಿನ್ಯಾಸಗೊಳಿಸಲಾಗಿದೆ. ಗ್ರಾಹಕರ ಕುಟುಂಬಕ್ಕೂ ಈ ಯೋಜನೆ ಸಹಾಯವಾಗಲಿದೆ. ಗ್ರಾಹಕರು ಮೃತಪಟ್ಟರೆ ಅವರ ಕುಟುಂಬಕ್ಕೆ ಈ ಯೋಜನೆಯಿಂದ ಅನುಕೂಲವಾಗುತ್ತದೆ. ದೀರ್ಘವದಿಯ ಹಣವನ್ನು ಉಳಿಸಲು ಈ ಯೋಜನೆ ಸಹಾಯವಾಗಲಿದೆ. 8 ರಿಂದ 55 ವರ್ಷದ ಮಹಿಳೆಯರು ಈ ಎಲ್ ಐಸಿ ಆಧಾರ್ ಶೀಲಾ ಯೋಜನೆಯ ಲಾಭವನ್ನು ಪಡೆಯಬಹುದು.
ಈ ಯೋಜನೆಯು 10 ರಿಂದ 20 ವರ್ಷದ್ದಾಗಿದೆ. ಈ ಎಲ್ ಐಸಿ ಯೋಜನೆಯ ಮುಕ್ತಾಯದ ವರ್ಷವೂ 70 ವರ್ಷವಾಗಿರುತ್ತದೆ. ಮಹಿಳೆಯರು 15 ನೇ ವಯಸ್ಸಿನಲ್ಲಿ 87 ರೂಪಾಯಿಹೂಡಿಕೆ ಮಾಡಲು ಆರಂಭ ಮಾಡಿದರೆ ವಾರ್ಷಿಕವಾಗಿ 31,755 ರೂಪಾಯಿ ಉಳಿತಾಯ ಮಾಡಬಹುದು.
ಯೋಜನೆಯ ಮುಕ್ತಾಯದ ಹಂತದಲ್ಲಿ 11 ಲಕ್ಷವನ್ನು ಪಡೆಯಬಹುದು. ಇನ್ನು ಕಂತುಗಳನ್ನ ವಾರ್ಷಿಕ, ತ್ರೈಮಾಸಿಕ ಅಥವಾ ಆರು ತಿಂಗಳಿಗೆ ಒಮ್ಮೆ ಕಟ್ಟುವ ಆಯ್ಕೆ ಕೂಡ ಇರುತ್ತದೆ.