LIC And Pan Card Link: LIC ಮಾಡಿದವರಿಗೆ ಮಾರ್ಚ್ 31 ಕೊನೆಯ ದಿನಾಂಕ, ಈ ಕೆಲಸ ಮಾಡದಿದ್ದರೆ ಸಮಸ್ಯೆ ಖಚಿತ.

Linking of LIC and PAN card is mandatory.: ಭಾರತದಲ್ಲಿ ಪ್ಯಾನ್ ಕಾರ್ಡ್ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಇತ್ತೀಚಿಗೆ ಪ್ಯಾನ್ ಕಾರ್ಡ್ ಅನ್ನು ಕೆಲವೊಂದು ದಾಖಲೆಗಳಿಗೆ ಜೋಡಣೆ ಮಾಡುವುದು ಅಗತ್ಯವಾಗಿದೆ.

ಭಾರತೀಯ ಜೀವ ವಿಮಾ ನಿಗಮ (LIC) ಈ ಹಿಂದೆಯೇ ಪಾಲಿಸಿಗಳಿಗೆ ಪ್ಯಾನ್ ಕಾರ್ಡ್ ಜೋಡಣೆ ಮಾಡುವಂತೆ ಪಾಲಿಸಿದಾರರಿಗೆ ಮನವಿ ಮಾಡಿತ್ತು.

March 31 is the last date for those who have done LIC, if this is not done there will be a problem.
Image Credit: thehindubusinessline

ಎಲ್ ಐ ಸಿ ಗೆ ಪ್ಯಾನ್ ಕಾರ್ಡ್ ಜೋಡಣೆ ಮಾಡುವುದು ಅಗತ್ಯ
ಕಳೆದ ವರ್ಷ ಮೇ ನಲ್ಲಿ ನಡೆದ ಎಲ್ ಐ ಸಿ ಐಪಿಒ ನಲ್ಲಿ ಪಾಲ್ಗೊಳ್ಳಲು ಪಾಲಿಸಿದಾರರು ಎಲ್ ಐ ಸಿ ದಾಖಲೆಗಳಲ್ಲಿ ತಮ್ಮ ಪ್ಯಾನ್ ಸಂಖ್ಯೆ ನವೀಕಲಿಸುವುದು ಅಗತ್ಯ ಎಂದು ತಿಳಿಸಿತ್ತು.

ಆದರೆ ಪಾಲಿಸಿಗಳಿಗೆ ಪ್ಯಾನ್ ಜೋಡಣೆ ಮಾಡಲು ಅಂತಿಮ ಗಡುವು ನೀಡಿರಲಿಲ್ಲ. ಆದರೆ ಇತ್ತೀಚಿನ ಅಧಿಸೂಚನೆಯಲ್ಲಿ 2023 ರ ಮಾರ್ಚ್ 31 ರೊಳಗೆ ಎಲ್ ಐ ಸಿ ಪಾಲಿಸಿಗಳಿಗೆ ಪ್ಯಾನ್ ಜೋಡಣೆ ಮಾಡಲು ಎಲ್ ಐ ಸಿ ತನ್ನ ಗ್ರಾಹಕರಿಗೆ ಸಲಹೆ ನೀಡಿದೆ.

March 31 is the last date to link PAN card with Lic
Image Credit: instagram

ಎಲ್ ಐ ಸಿ ಗೆ ಆದಷ್ಟು ಬೇಗ ಪ್ಯಾನ್ ಕಾರ್ಡ್ ಲಿಂಕ್ ಮಾಡಿಸಬೇಕು
ಎಲ್ ಐ ಸಿ ಅಂತಿಮ ಗಡುವು ವಿಸ್ತರಿಸುವ ಕಾರಣ ಇನ್ನೂ ಎಲ್ ಐ ಸಿ ಪಾಲಿಸಿಗಳಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡದಿರೋರು ಆದಷ್ಟು ಬೇಗ ಮಾಡಿ ಮುಗಿಸೋದು ಉತ್ತಮ. ಕಾಯಂ ಖಾತಾ ಸಂಖ್ಯೆ ಅಥವಾ ಪ್ಯಾನ್ ಕಾರ್ಡ್ 10 ಸಂಖ್ಯೆಗಳನ್ನು ಹೊಂದಿದ್ದು, ಲ್ಯಾಮಿನೇಟೆಡ್ ಕಾರ್ಡ್ ರೂಪದಲ್ಲಿ ಇದನ್ನು ಆದಾಯ ತೆರಿಗೆ ಇಲಾಖೆ ವಿತರಿಸುತ್ತದೆ.

Join Nadunudi News WhatsApp Group

ಯಾವುದೇ ಭಾರತೀಯ ವ್ಯಕ್ತಿ ಪ್ಯಾನ್ ಕಾರ್ಡ್ ಕೋರಿ ಆದಾಯ ತೆರಿಗೆ ಇಲಾಖೆಗೆ ಅರ್ಜಿ ಸಲ್ಲಿಸಬಹುದು. ಪ್ಯಾನ್ ಕಾರ್ಡ್ ಆದಾಯ ತೆರಿಗೆ ಸಲ್ಲಿಕೆ ಸಂದರ್ಭದಲ್ಲಿ ಅತ್ಯಗತ್ಯವಾಗಿ ಬೇಕಿರುತ್ತದೆ.

vLinking PAN card with Lic helps in income tax payment
Image Credit: hindustantimes

ಎಲ್ ಐ ಸಿ ಗೆ ಪಾನ್ ಕಾರ್ಡ್ ಲಿಂಕ್ ಮಾಡವುದು ಹೇಗೆ
ಹಂತ 1: ಎಲ್ ಐ ಸಿ ಸೈಟ್ ಗೆ ನೇರ ಲಿಂಕ್
linkpan.licindia.in/UIDSeedingApp /getPolicyPANStatus ಗೆ ಭೇಟಿ ನೀಡಿ.
ಹಂತ 2: ನಿಗದಿತ ಸ್ಥಳದಲ್ಲಿ ಪಾಲಿಸಿ ಸಂಖ್ಯೆ ನಮೂದಿಸಿ.
ಹಂತ 3 : ನಿಮ್ಮ ಪ್ಯಾನ್ ಮಾಹಿತಿ ಹಾಗು ಕ್ಯಾಪ್ಚ್ ಕೋಡ್ ಜೊತೆಗೆ ನಿಮ್ಮ ಜನ್ಮದಿನಾಂಕ ನಮೂದಿಸಿ.
ಹಂತ 4 : Submit ಬಟನ್ ಆಯಕೆ ಮಾಡಿ.

Announcement of Last Date for Linking Aadhaar Card with Lic
Image Credit: timesofindia.indiatimes

ಈಗ ನಿಮ್ಮ ಫೋನ್ ಸ್ಕ್ರೀನ್ ಅಥವಾ ಕಂಪ್ಯೂಟರ್ ಮಾನಿಟರ್ ನಲ್ಲಿ ನಿಮ್ಮಎಲ್ ಐ ಸಿ ಪಾಲಿಸಿ ಹಾಗೂ ಪ್ಯಾನ್ ಜೋಡಣೆ ಮಾಹಿತಿ ಕಾಣಿಸುತ್ತದೆ. ಒಂದು ವೇಲೆ ನಿಮ್ಮ ಎಲ್ ಐ ಸಿ ಪಾಲಿಸಿಗಳಿಗೆ ಪ್ಯಾನ್ ಲಿಂಕ್ ಆಗದಿದ್ದರೆ “click here to register your PAN with us” ಕಾಣಿಸುತ್ತದೆ. ಅಲ್ಲಿ ಕ್ಲಿಕ್ ಮಾಡಿದರೆ ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಕೇಳಿರುವ ಮಾಹಿತಿಗಳನ್ನು ನೀವು ಭರ್ತಿ ಮಾಡಬೇಕು.

Join Nadunudi News WhatsApp Group