LIC Bima Sakhi Scheme Details: ಕೇಂದ್ರ ಮತ್ತು ರಾಜ್ಯ ಸರ್ಕಾರ ಮಹಿಳೆಯರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಲು ಅನೇಕ ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದೆ. ಮಹಿಳೆಯರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಮತ್ತು ಅವರು ಆದಾಯದ ಮೂಲ ತಂದುಕೊಡುವ ಉದ್ದೇಶದಿಂದ LIC ಮಹಿಳೆಯರಿಗಾಗಿ ಈ ಬಿಮಾ ಸಖಿ ಯೋಜನೆಯಲ್ಲಿ ಜಾರಿಗೆ ತಂದಿದೆ. ಈ ಯೋಜನೆಯೂ ದೇಶದ ಗ್ರಾಮೀಣ ಭಾಗದ ಮಹಿಳೆಯರಿಗೆ ಸ್ಥಿರ ಆದಾಯ ಮತ್ತು ಉದ್ಯೋಗವನ್ನು ನೀಡುತ್ತಿದೆ. ದೇಶದಲ್ಲಿ ಈಗಾಗಲೇ ಲಕ್ಷಾಂತರ ಮಹಿಳೆಯರು ಈ ಯೋಜನೆಗೆ ಸೇರಿಕೊಂಡಿದ್ದು, ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.
LIC Bima Sakhi Yojana
LIC ಬಿಮಾ ಸಖಿ ಯೋಜನೆ (LIC Bima Sakhi Yojana) ಎಂದರೆ ಭಾರತೀಯ ಜೀವ ವಿಮಾ ನಿಗಮವು ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಪ್ರಾರಂಭಿಸಿದ ಯೋಜನೆಯಾಗಿದ್ದು, ಮಹಿಳೆಯರನ್ನು LIC ಏಜೆಂಟ್ ಗಳಾಗಿ ತರಬೇತಿ ನೀಡಿ, ಅವರಿಗೆ ಆದಾಯ ಗಳಿಸುವ ಅವಕಾಶ ಮತ್ತು ವಿಮೆಯ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ. ಈ ಯೋಜನೆಯಡಿಯಲ್ಲಿ, ಅರ್ಹ ಮಹಿಳೆಯರಿಗೆ ತರಬೇತಿ, ಆರ್ಥಿಕ ಪ್ರೋತ್ಸಾಹ ಮತ್ತು ಕಮಿಷನ್ ಮೂಲಕ ಹಣ ಗಳಿಸುವ ಅವಕಾಶ ಸಿಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು 2024 ಡಿಸೆಂಬರ್ 9 ರಂದು ಹರಿಯಾಣದ ಪಾನಿಪತ್ ನಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ.
LIC ಬಿಮಾ ಸಖಿ ಯೋಜನೆಯ ಅರ್ಹತೆ
- 18 ರಿಂದ 70 ವರ್ಷ ಒಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ
- ಕನಿಷ್ಠ 10 ನೇ ತರಗತಿ ಪಾಸ್ ಆಗಿರಬೇಕು
- ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಹೆಚ್ಚಿನ ಆಧ್ಯತೆ
ಯಾರು ಈ ಯೋಜನೆಗೆ ಅರ್ಹರಲ್ಲ
- ಈಗಾಗಲೇ LIC ಏಜೆಂಟ್ / ಉದ್ಯೋಗಿ / ಅವರ ಸಂಬಂಧಿಕರು ಅರ್ಜಿ ಸಲ್ಲಿಸಲು ಅರ್ಹರಲ್ಲ
- ಸರ್ಕಾರಿ ಅಥವಾ ಸಾರ್ವಜನಿಕ ವಲಯದ ಉದ್ಯೋಗಿಗಳು ಅರ್ಹರಲ್ಲ
- ನಿವೃತ್ತ LIC ಉದ್ಯೋಗಿಗಳು ಅಥವಾ ಮಾಜಿ ಏಜೆಂಟ್ ಗಳು ಕೂಡ ಅರ್ಹರಲ್ಲ
ಈ ಯೋಜನೆಯ ಪ್ರಮುಖ ಉದ್ದೇಶಗಳು
- ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು.
- ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಿಮೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು.
- ಮಹಿಳೆಯರಿಗೆ ಕಮಿಷನ್ ಮತ್ತು ಸ್ಥಿರ ಸ್ಟೇ ಫಂಡ್ ಮೂಲಕ ಆದಾಯ ಗಳಿಸಲು ಸಹಾಯ ಮಾಡುವುದು.
ಈ ರೀತಿಯಾಗಿ ಅರ್ಜಿ ಸಲ್ಲಿಸಿ
- ಮೊದಲು https://licindia.in/lic-s-bima-sakhi ಗೆ ಭೇಟಿ ನೀಡಬೇಕು
- ನಂತರ Bima Sakhi ಲಿಂಕ್ ಮೇಲೆ ಕ್ಲಿಕ್ ಮಾಡಬೇಕು
- ಅಗತ್ಯ ವಿವರವನ್ನು ಭರ್ತಿ ಮಾಡಬೇಕು
- ಅಗತ್ಯ ದಾಖಲೆಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು
- ಹತ್ತಿರದ LIC ಶಾಖೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕು
- ಆಯ್ಕೆ ಆದ ನಂತರ ಸಂದರ್ಶನ ,ಅತ್ತು ತರಬೇತಿ ಇರುತ್ತದೆ
ಮಹಿಳೆಯರು ಎಷ್ಟು ಸಂಬಳ ಪಡೆದುಕೊಳ್ಳಬಹುದು?
ಆಯ್ಕೆ ಆಗಿರುವ ಮೊದಲ ವರ್ಷ ತಿಂಗಳಿಗೆ 7000 ರೂಪಾಯಿ ನೀಡಲಾಗುತ್ತದೆ, ಎರಡನೇ ವರ್ಷ ತಿಂಗಳಿಗೆ 6000 ರೂಪಾಯಿ ನೀಡಲಾಗುತ್ತದೆ, ಇನ್ನು ಮೂರನೇ ವರ್ಷ ತಿಂಗಳಿಗೆ 5000 ರೂಪಾಯಿ ಸ್ಟೇ ಫಂಡ್ ನೀಡಲಾಗುತ್ತದೆ. ಇದು ಅವರವರ ಕಾರ್ಯ ಕ್ಷಮತೆಯ ಮೇಲೆ ಅವಲಂಬಿತವಾಗಿರುತ್ತದೆ. ವಿಮಾ ಮಾರಾಟದ ಮೇಲೆ ಕಮಿಷನ್ ಕೂಡ ಬರುತ್ತದೆ. ಮೊದಲ ವರ್ಷ ಕಮಿಷನ್ 48,000 ರೂಪಾಯಿ ವರೆಗೆ ಸಿಗಬಹುದು. ಉತ್ತಮ ಆದಾಯ ಪಡೆದುಕೊಳ್ಳಬೇಕು ಅಂದರೆ ಮಹಿಳೆಯರು ಹೆಚ್ಚು ಹೆಚ್ಚು ಯೋಜನೆಯಲ್ಲಿ ತೊಡಗಿಸಿಕೊಳ್ಳಬೇಕು.
ಮಹಿಳೆಯರಿಗೆ ಯೋಜನೆಯ ಲಾಭ
- ತರಬೇತಿ ಮುಗಿದ ನಂತರ ಸಾಮಾನ್ಯ ಏಜೆಂಟ್ ಆಗಿ ಮುಂದುವರಿಯಬಹುದು.
- ಗ್ರಾಜುಯೇಟ್ ಮಹಿಳೆಯರು 5 ವರ್ಷಗಳ ನಂತರ Development Officer ಹುದ್ದೆಗೆ ಅರ್ಹರಾಗುತ್ತಾರೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

