Privatization: LIC ಪಾಲಿಸಿ ಮಾಡಿಸಿದವರ ಗಮನಕ್ಕೆ, ಸಂಪೂರ್ಣ ಖಾಸಗೀಕರಣ ಆಗಲಿದೆ LIC.

LIC ಖಾಸಗೀಕರಣ ಮಾಡಲು ಈಗ ಎಲ್ಲಾ ಸಿದ್ಧತೆಯನ್ನ ಮಾಡಿಕೊಳ್ಳಲಾಗುತ್ತಿದೆ.

Privatzation Of LIC: ಆರ್ಥಿಕವಾಗಿ ಬಲಿಷ್ಠವಾಗಿರುವ ಭಾರತೀಯ ಜೀವ ವಿಮಾ ನಿಗಮ ವನ್ನು ಖಾಸಗಿಯವರಿಗೆ ಒಪ್ಪಿಸಲು ಕೇಂದ್ರ ಸರ್ಕಾರ ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ಭಾರತೀಯ ಎಲ್ ಐ ಸಿ ಎಜೇಂಟ್ ಗಳ ಸಂಘದ ಪ್ರಾದೇಶಿಕ ಪ್ರಧಾನ ಕಾರ್ಯದರ್ಶಿ ಪಿ ಎಲ್ ನರಸಿಂಹ ರಾವ್ ಆರೋಪಿಸಿದ್ದಾರೆ.

ಈಗಾಗಲೇ ಎಲ್ ಐ ಸಿ ಯ ಐ ಪಿ ಓ ಹೊರತಂದಿರುವ ಸರ್ಕಾರವು ಮುಂದಿನ ಹಂತವಾಗಿ ಅದನ್ನು ಕಾರ್ಪೊರೇಟ್ ಕುಳಗಳಿಗೆ ಹಸ್ತಾಂತರಿಸಲಿದೆ ಎಂಬುದಾಗಿ ಅವರು ಭವಿಷ್ಯ ನುಡಿದರು.

Privatzation Of LIC
Image Credit: dailypioneer

ಎಲ್ ಐ ಸಿ ಖಾಸಗೀಕರಣ
ಆರನೇ ಅಖಿಲ ಭಾರತ ಅಭಾರತೀಯ ಎಲ್ ಐ ಸಿ ಎಜೇಂಟ್ ಗಳ ಸಂಘದ ಸಮಾವೇಶದ ಬಗ್ಗೆ ಮಾಹಿತಿ ನೀಡಲು ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಆರೋಪಗಳನ್ನು ಮಾಡಿದರು.

ಈ ಸಮಾವೇಶವು ದಾಬಗಾರ್ಡನ್ಸ್ ಅಲ್ಲೂರಿ ವಿಜ್ಞಾನ ಕೇಂದ್ರನಲ್ಲಿ ಮೇ 22 ಮತ್ತು 23ರಂದು ನಡೆಯಲಿದೆ. ಎಲ್‌ ಐ ಸಿ ಯನ್ನು ಖಾಸಗೀಕರಣಗೊಳಿಸುವ ಯೋಜನೆಯ ಭಾಗವಾಗಿಯೇ, ಐಆರ್ಡಿಎಐಯ ಬಿಮಾ ನಿಗಮ್ ಕರಡು ಸೇರಿದಂತೆ ಹಲವಾರು ನೀತಿಗಳನ್ನು ಕೇಂದ್ರ ಸರಕಾರ ತಂದಿದೆ ಎಂದು ಅವರು ಹೇಳಿದರು. ಎಲ್‌ ಐಸಿ ಯ ಅಸ್ತಿತ್ವ ಮಾತ್ರವಲ್ಲ, ಎಲ್‌ ಐ ಸಿ ಏಜಂಟ್ ಗಳ ಅಸ್ತಿತ್ವವೂ ಅಪಾಯದಲ್ಲಿದೆ ಎಂದು ಅವರು ಅಭಿಪ್ರಾಯಪಟ್ಟರು.

Opposition to LIC privatisation
Image Credit: moneycontrol

ಎಲ್ ಐ ಸಿ ಖಾಸಗೀಕರಣ ಮಾಡಲು ವಿರೋಧ
ಖಾಸಗೀಕರಣವನ್ನು ವಿರೋಧಿಸಿ ಮೇ 22ರಂದು ನೂರಾರು ಎಲ್ಐಸಿ ಏಜಂಟರು, ಉದ್ಯೋಗಿಗಳು ಮತ್ತು ಪಾಲಿಸಿದಾರರು ಬೃಹತ್ ಮೆರವಣಿಗೆ ನಡೆಸಲಿದ್ದಾರೆ. ಕೇರಳದ ಮಾಜಿ ಹಣಕಾಸು ಸಚಿವ ಥಾಮಸ್ ಐಸಾಕ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಮಾಜಿ ಸಂಸದ ಹಾಗೂ ಎಲ್‌ಐಸಿಎಒಐ ರಾಷ್ಟ್ರೀಯ ಅಧ್ಯಕ್ಷ ಬಸುದೇವ ಆಚಾರ್ಯ ಮತ್ತು ಮಾಜಿ ಸಂಸದ ಎ. ಸಂಪತ್ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Join Nadunudi News WhatsApp Group

Join Nadunudi News WhatsApp Group