Ads By Google

Jeevan Akshay: ಈಗ ಪ್ರತಿ ತಿಂಗಳು ಸಿಗಲಿದೆ 20,000 ರೂಪಾಯಿ ಪಿಂಚಣಿ, LIC ಜೀವನ್ ಅಕ್ಷಯ್ ಯೋಜನೆ.

If you invest in lic Jeevan Akshay Yojana, you can get a pension of up to 20000 rupees per month.
Ads By Google

LIC Jeevan Akshay Policy: ಭಾರತೀಯ ಜೀವ ವಿಮೆ (LIC)  ಈಗಾಗಲೇ ಜನಸಾಮಾನ್ಯಾರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಜನಸಾಮಾನ್ಯರು ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ.

ಇದೀಗ ಎಲ್ ಐ ಸಿ ನಿಮಗಾಗಿ ಹೊಸ ಜೀವನ್ ಅಕ್ಷಯ್ ಯೋಜನೆಯನ್ನು ಪರಿಚಯಿಸಿದೆ. ನೀವು ಹೊಸ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದರೆ ಈ ಯೋಜನೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳಿ. ಈ ಯೋಜನೆಯ ಅಡಿಯಲ್ಲಿ ದೊಡ್ಡ ಮೊತ್ತದ ಪಿಂಚಣಿ ಲಾಭ ಇದ್ದು ಇದು ಜನರಿಗೆ ಬಹಳ ಉಪಯುಕ್ತವಾದ ಯೋಜನೆ ಕೂಡ ಆಗಿದೆ. 

Image Credit: naidunia

ಎಲ್ ಐ ಸಿ ಜೀವನ್ ಅಕ್ಷಯ ಪಾಲಿಸಿ (LIC Jeevan Akshay Policy) 
ಎಲ್ ಐ ಸಿ ಈಗಾಗಲೇ ವಿವಿಧ ಯೋಜನೆಗಳನ್ನು ನೀಡಿದೆ. ಇದೀಗ ಎಲ್ ಐ ಸಿ ಜೀವನ್ ಅಕ್ಷಯ ಪಾಲಿಸಿಯನ್ನು ಜಾರಿಗೊಳಿಸಿದೆ. ಈ ಯೋಜನೆಯಲ್ಲಿ ಕಡಿಮೆ ಹೂಡಿಕೆ ಮಾಡಿ ಹೆಚ್ಚಿನ ಲಾಭವನ್ನು ಪಡೆಯಬಹುದು. ಯೋಜನೆಯು ಲಾಭದಾಯಕ ಹಾಗೂ ಸುರಕ್ಷಿತವಾಗಿದೆ.

ಪ್ರತಿ ತಿಂಗಳು ಸಿಗಲಿದೆ 20,000 ರೂಪಾಯಿ ಪಿಂಚಣಿ
ಎಲ್ ಐ ಸಿ ಜೀವನ್ ಅಕ್ಷಯ ಪಾಲಿಸಿ ಅರ್ಜಿದಾರರ ವಯಸ್ಸು ಕನಿಷ್ಠ 30 ವರ್ಷದಿಂದ ಗರಿಷ್ಟ 85 ವರ್ಷಗಳಾಗಿರಬೇಕು. ಇನ್ನು ಹೂಡಿಕೆದಾರರ ವಯಸ್ಸು 75 ವರ್ಷವಾಗಿದ್ದರೆ, ಆ ವ್ಯಕ್ತಿಯು 40 ಲಕ್ಷದಿಂದ 72 ಸಾವಿರ ವರೆಗೆ ಹೂಡಿಕೆ ಮಾಡಬಹುದು. ಈ ರೀತಿಯಾಗಿ ಹೂಡಿಕೆ ಮಾಡಿದರೆ ನಿಮಗೆ ಪ್ರತಿ ತಿಂಗಳು 20 ಸಾವಿರ ಪಿಂಚಣಿ ಸಿಗಲಿದೆ.

Image Credit: indiatimes

ಎಲ್ ಐ ಸಿ ಜೀವನ್ ಅಕ್ಷಯ ಪಾಲಿಸಿ ವಿಶೇಷತೆ
ಎಲ್ ಐ ಸಿ ಜೀವನ್ ಅಕ್ಷಯ ಪಾಲಿಸಿಯಲ್ಲಿ ಕನಿಷ್ಠ 12 ಸಾವಿರ ರೂಪಾಯಿಯ ಪಿಂಚಣಿಯ ಲಾಭವನ್ನು ಪಡೆಯಬಹುದು. ಈ ಯೋಜನೆಯ ವಿಶೇಷತೆ ಎಂದರೆ ನಿಮಗೆ ಸಾಲದ ಅಗತ್ಯವಿದ್ದರೆ ಈ ಪಾಲಿಸಿಯನ್ನು ಖರೀದಿಸಿ 90 ದಿನಗಳ ನಂತರ ನೀವು ಸಾಲವನ್ನು ಪಡೆದುಕೊಳ್ಳಬಹುದು.

ಈ ಯೋಜನೆಯಲ್ಲಿ ಕನಿಷ್ಠ 1 ಲಕ್ಷ ಹೂಡಿಕೆ ಮಾಡಬೇಕು ಗರಿಷ್ಟ ಹೂಡಿಕೆಯ ಮಿತಿಯಿಲ್ಲ.ಇದೊಂದು ಉತ್ತಮ ಪಿಂಚಣಿ ಯೋಜನೆ ಆಗಿದ್ದು ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹತ್ತಿರದ LIC ಕೇಂದ್ರ ಅಥವಾ ಏಜೆಂಟ್ ಅನ್ನು ಸಂಪರ್ಕ ಮಾಡಬಹುದಾಗಿದೆ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in