Jeevan Anand: LIC ಯ ಈ ಯೋಜನೆಯಲ್ಲಿ 45 ರೂ ಹೂಡಿಕೆ ಮಾಡಿದರೆ ಸಿಗಲಿದೆ 25 ಲಕ್ಷ ರೂ, ಲಾಭದಾಯದ ಸ್ಕೀಮ್.
LIC ಜೀವನ್ ಆನಂದ್ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿದರೆ ಸಾಕಷ್ಟು ದೊಡ್ಡ ಮೊತ್ತದ ಲಾಭವನ್ನ ಪಡೆದುಕೊಳ್ಳಬಹುದು.
LIC Jeevan Anand Policy Benefits: ಭಾರತೀಯ ಜೀವ ವಿಮೆ (LIC) ಈಗಾಗಲೇ ಜನಸಾಮಾನ್ಯಾರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಜನಸಾಮಾನ್ಯರು ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ.
ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಹಣ ಗಳಿಸಲು ಎಲ್ ಐಸಿ ಈಗಾಗಲೇ ಸಾಕಷ್ಟು ಯೋಜನೆಗಳನ್ನು ಪರಿಚಯಿಸಿದೆ. ಇನ್ನು ನೀವು ಹೊಸ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದರೆ ಈ ಯೋಜನೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.
LIC ಜೀವನ್ ಆನಂದ್ ಯೋಜನಾ
ಸದ್ಯ ಎಲ್ ಐಸಿ ಯೋಜನೆಯಲ್ಲಿ ಹಲವು ಯೋಜನೆಗಳು ಇದ್ದು ಅದರಲ್ಲಿ ಎಲ್ ಐಸಿ ಜೀವನ್ ಆನಂದ್ ಯೋಜನೆ ಹೆಚ್ಚು ಲಾಭದಾಯಕ ಯೋಜನೆ ಆಗಿದೆ. ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿದರೆ ಸಾಕಷ್ಟು ದೊಡ್ಡ ಮೊತ್ತದ ಲಾಭವನ್ನ ಕೂಡ ಪಡೆದುಕೊಳ್ಳಬಹುದು.
ಇನ್ನು ಈ ಯೋಜನೆಯಲ್ಲಿ ನೀವು 25 ಲಕ್ಷ ರೂ. ಲಾಭವನ್ನ ಪಡೆಯಲು ಬಯಸಿದರೆ 35 ವರ್ಷಗಳ ವರೆಗೆ ಯೋಜನೆಯಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.
ಕೇವಲ 45 ರೂ. ಹೂಡಿಕೆ ಮಾಡಿದರೆ ಸಿಗಲಿದೆ 25 ಲಕ್ಷ
ಎಲ್ ಐಸಿ ಜೀವನ್ ಆನಂದ್ ಯೋಜನೆಯಲ್ಲಿ ನೀವು ಪ್ರತಿನಿತ್ಯ 45 ರೂ. ಹೂಡಿಕೆ ಮಾಡಿದರೆ 25 ಲಕ್ಷದ ಲಾಭವನ್ನು ಪಡೆಯಬಹುದು. ಇನ್ನು ಈ ಯೋಜನೆಯಲ್ಲಿ ನೀವು ತಿಂಗಳಿಗೆ 1358 ರೂ. ಹಾಗೂ ವರ್ಷಕ್ಕೆ 16,300 ರೂ. ಗಳನ್ನೂ ಕಟ್ಟಬೇಕಾಗುತ್ತದೆ.
ಈ ಯೋಜನೆಯಲ್ಲಿ ಪಾಲಿಸಿದಾರರ ಮರಣದ ನಂತರ ನಾಮಿನಿಯು ಯೋಜನೆಯ ಲಾಭವನ್ನು ಪಡೆಯುತ್ತಾರೆ. ಈ ಯೋಜನೆಯು 125 ಪ್ರತಿಶತ ಸಾವಿನ ಪ್ರಯೋಜನವನ್ನು ಪಡೆಯಬಹುದು. ಹಾಗೆಯೆ ಇದರಲ್ಲಿ 1 ಲಕ್ಷ ವಿಮಾ ಮೊತ್ತವನ್ನು ಪಡೆಯಬಹುದಾಗಿದೆ. ಈ ಪಾಲಿಸಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹತ್ತಿರದ LIC ಕೇಂದ್ರ ಅಥವಾ ಏಜೆಂಟ್ ಗಲನ್ನ ಸಂಪರ್ಕ ಮಾಡಬಹುದು.