LIC: 250 ರೂಪಾಯಿ ಹೂಡಿಕೆ ಮಾಡಿ ಪಡೆದುಕೊಳ್ಳಿ 52 ಲಕ್ಷ, ಜನರಿಗಾಗಿ LIC ಯ ಬಹುದೊಡ್ಡ ಯೋಜನೆ ಜಾರಿಗೆ.
LIC ಯಲ್ಲಿ 250 ರೂಪಾಯಿ ಹೂಡಿಕೆ ಮಾಡುವ ಮೂಲಕ ಪಡೆಯಿರಿ 52 ಲಕ್ಷ.
LIC Jeevan Labh Policy: ಎಲ್ ಐ ಸಿ ಯು ಜನರಿಗೆ ಬಹುದೊಡ್ಡ ಲಾಭವನ್ನು ತಂದುಕೊಡುತ್ತದೆ. ಎಲ್ ಐ ಸಿ ಯಲ್ಲಿ ಹಲವು ಯೋಜನೆಗಳಿವೆ. ಇದರಲ್ಲಿ ಜನರು ಹೂಡಿಕೆ ಮಾಡುವ ಮೂಲಕ ಅಧಿಕ ಲಾಭವನ್ನು ಪಡೆದಿದ್ದಾರೆ. ಎಲ್ ಐ ಸಿಯಲ್ಲಿ ಕಡಿಮೆ ಹಣವನ್ನು ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸುವ ಅನೇಕ ಯೋಜನೆಗಳಿದ್ದು ಅದರಲ್ಲಿ ಎಲ್ ಐ ಸಿ ಜೀವನ್ ಲಾಭ್ ಪಾಲಿಸಿಯೂ ಸಹ ಒಂದಾಗಿದೆ.
ಎಲ್ ಐ ಸಿಯ ಜೀವನ್ ಲಾಭ್ ಯೋಜನೆ
ದೇಶದಲ್ಲಿ ಜೀವ ವಿಮಾ ಪಾಲಿಸಿ ಹೆಚ್ಚು ಜನಪ್ರಿಯವಾಗಿದೆ. ಭಾರತೀಯ ಜೀವ ವಿಮಾ ನಿಗಮವು ಜನರ ವಿವಿಧ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಹಲವು ರೀತಿಯ ಯೋಜನೆಗಳನ್ನು ನೀಡುತ್ತದೆ. ಇನ್ನು ಇತ್ತೀಚಿನ ದಿನಗಳಲ್ಲಿ ಎಲ್ ಐ ಸಿಯ ಜೀವನ್ ಲಾಭ್ ಯೋಜನೆಯ ಬಗ್ಗೆ ಸಾಕಷ್ಟು ಚರ್ಚೆಗಳು ಆಗುತ್ತಿವೆ.
ಈ ಯೋಜನೆಯ ವಿಶೇಷ ಏನೆಂದರೆ ಇದರಲ್ಲಿ ವಿಮೆ ಮತ್ತು ಉಳಿತಾಯ ಎರಡರ ಲಾಭವು ದೊರೆಯುತ್ತದೆ. ಇದು ದತ್ತಿ ಯೋಜನೆಯಾಗಿದ್ದು, ನಿರ್ದಿಷ್ಟ ಅವಧಿಯ ನಂತರ ಬೋನಸ್ ನೊಂದಿಗೆ ಒಟ್ಟು ಮೊತ್ತವನ್ನು ಪಾವತಿಸಲಾಗುತ್ತದೆ.
250 ರೂಪಾಯಿಯವರೆಗೆ ಹೂಡಿಕೆ ಮಾಡಿ 52 ಲಕ್ಷ ಲಾಭ ಪಡೆಯಿರಿ
ಎಲ್ ಐ ಸಿ ಜೀವನ್ ಲಾಭ್ ಪಾಲಿಸಿಯನ್ನು ಖರೀದಿಸಲು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 59 ವರ್ಷಗಳು ಆಗಿರಬೇಕು. 25 ವರ್ಷದ ವ್ಯಕ್ತಿಯು 25 ವರ್ಷಗಳ ಅವಧಿಗೆ ಜೀವನ್ ಆನಂದ್ ಪಾಲಿಸಿಯನ್ನು ತೆಗೆದುಕೊಂಡರೆ ಅವನು ತಿಂಗಳಿಗೆ ಅಥವಾ ದಿನಕ್ಕೆ 246 ರೂಪಾಯಿಯನ್ನು ಹೂಡಿಕೆ ಮಾಡಬೇಕಾಗುತ್ತದೆ. ಅದರಂತೆ ಈ ಮೊತ್ತವು ವಾರ್ಷಿಕವಾಗಿ 86,954 ರೂಪಾಯಿ ಆಗಿರುತ್ತದೆ.
ಇನ್ನು ಈ ಹೂಡಿಕೆ ಮುಕ್ತಾಯದ ನಂತರ 52,50,000 ಲಕ್ಷ ಮೊತ್ತವನ್ನು ಪಡೆಯುತ್ತಾರೆ. ಇದು ಸಮ್ ಅಷ್ಯುರ್ಡ್ ಮತ್ತು ರಿವರ್ಷನರಿ ಬೋನಸ್ ಮತ್ತು ಅಂತಿಮ ಹೆಚ್ಚುವರಿ ಬೋನಸ್ ನ ಪ್ರಯೋಜನವನ್ನು ಒಳಗೊಂಡಿರುತ್ತದೆ. ಬೋನಸ್ ದರವು ಬದಲಾಗುತ್ತಿದ್ದಂತೆ ಮೆಚ್ಯುರಿಟಿ ಮೊತ್ತವು ಸಹ ಬದಲಾಗುತ್ತದೆ.