Jeevan Nidhi: 72 ರೂ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಸಿಗಲಿದೆ 25000 ರೂ ಪಿಂಚಣಿ, LIC ಯೋಜನೆಗೆ ಜನರು ಫಿದಾ.
ನಿಮ್ಮ ವೃದ್ದಾಪ್ಯವನ್ನು ಹೆಚ್ಚು ಸುರಕ್ಷಿತವಾಗಿರಿಸಲು LIC ಇದೀಗ ಹೊಸ ಪಿಂಚಣಿ ಯೋಜನೆಯನ್ನು ಪರಿಚಯಿಸಿದೆ.
LIC Jeevan Nidhi Scheme: ನಿವೃತ್ತಿಯ ನಂತರದ ಜೀವನದ ನಿರ್ವಹಣೆಗಾಗಿ ಜನರು ಹೆಚ್ಚಾಗಿ ಪಿಂಚಣಿಯ ಯೋಜನೆಯ್ಲಲಿ ಹೂಡಿಕೆ ಮಾಡಲುಬಯಸುತ್ತಾರೆ. ಏಕೆಂದರೆ ನಿವೃತ್ತಿಯ ನಂತರ ವೃದ್ದಾಪ್ಯದಲ್ಲಿ ಜೀವನವನ್ನು ನಡೆಸಲು ದುಡಿಯುವ ಸಾಮರ್ಥ್ಯ ಕಡಿಮೆ ಇರುತ್ತದೆ. ಆರೋಗ್ಯ ಸಂಬಂಧಿತ ವೆಚ್ಚಗಳು ಹೆಚ್ಚಾಗಿರುವ ಕಾರಣ ಪಿಂಚಣಿಯ ಹೂಡಿಕೆಯು ನಿವೃತ್ತಿಯ ನಂತರ ಸಹಾಯವಾಗುತ್ತದೆ.
ನಿವೃತ್ತಿಯ ನಂತರ ಆರ್ಥಿಕ ಭದ್ರತೆಗಾಗಿ ಹೊಸ ಯೋಜನೆ
ಇನ್ನು ಭಾರತೀಯ ಜೀವ ವಿಮೆ (LIC) ವಿವಿಧ ರೀತಿಯ ಪಿಂಚಣಿಯ ಯೋಜನೆಯನ್ನು ನೀಡುತ್ತಿದೆ. ದುಡಿಯುವ ಸಮಯದಲ್ಲಿ ಮಾಸಿಕ ಇಂತಿಷ್ಟು ಮೊತ್ತವನ್ನು ಹೂಡಿಕೆ ಮಾಡಿದರೆ ನಿವೃತ್ತಿಯ ನಂತರ ಆರಾಮದಾಯಕ ಜೀವನವನ್ನು ನಡೆಸಬಹುದು.
ಬಡ ಕುಟುಂಬದವರಿಗೆ ಪಿಂಚಣಿಯ ಹೂಡಿಕೆ ಹೆಚ್ಚು ಸಹಾಯವಾಗುತ್ತದೆ. ಎಲ್ ಐಸಿ ಈಗಾಗಲೇ ವಿವಿಧ ರೀತಿಯ ವೃದ್ದಾಪ್ಯ ವೇತನವನ್ನು ನೀಡುತ್ತಿದೆ. ನಿಮ್ಮ ವೃದ್ದಾಪ್ಯವನ್ನು ಹೆಚ್ಚು ಸುರಕ್ಷಿತವಾಗಿರಿಸಲು LIC ಇದೀಗ ಹೊಸ ಪಿಂಚಣಿ ಯೋಜನೆಯನ್ನು ಪರಿಚಯಿಸಿದೆ.
ಎಲ್ ಐಸಿ ಜೀವನ್ ನಿಧಿ ಯೋಜನಾ (LIC Jeevan Nidhi Scheme)
ಭಾರತೀಯ ಜೀವ ವಿಮೆ ಇದೀಗ ನಿವೃತ್ತಿಯ ನಂತರ ಪಿಂಚಣಿ ಪಡೆಯಲು ಜೀವನ್ ನಿಧಿ ಯೋಜನೆಯನ್ನು ರೂಪಿಸಿದೆ. ಈ ಯೋಜನೆ ಹೂಡಿಕೆ ಮಾಡಿದ ಜನರಿಗೆ ನಿವೃತ್ತಿಯ ಸಮಯದಲ್ಲಿ ಬಹಳ ಪ್ರಯೋಜನಕಾರಿಯಾಗಲಿದೆ. ಯೋಜನೆಯ ಮುಕ್ತಾಯದ ಮೇಲೆ ಹೂಡಿಕೆದಾರರಿಗೆ ವರ್ಷಾಶನವನ್ನು ಪಾವತಿಸಲಾಗುತ್ತದೆ. ಈ ಯೋಜನೆಯ ಅವಧಿಯು 7 ವರ್ಷದಿಂದ 35 ವರ್ಷದವರೆಗೆ ಇರುತ್ತದೆ.
72 ರೂ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಸಿಗಲಿದೆ 25000 ರೂ ಪಿಂಚಣಿ
ಎಲ್ ಐಸಿ ಜೀವನ್ ನಿಧಿ ಯೋಜನೆಯಲ್ಲಿ 20 ರಿಂದ 58 ವರ್ಷದೊಳಗಿನವರು ಹೂಡಿಕೆ ಮಾಡಬಹುದು. ಈ ಯೋಜನೆಯಡಿ ಪಿಂಚಣಿಯ ಜೊತೆಗೆ ವಿಮಾ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಹೂಡಿಕೆಯ ಮೇಲೆ ತೆರಿಗೆ ವಿನಾಯಿತಿ ಕೂಡ ಲಭ್ಯವಿದ್ದು ಪ್ರತಿ 6 ವರ್ಷಕ್ಕೊಮ್ಮೆ ಬೋನಸ್ ಕೂಡ ಸಿಗಲಿದೆ.
ಅರ್ಜಿದಾರರು 20 ವಯಸ್ಸಿನಲ್ಲಿ ಹೂಡಿಕೆ ಪ್ರಾರಂಭಿಸಿದರೆ ಪ್ರತಿ ನಿತ್ಯ 72 ರೂ. ಅಂದರೆ ಮಾಸಿಕ 2,160 ಪಾವತಿಸಿ ವಾರ್ಷಿಕವಾಗಿ 64,800 ರೂ. ಪಾವತಿಸಿದರೆ 10 ಲಕ್ಷ ರೂ. ಗಳ ಜೀವ ವಿಮಾ ರಕ್ಷಣೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಪ್ರತಿನಿತ್ಯ 72 ರೂ. ಗಳ ಹೂಕೆಯ ಮೇಲೆ ಯೋಜನೆಯ ಮುಕ್ತಾಯ ಅವಧಿಯ ನಂತರ ಮಾಸಿಕ 25,000 ಪಿಂಚಣಿಯನ್ನು ಪಡೆಯಬಹುದು.
ಈ ಹಣದ ಮೂಲಕ ನೀವು ನಿಮ್ಮ ನಿವೃತ್ತಿಯ ನಂತರ ಜೀವನವನ್ನು ಸುಲಭವಾಗಿ ಕಳೆಯಬಹುದು. ನೀವು ಹೂಡಿಕೆ ಮೊತ್ತವೂ ನಿಮ್ಮ ವಯಸ್ಸಿನ ಮೇಲೆ ನಿರ್ಧಾರ ಆಗುತ್ತದೆ. ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಇಂದೇ ನಿಮ್ಮ ಹತ್ತಿರದ LIC ಕಚೇರಿಗೆ ಭೇಟಿನೀಡಿ.