New Jeevan Shanti: LIC ಯ ಈ ಯೋಜನೆಯಲ್ಲಿ ಸಿಗಲಿದೆ 1 ಲಕ್ಷ ರೂಪಾಯಿ ಪಿಂಚಣಿ, ಹೂಡಿಕೆ ಮಾಡಲು ಇದು ಬೆಸ್ಟ್.
LIC ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಒಂದು ಲಕ್ಷದ ತನಕ ಪಿಂಚಣಿ ಪಡೆಯಬಹುದು.
LIC Jeevan Shanti Yojana Benefit: ಭಾರತೀಯ ಜೀವ ವಿಮೆ (LIC) ಜನರ ಜೀವದ ಭದ್ರತೆಗಾಗಿ ಈಗಾಗಲೇ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಜನಸಾಮಾನ್ಯರು ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ. LIC ಯಲ್ಲಿ ಈಗಾಗಲೇ ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭ ನೀಡುವ ಸಾಕಷ್ಟು ಯೋಜನೆಗಳಿವೆ.
ಇದೀಗ ಎಲ್ ಐಸಿಯಲ್ಲಿ ಹೊಸ Pension ಯೋಜನೆ ಪರಿಚಯವಾಗಿದೆ. ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿದರೆ ಸಾಕಷ್ಟು ದೊಡ್ಡ ಮೊತ್ತದ ಲಾಭವನ್ನ ಕೂಡ ಪಡೆದುಕೊಳ್ಳಬಹುದು. ನಿವೃತ್ತಿಯ ನಂತರ ಆರಾಮದಾಯಕ ಜೀವನ ನಡೆಸಲು ಪಿಂಚಣಿಯ ಯೋಜನೆಯಲ್ಲಿ ಹೂಡಿಕೆ ಮಾಡುವುದು ಉತ್ತಮ. ಉದ್ಯೋಗದಿಂದ ನಿವೃತ್ತಿ ಹೊಂದಿದ ನಂತರ ಮಾಸಿಕ ಪಿಂಚಣಿ ಪಡೆಯಲು ಇದೀಗ Life Insurance Corporation Of India ಜನರಿಗೆ ಅವಕಾಶ ನೀಡಿದೆ.
ಎಲ್ಐಸಿ ಜೀವನ್ ಶಾಂತಿ ಯೋಜನೆ (LIC Jeevan Shanti Yojana)
ಎಲ್ಐಸಿಯ ಜೀವನ್ ಶಾಂತಿ ಯೋಜನೆ ಕನಿಷ್ಠ 1.5 ಲಕ್ಷ ರೂಪಾಯಿ ಹೂಡಿಕೆಯ ಅಗತ್ಯವಿದೆ. ನೀವು ಈ ಪಾಲಿಸಿಯಲ್ಲಿ ಹೂಡಿಕೆ ಮಾಡಿದರೆ, ನಿವೃತ್ತಿಯ ನಂತರ ದೊಡ್ಡ ಮೊತ್ತದ ಪಿಂಚಣಿ ಪಡೆಯಬಹುದು. ಪ್ರೀಮಿಯಂಗೆ ಬದಲಾಗಿ ಹೆಚ್ಚಿನ ಪಿಂಚಣಿ ಪಡೆಯುವ ಅವಕಾಶವಿದೆ. ಎಲ್ಐಸಿಯ ಈ ಪಾಲಿಸಿಯನ್ನು 30 ವರ್ಷದಿಂದ 79 ವರ್ಷಗಳ ವರೆಗೆ ಯಾವುದೇ ವ್ಯಕ್ತಿ ತೆಗೆದುಕೊಳ್ಳಬಹುದು. ಈ ಯೋಜನೆಗೆ ಯಾವುದೇ ಗರಿಷ್ಠ ಮಿತಿಯನ್ನು ನಿಗದಿಪಡಿಸಲಾಗಿಲ್ಲ.
ಎಲ್ಐಸಿ ಜೀವನ್ ಶಾಂತಿ ಯೋಜನೆಯಲ್ಲಿ ಸಿಗಲಿದೆ ಹೆಚ್ಚಿನ ಪಿಂಚಣಿ
ಈ ಪಾಲಿಸಿಯಲ್ಲಿ ಹೂಡಿಕೆಯ ಮೊತ್ತದ ಮೇಲೆ ಲಾಭ ನಿರ್ಧರಿಸಲಾಗುತ್ತದೆ. ಎಲ್ಐಸಿ ಜೀವನ್ ಶಾಂತಿ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಮಾಸಿಕವಾಗಿ 50 ಸಾವಿರ ಪಿಂಚಣಿಯ ಲಾಭವನ್ನು ಪಡೆಯಬಹುದು. ಮಾಸಿಕ, ಅರ್ಥವಾಷಿಕ, ತ್ರೈಮಾಸಿಕ ಹಾಗೂ ವಾರ್ಷಿಕವಾಗಿ ಈ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ನೀವು 50 ಸಾವಿರ ಮಾಸಿಕ ಪಿಂಚಣಿಗಾಗಿ 50 ಲಕ್ಷ ಹೂಡಿಕೆಯ ಅಗತ್ಯವಿದೆ.
LIC ಯ ಈ ಯೋಜನೆಯಲ್ಲಿ ಸಿಗಲಿದೆ 1 ಲಕ್ಷ ರೂಪಾಯಿ ಪಿಂಚಣಿ
ಇನ್ನು ನೀವು ಮಾಸಿಕ 1 ಲಕ್ಷ ರೂಪಾಯಿ ಪಿಂಚಣಿ ಬಯಸಿದರೆ, ನೀವು 12 ವರ್ಷಗಳ ವರೆಗೆ 1 ಕೋಟಿ ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. 10 ಲಕ್ಷ ಹೂಡಿಕೆಯ ಮೇಲೆ 11,000 ರೂ. ಗಿಂತ ಹೆಚ್ಚಿನ ಮಾಸಿಕ ಪಿಂಚಣಿ ಲಭ್ಯವಿದೆ. ಎಲ್ಐಸಿ ಜೀವನ್ ಶಾಂತಿ ಯೋಜನೆಯಲ್ಲಿ 6.81 ರಿಂದ 14.62 % ಬಡ್ಡಿದರ ಸಿಗಲಿದೆ. ಈ ಯೋಜನೆಯ ವಿಶೇಷವೆಂದರೆ ಇದನ್ನು ಯಾವಾಗ ಬೇಕಾದರೂ ಸರೆಂಡರ್ ಮಾಡಬಹುದಾಗಿದೆ. ಪಾಲಿಸಿದಾರರ ಮರಣದ ನಂತರ ಹೂಡಿಕೆಯ ಮೊತ್ತವು ನಾಮಿನಿಗೆ ಲಭಿಸುತ್ತದೆ.