Ads By Google

LIC Jeevan Labh: LIC ಈ ಯೋಜನೆಯಲ್ಲಿ ಖಾತೆಗೆ ಬರಲಿದೆ 40 ಲಕ್ಷ ರೂ, 195 ರೂ ಹೂಡಿಕೆ ಮಾಡಿ ಇಂದೇ ಯೋಜನೆಗೆ ಸೇರಿ.

LIC New Jeevan Labh Policy

Image Credit: thehindubusinessline

Ads By Google

LIC New Jeevan Labh Policy: Life Insurance Corporation Of India ಹೂಡಿಕೆಗಾಗಿ ವಿವಿಧ ಯೋಜನೆಯನ್ನು ನೀಡುತ್ತಿದೆ. ಜನರಿಗೆ ಜೀವದ ಭದ್ರತೆಗಾಗಿ ಯೋಜನೆಯನ್ನು ನೀಡುವುದರ ಜೊತೆಗೆ ವಿವಿಧ ಉಳಿತಾಯ ಯೋಜನೆಯನ್ನು ಕೂಡ ನೀಡುತ್ತಿದೆ. LIC ಯಲ್ಲಿ ಸಣ್ಣ ಉಳಿತಾಯ ಯೋಜನೆಗಳ ಆಯ್ಕೆ ಸಾಕಷ್ಟಿದೆ.

LIC ಯಲ್ಲಿ ಲಭ್ಯವಿರುವ ದೀರ್ಘವದಿಯ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಲಾಭವನ್ನು ಗಳಿಸಬಹುದಾಗಿದೆ. LIC ನಿಮಗಾಗಿ Jeevan Labh ಯೋಜನೆಯನ್ನು ಪರಿಚಯಿಸಿದೆ.

Image Credit: Aajtak

LIC Jeevan Labh Policy
ದೇಶದಲ್ಲಿ ಜೀವ ವಿಮಾ ಪಾಲಿಸಿ ಹೆಚ್ಚು ಜನಪ್ರಿಯವಾಗಿದೆ. ಭಾರತೀಯ ಜೀವ ವಿಮಾ ನಿಗಮವು ಜನರ ವಿವಿಧ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಹಲವು ರೀತಿಯ ಯೋಜನೆಗಳನ್ನು ನೀಡುತ್ತದೆ. ಇನ್ನು ಇತ್ತೀಚಿನ ದಿನಗಳಲ್ಲಿ ಎಲ್ ಐ ಸಿಯ ಜೀವನ್ ಲಾಭ್ ಯೋಜನೆಯ ಬಗ್ಗೆ ಸಾಕಷ್ಟು ಚರ್ಚೆಗಳು ಆಗುತ್ತಿವೆ. ಈ ಯೋಜನೆಯು ಲಾಭದಾಯಕ ಹಾಗೂ ಸುರಕ್ಷಿತವಾಗಿದೆ. ಇದು ದೀರ್ಘಾವಧಿಯ ಹೂಡಿಕೆಯ ಯೋಜನೆಗಿದ್ದು ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಸಾಕಷ್ಟು ಹಣವನ್ನು ಗಳಿಸಬಹುದಾಗಿದೆ.

LIC ಈ ಯೋಜನೆಯಲ್ಲಿ ಖಾತೆಗೆ ಬರಲಿದೆ 40 ಲಕ್ಷ ರೂ
ಎಲ್ ಐ ಸಿ ಜೀವನ್ ಲಾಭ್ ಯೋಜನೆ ಅರ್ಜಿದಾರರ ವಯಸ್ಸು ಕನಿಷ್ಠ 8 ವರ್ಷದಿಂದ ಗರಿಷ್ಟ 59 ವರ್ಷಗಳಾಗಿರಬೇಕು. ಇನ್ನು ಹೂಡಿಕೆ ಮಾಡಲು ಮಿತಿಯನ್ನು ವಿವಿಧ ರೀತಿಯಲ್ಲಿ ನೀಡಲಾಗುತ್ತಿದೆ. ಪಾಲಿಸಿದಾರರು 10,13 ಮತ್ತು 16 ವರ್ಷಗಳ ವರೆಗೆ ಹೂಡಿಕೆಯನ್ನು ಮಾಡಬಹುದು. LIC ಯ ಈ ಯೋಜನೆಯಲ್ಲಿ 195 ರೂ ಹೂಡಿಕೆ ಮಾಡಿ 40 ಲಕ್ಷ ಲಾಭವನ್ನು ಪಡೆದುಕೊಳ್ಳಬಹುದು.

Image Credit: Aajtak

ಕೇವಲ 195 ರೂ ಹೂಡಿಕೆಯಲ್ಲಿ ಸಿಗಲಿದೆ ಲಕ್ಷ ಲಕ್ಷ ಲಾಭ
LIC Jeevan Labh ಯೋಜನೆಯಲ್ಲಿ ದಿನಕ್ಕೆ 195 ರೂ ಹೂಡಿಕೆ ಮಾಡಿದರೆ ತಿಂಗಳಿಗೆ 5842 ರೂ. ಹೂಡಿಕೆ ಮಾಡಬೇಕಾಗುತ್ತದೆ. ಎಲ್ ಐ ಸಿ ಜೀವನ್ ಲಾಭ್ ಯೋಜನೆಯಲ್ಲಿ ವರ್ಷಕ್ಕೆ 70,188 ರೂ. ಹಣವನ್ನು ಹೂಡಿಕೆ ಮಾಡಬೇಕು. ಇನ್ನು 25 ವರ್ಷಗಳವರೆಗೆ ಹಣವನ್ನು ಠೇವಣಿ ಇಡಬೇಕು.

20 ಲಕ್ಷದ ವರೆಗೆ ಹೂಡಿಕೆ ಮಾಡಿದರೆ ಮೆಚ್ಯುರಿಟಿ ಅವಧಿಯ ಮುಕ್ತಾಯದ ನಂತರ ನಿಮಗೆ ಮೆಚ್ಯೂರಿಟಿ ಸಮಯದಲ್ಲಿ 40,50,000 ರೂ. ಇದರಲ್ಲಿ ರೂ 15 ಲಕ್ಷ ವಿಮಾ ಮೊತ್ತ, ರೂ 11, 00, 347 ಠೇವಣಿ ಮೊತ್ತ ಮತ್ತು ರೂ 18, 75, 000 ಬೋನಸ್ ಮೊತ್ತವಾಗಿರುತ್ತದೆ. ಇನ್ನು ಲಾಭದ ಮೊತ್ತ ನೀವು ಹೂಡಿಕೆ ಮಾಡುವ ಮೊತ್ತದ ಮೇಲೆ ಅವಲಂಭಿತವಾಗಿರುತ್ತದೆ. ಮಾಸಿಕವಾಗಿ ಹೆಚ್ಚು ಹಣವನ್ನು ಹೂಡಿಕೆ ಮಾಡಿದರೆ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ.

Ads By Google
Ramya M: Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.