LIC Loan: ನೀವು LIC ಪಾಲಿಸಿ ಮಾಡಿಸಿದ್ದೀರಾ…? ಹಾಗಾದರೆ ಇಂದೇ ಅರ್ಜಿ ಸಲ್ಲಿಸಿ ಕಡಿಮೆ ಬಡ್ಡಿಗೆ ಸಾಲ ಪಡೆದುಕೊಳ್ಳಿ.
ಎಲ್ ಐ ಸಿ ಪಾಲಿಸಿ ಆದಾರದ ಮೇಲೆ ಕಡಿಮೆ ಬಡ್ಡಿಗೆ ಸಾಲವನ್ನು ಪಡೆಯಬಹುದು.
LIC Policy Loan Application: ದೇಶದ ನಂಬರ್ ಒನ್ ಇನ್ಸೂರೆನ್ಸ್ ಕಂಪನಿ ಆಗಿರುವ ಭಾರತೀಯ ಜೀವ ವಿಮೆ (LIC) ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲವನ್ನು ನೀಡುತ್ತಿದೆ. ವಿವಿಧ ರೀತಿಯ ಪಾಲಿಸಿಯನ್ನು ಎಲ್ ಐಸಿ ನೀಡುತ್ತಿದೆ. ಜನರಿಗೆ ತಮ್ಮ ಭವಿಷ್ಯದ ಭದ್ರತೆಗೆ ಹಣಕಾಸಿನ ನೆರವನ್ನು ಎಲ್ ಐಸಿ ನೀಡುತ್ತಿದೆ.
ಎಲ್ ಐಸಿ ಈಗಾಗಲೇ ಸಾಕಷ್ಟು ಯೋಜನೆಯನ್ನು ಜಾರಿ ಮಾಡಿದೆ. ಜೀವ ವಿಮೆ, ಅಪಘಾತ ವಿಮೆಯ ವಿವಿಧ ಆಯ್ಕೆಗಳು ಜನರಿಗೆ ಸಿಗುತ್ತಿದೆ. ಎಲ್ ಐಸಿ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಜನರು ಹೆಚ್ಚಿನ ಅನುಕೂಲವನ್ನು ಪಡೆದುಕೊಳ್ಳಬಹುದು.
ಎಲ್ ಐಸಿ ಪಾಲಿಸಿಯಲ್ಲಿ ಸಿಗಲಿದೆ ಕಡಿಮೆ ಬಡ್ಡಿದರದಲ್ಲಿ ಸಾಲ
ಎಲ್ ಐಸಿ ಪಾಲಿಸಿ ಆರಂಭಿಸಿದ ಮೂರು ವರ್ಷದ ಬಳಿಕ ಸಾಲವನ್ನು ಪಡೆಯಬಹುದಾಗಿದೆ. ಎಲ್ ಐಸಿ ಪಾಲಿಸಿಯ ಆಧಾರದ ಮೇಲೆ ಸಾಲವನ್ನು ಪಡೆಯಬಹುದು. ಎಲ್ ಐಸಿ ಪಾಲಿಸಿಯ ಆಧಾರದ ಮೇಲೆ ಸಾಲವನ್ನು ಪಡೆದರೆ ಬಡ್ಡಿದರವು ಕಡಿಮೆ ಇರುತ್ತದೆ. ಗೃಹ ಸಾಲದ ಬಡ್ಡಿ ದರಕ್ಕಿಂತಲೂ ಕಡಿಮೆ ಬಡ್ಡಿ ದರದಲ್ಲಿ ಎಲ್ ಐಸಿ ಸಾಲವನ್ನು ನೀಡುತ್ತದೆ.
ಎಲ್ ಐಸಿ ಪಾಲಿಸಿಯ ಸಾಲದ ಬಡ್ಡಿದರ
ಎಲ್ ಐಸಿ ಪಾಲಿಸಿಯ ಪ್ರೀಮಿಯಂ ಆಧಾರದ ಮೇಲೆ ಲೋನ್ ನ ಮೊತ್ತ ಅವಲಂಭಿಸಿರುತ್ತದೆ. ಎಲ್ ಐಸಿ ಪಾಲಿಸಿಯ ಆದರದ ಮೇಲೆ ಲೋನ್ ಪಡೆಯಲು ಕನಿಷ್ಠ 3 ವರ್ಷ ಪ್ರೀಮಿಯಂ ಪಾವತಿಸಬೇಕು. ಪಾಲಿಸಿ ಚಲನೆಯಲ್ಲಿಯೇ ಇರಬೇಕು. ಪಾಲಿಸಿದಾರರು ಸಾಮಾನ್ಯವಾಗಿ ಐದು ವರ್ಷಗಳಲ್ಲಿ 2 ಲಕ್ಷ ರೂ. ಪ್ರೀಮಿಯಂ ಪಾವತಿಸಿದ್ದರೆ ನಿಮಗೆ ಶೇ. 70 ರಿಂದ 80 ರಷ್ಟು ಪ್ರೀಮಿಯಂ ಮೊತ್ತದಷ್ಟು ಸಾಲ ಸಿಗುತ್ತದೆ. ಅಂದರೆ 1.4 ಲಕ್ಷದಿಂದ 1.6 ಲಕ್ಷ ರೂ. ವರೆಗೆ ಸಾಲವನ್ನು ಪಡೆಯಬಹುದು.
ಆನ್ಲೈನ್ ನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸುವ ವಿಧಾನ
*ಎಲ್ ಐಸಿ ಇ ಸರ್ವಿಸ್ ಪೋರ್ಟಲ್ ಗೆ ಭೇಟಿ ನೀಡುವ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
*ebiz.licindia.in ಅಧಿಕೃತ ವೆಬ್ ಸೈಟ್ ನಲ್ಲಿ ಸೈನ್ ಅಪ್ ಮಾಡಿದ ನಂತರ ಎಲ್ ಐಸಿ ಇಂಡಿಯಾದ ಇಬಿಜ್ ಪುಟ ತೆರೆಯುತ್ತದೆ.
*ಪಾಲಿಸಿಗೆ ಸಂಬಂಧಿತ ಎಲ್ಲ ವಿವರವನ್ನು ಭರ್ತಿ ಮಾಡಬೇಕು. ಎಲ್ ಐಸಿ ಪಾಲಿಸಿ ರಿಜಿಸ್ಟರ್ ಆದ ಬಳಿಕ ಎಲ್ ಐಸಿ ಎಲ್ಲ ವಿವರಗಳು ನಿಮಗೆ ತಲುಪುತ್ತದೆ.
*ಎಲ್ ಐಸಿ ಪಾಲಿಸಿಯ ಮೂಲ ಪ್ರತಿ, ಭರ್ತಿ ಮಾಡಿದ ಅರ್ಜಿ, ಆಧಾರ್ ಕಾರ್ಡ್, ಪಾಸ್ಪೋರ್ಟ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ವಿದ್ಯುತ್ ಅಥವಾ ಕರೆಂಟ್ ಬಿಲ್ ಇನ್ನಿತರ ಮುಖ್ಯ ದಾಖಲೆಗಳ ಮಾಹಿತಿಯನ್ನು ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.