Ads By Google

LIC Saral Pension: ಸಿಂಗಲ್ ಪ್ರೀಮಿಯಂ ನಲ್ಲಿ ಪ್ರತಿ ತಿಂಗಳು 12000 ರೂ ಪಿಂಚಣಿ, 60 ವರ್ಷ ಮೇಲ್ಪಟ್ಟವರಿಗೆ LIC ಯಿಂದ ಹೊಸ ಸ್ಕೀಮ್

LIC Saral Pension Scheme Latest Update

Image Credit: Original Source

Ads By Google

LIC Saral Pension Scheme Investment Profit: ಭಾರತೀಯ ಜೀವ ವಿಮೆ ಜನರ ಜೀವದ ರಕ್ಷಣೆಗಾಗಿ ವಿವಿಧ ಜೀವ ವಿಮಾ ಯೋಜನೆಯನ್ನು ನೀಡುತ್ತಿದೆ. ಜೀವ ವಿಮ ಯೋಜನೆಯ ಜೊತೆಗೆ ಕೆಲ ಸಣ್ಣ ಉಳಿತಾಯ ಯೋಜನೆಯನ್ನು ಜನರಿಗಾಗಿ ಪರಿಚಯಿಸಿದೆ.

ನೀವು ಅತಿ ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭವನ್ನು ಗಳಿಸುವಂತಹ ಪಿಂಚಣಿ ಯೋಜನೆಗಳು LIC ಯಲ್ಲಿ ಸಾಕಷ್ಟಿವೆ. ತಮ್ಮ ಭವಿಷ್ಯದ ಭದ್ರತೆಗಾಗಿ ಜನರು ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುವುದು ಸಹಜ. ನಿವೃತ್ತಿಯ ಸಮಯದಲ್ಲಿ ಆರಾಮದಾಯಕ ಜೀವನ ನಿರ್ವಹಣೆಗೆ ಪಿಂಚಣಿ ಯೋಜನೆಗಳು ಹೆಚ್ಚು ಅನುಕೂಲವಾಗುತ್ತದೆ.

Image Credit: Navbharattimes

LIC Saral Pension Scheme
LIC ಇದೀಗ ನಿಮಗಾಗಿ Saral Pension Scheme ಅನ್ನು ಪರಿಚಯಿಸಿದೆ. 60 ವರ್ಷ ಮೇಲ್ಪಟ್ಟ ನಂತರ ಪ್ರತಿ ತಿಂಗಳು ಪಿಂಚಣಿ ಪಡೆಯಲು ಈ ಯೋಜನೆ ಉತ್ತಮವಾಗಿದೆ. ಈ ಯೋಜನೆಯ ಮೂಲಕ ನೀವು ಸಿಂಗಲ್ ಪ್ರೀಮಿಯಂ ನಲ್ಲಿ ಪ್ರತಿ ತಿಂಗಳು ಪಿಂಚಣಿ ಪಡೆಯಬಹುದು. ನಿಮ್ಮ ಹೂಡಿಕೆಯ ಮೊತ್ತದ ಆಧಾರದ ಮೇಲೆ ನಿವೃತ್ತಿಯ ನಂತರ ನೀವು ಮಾಸಿಕ ಪಿಂಚಣಿಯನ್ನು ಪಡೆದು ಆರಾಮದಾಯಕ ನಿವೃತ್ತಿಯ ಬದುಕನ್ನು ಸಾಗಿಸಬಹುದು.

ಸಿಂಗಲ್ ಪ್ರೀಮಿಯಂ ನಲ್ಲಿ ಪ್ರತಿ ತಿಂಗಳು ಪಡೆಯಬಹುದು ಪಿಂಚಣಿ
ಈ ಯೋಜನೆಯ ಹೂಡಿಕೆಯ ಲಾಭದ ಬಗ್ಗೆ ವಿವಿರ ತಿಳಿದುಕೊಂಡು ಯೋಜನೆಗೆ ಅರ್ಜಿ ಸಲ್ಲಿಸಿ ಲಾಭ ಪಡೆಯರಿ. ಎಲ್ ಐಸಿ ಸರಳ ಪಿಂಚಣಿ ಯೋಜನೆಯ ಮೂಲಕ 40 ವರ್ಷದಿಂದ 80 ವರ್ಷದ ವಯಸ್ಸಿನವರು ಈ ಸರಳ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಿ ಯೋಜನೆಯ ಲಾಭವನ್ನು ಪಡೆಯಬಹುದು. ಈ ಪಾಲಿಸಿಯಲ್ಲಿ ಪ್ರೀಮಿಯಂ ಅನ್ನು ಕೇವಲ ಒಂದು ಬಾರಿ ಮಾತ್ರ ಠೇವಣಿ ಮಾಡಲಾಗುತ್ತದೆ. ಇನ್ನು ಪಿಂಚಣಿದಾರರು ಮರಣ ಹೊಂದಿದರೆ, ವ್ಯಕ್ತಿಯ ನಾಮಿನಿ ಠೇವಣಿ ಮಾಡಿದ ಮೊತ್ತದ ಹಣವನ್ನು ಮರಳಿ ಪಡೆಯಬಹುದಾಗಿದೆ.

Image Credit: Maharashtranama

ಒಮ್ಮೆ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಸಿಗಲಿದೆ 12,000 ರೂ ಪಿಂಚಣಿ
LIC ಸರಳ ಪಿಂಚಣಿ ಯೋಜನೆಯ ಪಾಲಿಸಿದಾರರು 6 ತಿಂಗಳ ನಂತರ ಪಾಲಿಸಿಯನ್ನು ಯಾವುದೇ ಸಮಯದಲ್ಲಿ ಬೇಕಾದರೂ ಸರೆಂಡರ್ ಮಾಡಬಹುದಾಗಿದೆ. ಪಾಲಿಸಿ ಪಡೆದ ನಂತರ ಪಾಲಿಸಿದಾರರ ಜೀವತಾವದಿಯವರೆಗೂ ಪಿಂಚಣಿಯ ಪ್ರಯೋಜನವನ್ನು ಪಡೆಯಬಹುದಾಗಿದೆ. ಇನ್ನು ಪಾಲಿಸಿದಾರರ ಮರಣದ ನಂತರ ಹಣವನ್ನು ನಾಮಿನಿಗೆ ನೀಡಲಾಗುತ್ತದೆ.

LIC ಸರಳ ಪಿಂಚಣಿ ಯೋಜನೆಯ ಅಡಿಯಲ್ಲಿ ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಮತ್ತು ವಾರ್ಷಿಕ ಪ್ರೀಮಿಯಂ ಆಯ್ಕೆಯನ್ನು ಆರಿಸಿಕೊಳ್ಳಬಹುದಾಗಿದೆ. ಇನ್ನು 42 ವರ್ಷ ವಯಸ್ಸಿನ ವ್ಯಕ್ತಿಯು 30 ಲಕ್ಷ ರೂ. ವರ್ಷಾಶನವನ್ನು ತೆಗೆದುಕೊಂಡರೆ ಅವರು ಮಾಸಿಕ ಸುಮಾರು 12,388 ರೂ.ಗಳ ಪಿಂಚಣಿ ಪಡೆಯಬಹುದು. ಈ ಯೋಜನೆಯಡಿ ಮಾಸಿಕವಾಗಿ ಕನಿಷ್ಠ 1000 ರೂ. ಹೂಡಿಕೆ ಮಾಡಬಹುದು ಹೂಡಿಕೆಗೆ ಗರಿಷ್ಟ ಮಿತಿಯಿಲ್ಲ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in