LIC Policy: ಇದೊಂದು ಅದ್ಬುತ ಯೋಜನೆ, ಪ್ರತಿ ತಿಂಗಳು ಸಿಗಲಿದೆ 12400 ರೂ ಪಿಂಚಣಿ, LIC ಹೊಸ ಪಿಂಚಣಿ ಯೋಜನೆ.
LIC ಈ ಹೊಸ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗಲಿದೆ 12,400 ರೂ ಪಿಂಚಣಿ.
LIC Saral Pension Yojana: ದೇಶದ ಅತಿ ದೊಡ್ಡ ವಿಮಾ ಕಂಪನಿಯಾಗಿರುವ ಎಲ್ ಐಸಿ (LIC) ಈಗಾಗಲೇ ಹಿರಿಯರಿಗಾಗಿ ವಿವಿಧ ರೀತಿಯ ಪಿಂಚಣಿ ಯೋಜನೆಗಳನ್ನು ಜಾರಿಗೊಳಿಸಿದೆ. ಸಾಮಾನ್ಯವಾಗಿ ಪಿಂಚಣಿ ಯೋಜನೆಯು 60 ವರ್ಷದಿಂದ ಪ್ರಾರಂಭವಾಗುತ್ತದೆ. ಆದರೆ ಇದೀಗ ಎಲ್ ಐಸಿ ಹೊಸ ಯೋಜನೆಯನ್ನು ಬಿಡುಗಡೆ ಮಾಡಿದ್ದು ಈ ಯೋಜನೆಯ ಮೂಲಕ ನೀವು ಕೇವಲ 40 ವರ್ಷದಿಂದಲೇ ಪಿಂಚಣಿಯನ್ನು ಪಡೆಯಬಹುದಾಗಿದೆ.
LIC ಸರಳ ಪಿಂಚಣಿ ಯೋಜನಾ (LIC Saral Pension Yojana)
ಭಾರತೀಯ ಜೀವ ವಿಮೆ ಇದೀಗ 40 ವರ್ಷ ಮೇಲ್ಪಟ್ಟವರಿಗೆ ಪಿಂಚಣಿ ಪಡೆಯುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಎಲ್ ಐಸಿ ಸರಳ ಪಿಂಚಣಿ ಯೋಜನೆಯ ಮೂಲಕ 40 ವರ್ಷದಿಂದ 80 ವರ್ಷದ ವಯಸ್ಸಿನವರು ಈ ಸರಳ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಿ ಯೋಜನೆಯ ಲಾಭವನ್ನು ಪಡೆಯಬಹುದು.
ಈ ಪಾಲಿಸಿಯಲ್ಲಿ ಪ್ರೀಮಿಯಂ ಅನ್ನು ಕೇವಲ ಒಂದು ಬಾರಿ ಮಾತ್ರ ಠೇವಣಿ ಮಾಡಲಾಗುತ್ತದೆ. ಇನ್ನು ಪಿಂಚಣಿದಾರರು ಮರಣ ಹೊಂದಿದರೆ, ವ್ಯಕ್ತಿಯು ಠೇವಣಿ ಮಾಡಿದ ಮೊತ್ತದ ಹಣವನ್ನು ಮರಳಿ ಪಡೆಯಬಹುದಾಗಿದೆ.
LIC ಸರಳ ಪಿಂಚಣಿ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗಲಿದೆ 12400 ರೂ ಪಿಂಚಣಿ
LIC ಸರಳ ಪಿಂಚಣಿ ಯೋಜನೆಯ ಪಾಲಿಸಿದಾರರು 6 ತಿಂಗಳ ನಂತರ ಪಾಲಿಸಿಯನ್ನು ಯಾವುದೇ ಸಮಯದಲ್ಲಿ ಬೇಕಾದರೂ ಸರೆಂಡರ್ ಮಾಡಬಹುದಾಗಿದೆ. ಪಾಲಿಸಿ ಪಡೆದ ನಂತರ ಪಾಲಿಸಿದಾರರ ಜೀವತಾವದಿಯವರೆಗೂ ಪಿಂಚಣಿಯ ಪ್ರಯೋಜನವನ್ನು ಪಡೆಯಬಹುದಾಗಿದೆ.
ಇನ್ನು ಪಾಲಿಸಿದಾರರ ಮರಣದ ನಂತರ ಹಣವನ್ನು ನಾಮಿನಿಗೆ ನೀಡಲಾಗುತ್ತದೆ. 42 ವರ್ಷ ವಯಸ್ಸಿನ ವ್ಯಕ್ತಿಯು 30 ಲಕ್ಷ ರೂ. ವರ್ಷಾಶನವನ್ನು ತೆಗೆದುಕೊಂಡರೆ, ಅವರು ಮಾಸಿಕ ಸುಮಾರು 12,400 ರೂ.ಗಳ ಪಿಂಚಣಿ ಪಡೆಯಬಹುದು.
ಮಾಸಿಕ 1000 ಹೂಡಿಕೆ ಅಗತ್ಯ
ಒಂದು ವೇಳೆ ಜಂಟಿ ಖಾತೆಯಲ್ಲಿ ಪಾಲಿಸಿ ತೆಗೆದುಕೊಂಡಿದ್ದಾರೆ, ಪಾಲಿಸಿದಾರರ ಮರಣದ ನಂತರ ಹಣವನ್ನು ಪತಿ ಅಥವಾ ಹೆಂಡತಿ ಪಿಂಚಣಿ ಪಡೆಯುತ್ತಾರೆ. ಇಬ್ಬರ ಮರಣದ ನಂತರ ಠೇವಣಿಯ ಮೊತ್ತವು ನಾಮಿನಿಗೆ ತಲುಪುತ್ತದೆ.
ಈ ಯೋಜನೆಯಡಿ ಮಾಸಿಕವಾಗಿ ಕನಿಷ್ಠ 1000 ರೂ. ಹೂಡಿಕೆ ಮಾಡಬಹುದು ಹೂಡಿಕೆಗೆ ಗರಿಷ್ಟ ಮಿತಿಯಿಲ್ಲ. LIC ಸರಳ ಪಿಂಚಣಿ ಯೋಜನೆಯ ಅಡಿಯಲ್ಲಿ ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಮತ್ತು ವಾರ್ಷಿಕ ಪ್ರೀಮಿಯಂ ಆಯ್ಕೆಯನ್ನು ಆರಿಸಿಕೊಳ್ಳಬಹುದಾಗಿದೆ.