Licence Cancellation: ಈ 4 ಬ್ಯಾಂಕುಗಳನ್ನ ಮುಚ್ಚಲು ಆದೇಶ ನೀಡಿದ RBI, ಆಘಾತದಲ್ಲಿ ಬ್ಯಾಂಕಿನಲ್ಲಿ ಹಣ ಇಟ್ಟ ಜನರು.
ನಿಯಮಗಳನ್ನ ಪಾಲಿಸದ ಕಾರಣ RBI ದೇಶದ ನಾಲ್ಕು ಬ್ಯಾಂಕುಗಳ ಲೈಸೆನ್ಸ್ ರದ್ದು ಮಾಡಿದೆ.
Bank Licence Cancellation: ಆರ್ ಬಿಐ (RBI) ಇತ್ತೀಚಿಗೆ ಬ್ಯಾಂಕ್ ಗಳಿಗೆ ಸಂಬಂಧಿಸಿದಂತೆ ಅನೇಕ ನಿಯಮಗಳನ್ನು ಜಾರಿಗೊಳಿಸುತ್ತಿದೆ. ದೇಶದಲ್ಲಿ ಸಾಕಷ್ಟು ಸರ್ಕಾರೀ ಬ್ಯಾಂಕ್ ಗಳಿವೆ. ಇನ್ನು ಸರ್ಕಾರೀ ಬ್ಯಾಂಕ್ ಗಳ ಜೊತೆಗೆ ದೇಶದಲ್ಲಿ ಅನೇಕ ಸಹಕಾರಿ ಬ್ಯಾಂಕ್ ಗಳು ಇವೆ. ಇತ್ತೀಚೆಗೆಷ್ಟೇ ಆರ್ ಬಿಐ ಸಹಕಾರಿ ಬ್ಯಾಂಕ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ.
ಆರ್ ಬಿಐ ನಿಯಮಗಳನ್ನು ನಿರ್ಲಕ್ಷಿಸಿದ ಯಾವುದೇ ಬ್ಯಾಂಕ್ ನ ವಿರುದ್ಧ ಕ್ರಮ ಕೈಗೊಳುಯುತ್ತದೆ. ಇದೀಗ ಆರ್ ಬಿಐ ನಿಯಮ ಉಲ್ಲಂಘನೆಯ ಕಾರಣ ಎರಡು ಬ್ಯಾಂಕ್ ನ ಪರವಾನಗಿಯನ್ನು ರದ್ದು ಮಾಡಿದೆ. ಈಗಾಗಲೇ ಆರ್ ಬಿಐ ಸಾಕಷ್ಟು ಬ್ಯಾಂಕ್ ಗಳ ಲೈಸೆನ್ಸ್ ಅನ್ನು ರದ್ದುಪಡಿಸಿದ್ದು ಅದರಲ್ಲಿ ಕರ್ನಾಟಕದ ಕೆಲವು ಸಹಕಾರಿ ಬ್ಯಾಂಕ್ ಗಳು ಕೂಡ ಇವೆ.
RBI ಪರವಾನಗಿ ರದ್ದು ಮಾಡಿರುವ ಬ್ಯಾಂಕ್ ನ ವಿವರ
RBI ಇದೀಗ ಕರ್ನಾಟಕದ ತುಮುಕೂರಿನಲ್ಲಿರುವ ಶ್ರೀ ಶಾರದಾ ಮಹಿಳಾ ಸಹಕಾರಿ ಬ್ಯಾಂಕ್ (Sharada Mahila Co- Operative Bank) ಮತ್ತು ಮಹಾರಾಷ್ಟ್ರದ ಸತಾರದಲ್ಲಿರುವ ಹರಿಹರೇಶ್ವರ ಬ್ಯಾಂಕ್ (Harihareshwara Bank) ವಿರುದ್ಧ ಆರ್ ಬಿಐ ಕಠಿಣ ಕ್ರಮ ಕೈಗೊಂಡಿದೆ. ಶಾರದಾ ಮಹಿಳಾ ಸಹಕಾರಿ ಬ್ಯಾಂಕ್ ಹಾಗೂ ಹರಿಹರೇಶ್ವರ ಬ್ಯಾಂಕ್ ಸಾಕಷ್ಟು ಬಂಡವಾಳ ಮತ್ತು ಗಳಿಕೆಯನ್ನು ಹೊಂದಿಲ್ಲ ಎನ್ನುವ ಕಾರಣಕ್ಕೆ ಆರ್ ಬಿಐ ಈ ನಿರ್ಧಾರವನ್ನು ಕೈಗೊಂಡಿದೆ.
ಶಾರದಾ ಮಹಿಳಾ ಸಹಕಾರಿ ಬ್ಯಾಂಕ್ ಹಾಗೂ ಹರಿಹರೇಶ್ವರ ಬ್ಯಾಂಕ್ ಎಲ್ಲ ರೀತಿಯ ವಹಿವಾಟುಗಳನ್ನು ನಿಲ್ಲಿಸಬೇಕು ಎಂದು ಆರ್ ಬಿಐ ಜುಲೈ 11 2023 ರಿಂದಲೇ ಆದೇಶವನ್ನು ನೀಡಿದೆ. ಎರಡು ಬ್ಯಾಂಕ್ ಗಳು ತಮ್ಮ ಠೇವಣಿದಾರರ ಪ್ರಸ್ತುತ ಆರ್ಥಿಕ ಸ್ಥಿತಿಯ ದೃಷ್ಟಿಯಿಂದ ಅವರ ಸಂಪೂರ್ಣ ಹಣವನ್ನು ಹಿಂದಿರುಗಿಸಲು ಸಾಧ್ಯವಿಲ್ಲ ಎಂದು ಬ್ಯಾಂಕ್ ಹೇಳಿದೆ. ಈ ಬ್ಯಾಂಕ್ ನ ಗ್ರಾಹಕರು ತಮ್ಮ ಒಟ್ಟು ಠೇವಣಿಯನ್ನು ಠೇವಣಿ ವಿಮೆ ಮತ್ತು ಸಾಲ ಗ್ಯಾರಂಟಿ ಕಾರ್ಪೊರೇಷನ್ ನಿಂದ (ಡಿಐಸಿಜಿಸಿ) ಪಡೆಯುತ್ತಾರೆ.
ಈ ಎಲ್ಲಾ ಬ್ಯಾಂಕುಗಳನ್ನ ಮುಚ್ಚಲು ಆದೇಶ ನೀಡಿದ RBI,
ಆರ್ ಬಿಐ ಈಗಾಗಲೇ ಒಟ್ಟು ಐದು ಬ್ಯಾಂಕ್ ಗಳ ಪರವಾನಗಿಯನ್ನು ರದ್ದುಗೊಳಿಸಿದೆ. RBI ಬುಲ್ಧಾನಾ ಮೂಲದ ಮಲ್ಕಾಪುರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಮತ್ತು ಬೆಂಗಳೂರು ಮೂಲದ ಸುಶ್ರುತಿ ಸೌಹಾರ್ದ ಸಹಕಾರ ಬ್ಯಾಂಕ್, ಕರ್ನಾಟಕದ ತುಮುಕೂರಿನಲ್ಲಿರುವ ಶ್ರೀ ಶಾರದಾ ಮಹಿಳಾ ಸಹಕಾರಿ ಬ್ಯಾಂಕ್ ಮತ್ತು ಮಹಾರಾಷ್ಟ್ರದ ಸತಾರದಲ್ಲಿರುವ ಹರಿಹರೇಶ್ವರ ಬ್ಯಾಂಕ್, ಯುನೈಟೆಡ್ ಇಂಡಿಯಾ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್ ವಿರುದ್ಧ ಆರ್ ಬಿಐ ಕಠಿಣ ಕ್ರಮ ಕೈಗೊಂಡಿದೆ. ಈ ಎಲ್ಲಾ ಬ್ಯಾಂಕುಗಳ ವ್ಯವಹಾರವನ್ನು ಮುಚ್ಚಲು ಆರ್ ಬಿಐ ಆದೇಶ ನೀಡಿದೆ.