Life Certificate: ಪಿಂಚಣಿದಾರರಿಗೆ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್, ಈಗ ಈ ಆಪ್ ಬಳಸಿ ಜೀವನ ಪ್ರಮಾಣಪತ್ರ ಸಲ್ಲಿಸಿ.

ಜೀವನ ಪ್ರಮಾಣಪತ್ರ ವಿಷಯವಾಗಿ ಇನ್ನೊಂದು ಗುಡ್ ನ್ಯೂಸ್ ನೀಡಿದ ಕೇಂದ್ರ.

Jeevan Praman Application For Life Certificate Submission: ನಿವೃತ್ತಿಯ ನಂತರ ಆರ್ಥಿಕವಾಗಿ ಬೆಂಬಲ ನೀಡಲು ಹಾಗೂ ವ್ಯಕ್ತಿಗಳು ನಿವೃತ್ತಿ ಕಾರ್ಪಸ್ ಅನ್ನು ನಿರ್ಮಿಸಲು ಸಹಾಯ ಮಾಡಲು ಸರ್ಕಾರ ವಿವಿಧ ಪಿಂಚಣಿ ಯೋಜನೆಗಳನ್ನು ಪರಿಚಯಿಸಿದೆ. ಇನ್ನು ಕೇಂದ್ರ ಸರ್ಕಾರವು ಪಿಂಚಣಿಯ ಯೋಜನೆಯನ್ನು ಪರಿಚಯಿಸುವುದರ ಜೊತೆಗೆ ಪಿಂಚಣಿದಾರರಿಗೆ ವಿವಿಧ ಸೌಲಭ್ಯವನ್ನು ನೀಡುತ್ತದೆ.

ಇನ್ನು ಪಿಂಚಣಿದಾರರು ಹೆಚ್ಚಾಗಿ ವೃದ್ಧರಿಗೆ ಲಭ್ಯವಾಗುವ ಕಾರಣ ಅವರಿಗೆ ಹೆಚ್ಚಿನ ಸೌಲಭ್ಯದ ಅಗತ್ಯ ಇರುತ್ತವೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪಿಂಚಣಿದಾರರಿಗೆ ಮಹತ್ವದ ಸೇವೆಯನ್ನು ನೀಡಲು ಮುಂದಾಗಿದೆ. ಪಿಂಚಣಿಯನ್ನು ಪಡೆಯಲು, ವ್ಯಕ್ತಿಗಳು ತಮ್ಮ ಖಾತೆಗೆ ಪಿಂಚಣಿಯನ್ನು ವಿತರಿಸಲು ಅಧಿಕಾರ ಹೊಂದಿರುವ ಸಂಸ್ಥೆಗೆ ಜೀವನ ಪ್ರಮಾಣಪತ್ರವನ್ನು (Life Certificate) ಒದಗಿಸಬೇಕಾಗುತ್ತದೆ. ಇದೀಗ ಈ ಜೀವನ್ ಪ್ರಮಾಣಪತ್ರ ಸಲ್ಲಿಕೆಗೆ ಸರ್ಕಾರ ಹೊಸ ಸೌಲಭ್ಯವನ್ನು ನೀಡಿದೆ.

Jeevan Praman Application
Image Source: SA Post

ಜೀವಿತ ಪ್ರಮಾಣ ಪತ್ರ ಎಂದರೇನು..?
ಜೀವಿತ ಪ್ರಮಾಣ ಪತ್ರವು ಭಾರತ ಸರ್ಕಾರದ ಪಿಂಚಣಿ ಯೋಜನೆಯ ಡಿಜಿಟಲ್ ಲೈಫ್ ಪ್ರಮಾಣಪತ್ರವಾಗಿದೆ. ಇದು ಪಿಂಚಣಿದಾರರಿಗೆ ಆಧಾರ್ ಆಧಾರಿತ ಡಿಜಿಟಲ್ ಸೇವೆಯಾಗಿದ್ದು, ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆಯಿಂದ ಬೆಂಬಲಿತವಾಗಿದೆ. ಈ ಜೀವನ ಪ್ರಮಾಣಪತ್ರವು ಪಿಂಚಣಿ ಪಡೆಯಲು ಅವರ ಅಸ್ತಿತ್ವದ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಪಿಂಚಣಿದಾರರು ಪ್ರತಿ ವರ್ಷ ನವೆಂಬರ್ 30 ರೊಳಗೆ ತಮ್ಮ ಜೀವನ ಪ್ರಮಾಣಪತ್ರವನ್ನು ಸಲ್ಲಿಸುತ್ತಾರೆ.

ಇನ್ನುಮುಂದೆ ಮನೆಯಿಂದಲೇ ಜೀವಿತ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಬಹುದು
ಇದೀಗ ಕೇಂದ್ರ ಸರ್ಕಾರ ಅನಾರೋಗ್ಯ ಪೀಡಿತರಿಗೆ ಮನೆಯಲ್ಲಿಯೇ ಜೀವಿತ ಪ್ರಮಾಣ ಪತ್ರವನ್ನು ಪಡೆಯಲು ಅವಕಾಶ ನೀಡಿದೆ. ಪಿಂಚಣಿಗೆ ಅರ್ಹರಾದ ವ್ಯಕ್ತಿಗಳು ತಮ್ಮ ಜೀವಿತ ಪ್ರಮಾಣ ಪತ್ರವನ್ನು ಸಲ್ಲಿಸಲು ಅಗತ್ಯವಿದ್ದಲ್ಲಿ ಬ್ಯಾಂಕ್ ಸಿಬ್ಬಂಧಿಯನ್ನೇ ಮನೆಗೆ ಕರೆಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಬ್ಯಾಂಕ್ ಸಿಬ್ಬಂದಿಯನ್ನು ಮನೆಗೆ ಕರೆಸಿಕೊಳ್ಳುವ ಬದಲು ಡಿಜಿಟಲ್ ಮೂಲಕ ಪಿಂಚಣಿದಾರರು ತಮ್ಮ ಮುಖ ಚಹರೆಯನ್ನು ಬಳಸಿ ಜಿವಿತಾ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

Jeevan Praman Application
Image Source: Mint

ಈಗ ಈ ಆಪ್ ಬಳಸಿ ಜೀವನ ಪ್ರಮಾಣಪತ್ರ ಸಲ್ಲಿಸಿ
ಪಿಂಚಣಿದಾರರು Jeevan Praman Portal ಮೂಲಕ ತಮ್ಮ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬಹುದು. ಪಿಂಚಣಿದಾರರು ಪೋರ್ಟಲ್‌ ನಿಂದ Jeevan Praman Application ಅನ್ನು ಡೌನ್‌ ಲೋಡ್ ಮಾಡಬೇಕಾಗುತ್ತದೆ. ಹಾಗೆಯೆ ಪಿಂಚಣಿದಾರರು UIDAI ಗೆ ಅಗತ್ಯವಿರುವ ಪರಿಕರಗಳನ್ನು ಬಳಸಿಕೊಂಡು ತಮ್ಮ ಬೆರಳಚ್ಚುಗಳನ್ನು ಸಲ್ಲಿಸಬೇಕಾಗುತ್ತದೆ. ಫಿಂಗರ್‌ ಪ್ರಿಂಟ್ ರೀಡರ್ ಅನ್ನು ಸ್ಮಾರ್ಟ್‌ ಫೋನ್‌ ಗೆ ಸಂಪರ್ಕಿಸಲು OTG ಕೇಬಲ್ ಅನ್ನು ಬಳಸಬಹುದು. ಜೀವನ್ ಪ್ರಮಾಣ ವೆಬ್‌ ಸೈಟ್‌ ನಲ್ಲಿ UIDAI ಕಡ್ಡಾಯಗೊಳಿಸಿದ ಸಾಧನಗಳ ಪಟ್ಟಿ ಇದೆ.

Join Nadunudi News WhatsApp Group

Join Nadunudi News WhatsApp Group