Indian Pension: ನ. 16 ರೊಳಗೆ ಈ ಕೆಲಸ ಮಾಡದಿದ್ದರೆ ಪಿಂಚಣಿ ರದ್ದು, ಪಿಂಚಣಿ ಪಡೆಯುವ ಎಲ್ಲರಿಗೂ ಹೊಸ ನಿಯಮ.

ನವೆಂಬರ್ 16 ರ ಒಳಗೆ ಪಿಂಚಣಿದಾರರು ಈ ಕೆಲಸ ಮಾಡದಿದ್ದರೆ ಪಿಂಚಣಿ ರದ್ದಾಗಲಿದೆ.

Life Certificate For Pension Scheme: ಕೇಂದ್ರ ಸರ್ಕಾರ (Central Government) ವಿವಿಧ ಪಿಂಚಣಿಯ ಯೋಜನೆಯನ್ನು (Pension Scheme)  ಪರಿಚಯಿಸಿದೆ. ನಿವೃತ್ತಿಯ ನಂತರ ಆರ್ಥಿಕವಾಗಿ ಸ್ಥಿರತೆ ಕಾಣಲು ಈ ಪಿಂಚಣಿ ಯೋಜನೆಗಳು ಸಹಾಯವಾಗುತ್ತದೆ.

ಈಗಾಗಲೇ ದೇಶದಲ್ಲಿ ಕೋಟ್ಯಂತರ ಜನರು ವಿವಿಧ ಪಿಂಚಣಿಯ ಯೋಜನೆಯಲ್ಲಿ ಹೂಡಿಕೆಯನ್ನು ಆರಂಭಿಸಿದ್ದಾರೆ. ಸದ್ಯ ಪಿಂಚಣಿದಾರರಿಗೆ ಕೇಂದ್ರ ಸರ್ಕಾರ ಮಹತ್ವದ ಮಾಹಿತಿಯನ್ನು ಹೊರಡಿಸಿದೆ. ಪಿಂಚಣಿ ಪಡೆಯುವವರು ನಿಗದಿತ ಸಮಯದೊಳಗೆ ಈ ಕೆಲಸ ಮಾಡುವುದು ಅಗತ್ಯವಾಗಿದೆ.

Life Certificate For Pension Scheme
Image Credit: Informalnewz

ಪಿಂಚಣಿದಾರರಿಗೆ ಜೀವಿತ ಪ್ರಮಾಣ ಪತ್ರ (Life Certificate) ಅಗತ್ಯ
ನಿವೃತ್ತಿಯ ನಂತರ ಆರ್ಥಿಕವಾಗಿ ಬೆಂಬಲ ನೀಡಲು ಹಾಗೂ ವ್ಯಕ್ತಿಗಳು ನಿವೃತ್ತಿ ಕಾರ್ಪಸ್ ಅನ್ನು ನಿರ್ಮಿಸಲು ಸಹಾಯ ಮಾಡಲು ಸರ್ಕಾರ ವಿವಿಧ ಪಿಂಚಣಿ ಯೋಜನೆಗಳನ್ನು ಪರಿಚಯಿಸಿದೆ. ಆದರೆ ಪಿಂಚಣಿಯನ್ನು ಪಡೆಯಲು, ವ್ಯಕ್ತಿಗಳು ತಮ್ಮ ಖಾತೆಗೆ ಪಿಂಚಣಿಯನ್ನು ವಿತರಿಸಲು ಅಧಿಕಾರ ಹೊಂದಿರುವ ಸಂಸ್ಥೆಗೆ ಜೀವ ಪ್ರಮಾಣಪತ್ರವನ್ನು ಒದಗಿಸಬೇಕಾಗುತ್ತದೆ.

ಜೀವಿತ ಪ್ರಮಾಣ ಪತ್ರವು ಭಾರತ ಸರ್ಕಾರದ ಪಿಂಚಣಿ ಯೋಜನೆಯ ಡಿಜಿಟಲ್ ಲೈಫ್ ಪ್ರಮಾಣಪತ್ರವಾಗಿದೆ. ಇದು ಪಿಂಚಣಿದಾರರಿಗೆ ಆಧಾರ್ ಆಧಾರಿತ ಡಿಜಿಟಲ್ ಸೇವೆಯಾಗಿದ್ದು, ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆಯಿಂದ ಬೆಂಬಲಿತವಾಗಿದೆ.ಈ ಜೀವನ ಪ್ರಮಾಣಪತ್ರವು ಪಿಂಚಣಿ ಪಡೆಯಲು ಅವರ ಅಸ್ತಿತ್ವದ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಸದ್ಯ ಸರ್ಕಾರ ಈ ಜೀವನ್ ಪ್ರಮಾಣಪತ್ರ ಸಲ್ಲಿಕೆಯ ಬಗ್ಗೆ ಪಿಂಚಣಿದಾರರಿಗೆ ಮಹತ್ವದ ಮಾಹಿತಿ ನೀಡಿದೆ.

Life Certificate For Pension Scheme
Image Credit: Zeebiz

ನ. 16 ರೊಳಗೆ ಈ ಕೆಲಸ ಮಾಡದಿದ್ದರೆ ಪಿಂಚಣಿ ರದ್ದು
ಪಿಂಚಣಿ ಪಡೆಯುವ ಪ್ರತಿಯೊಬ್ಬರು ಕೊಡ ಸರ್ಕಾರ ಈ ನಿಯಮವನ್ನು ಪಾಲಿಸಬೇಕಿದೆ. ಪಿಂಚಣಿದಾರರು ಈ ನಿಯಮವನ್ನು ಪಾಲಿಸದಿದ್ದರೆ ನಿಮ್ಮ ಪಿಂಚಣಿಯು ರದ್ದಾಗುವ ಸಾಧ್ಯತೆ ಹೆಚ್ಚಿರುತ್ತದೆ. ಪಿಂಚಣಿದಾರರಿಗೆ ಜೀವನ್ ಪ್ರಮಾಣಪತ್ರ ಅಗತ್ಯವಾಗಿರುವ ಕಾರಣ November 16 ರೊಳಗೆ ಪಿಂಚಣಿದಾರರು ಜೀವನ್ ಪ್ರಮಾಣಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

Join Nadunudi News WhatsApp Group

ಈ ಆಪ್ ನ ಸುಲಭವಾಗಿ ಜೀವನ ಪ್ರಮಾಣಪತ್ರ ಸಲ್ಲಿಸಬಹುದು
ಪಿಂಚಣಿದಾರರು Jeevan Praman Portal ಮೂಲಕ ತಮ್ಮ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬಹುದು. ಪಿಂಚಣಿದಾರರು ಪೋರ್ಟಲ್‌ ನಿಂದ Jeevan Praman Application ಅನ್ನು ಡೌನ್‌ ಲೋಡ್ ಮಾಡಬೇಕಾಗುತ್ತದೆ. ಹಾಗೆಯೆ ಪಿಂಚಣಿದಾರರು UIDAI ಗೆ ಅಗತ್ಯವಿರುವ ಪರಿಕರಗಳನ್ನು ಬಳಸಿಕೊಂಡು ತಮ್ಮ ಬೆರಳಚ್ಚುಗಳನ್ನು ಸಲ್ಲಿಸಬೇಕಾಗುತ್ತದೆ. ಫಿಂಗರ್‌ ಪ್ರಿಂಟ್ ರೀಡರ್ ಅನ್ನು ಸ್ಮಾರ್ಟ್‌ ಫೋನ್‌ ಗೆ ಸಂಪರ್ಕಿಸಲು OTG ಕೇಬಲ್ ಅನ್ನು ಬಳಸಬಹುದು.

Join Nadunudi News WhatsApp Group