Ads By Google

Life Certificate: ಪ್ರತಿ ತಿಂಗಳು ಪಿಂಚಣಿ ಹಣ ಪಡೆಯುವವರು ನ 30 ರೊಳಗೆ ಈ ಕೆಲಸ ಮಾಡಿ

Life Certificate Latest Update

Image Source: Zee News

Ads By Google

Life Certificate Latest Update: ಸದ್ಯ ದೇಶದಲ್ಲಿ ಪಿಂಚಣಿ ಪಡೆಯುವ ನಿಯಮದಲ್ಲಿ ಮಹತ್ವದ ಬದಲಾವಣೆ ಆಗಲಿದೆ. ಸರ್ಕಾರ ಪಿಂಚಣಿ ಪಡೆಯುವವರಿಗೆ ಮಹತ್ವದ ನಿಯಮ ರೂಪಿಸಿದೆ. ಇನ್ನು 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪಿಂಚಣಿದಾರರು ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸಬೇಕು ಎಂದು ಸರ್ಕಾರ ಆದೇಶಿಸಿದೆ.

ಈ ಜೀವನ್ ಪ್ರಮಾಣ ಪತ್ರವು ಪಿಂಚಣಿ ಪಡೆಯಲು ಅವರ ಅಸ್ತಿತ್ವದ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. Life Certificate ಭಾರತ ಸರ್ಕಾರದ ಪಿಂಚಣಿ ಯೋಜನೆಯ ಡಿಜಿಟಲ್ ಲೈಫ್ (Digital Life) ಪ್ರಮಾಣಪತ್ರವಾಗಿದೆ. ಇದು ಪಿಂಚಣಿದಾರರಿಗೆ ಆಧಾರ್ ಆಧಾರಿತ ಡಿಜಿಟಲ್ ಸೇವೆಯಾಗಿದ್ದು, ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆಯಿಂದ ಬೆಂಬಲಿತವಾಗಿದೆ. ಪ್ರತಿ ತಿಂಗಳು ಪಿಂಚಣಿ ಪಡೆಯುವ ಪ್ರತಿಯೊಬ್ಬರೂ ಈ ನಿಯಮವನ್ನು ಪಾಲಿಸುವುದು ಕಡ್ಡಾಯವಾಗಿದೆ.

Image Credit: ABP News

ಪ್ರತಿ ತಿಂಗಳು ಪಿಂಚಣಿ ಹಣ ಪಡೆಯುವವರು ನ 30 ರೊಳಗೆ ಈ ಕೆಲಸ ಮಾಡಿ
ಸದ್ಯ ಕೇಂದ್ರ ಸರ್ಕಾರ ಪ್ರತಿ ತಿಂಗಳು ಪಿಂಚಣಿ ಪಡೆಯುವವರಿಗೆ ಮಹತ್ವದ ನಿಯಮವನ್ನು ಪರಿಚಯಿಸಿದ್ದಾರೆ. ಪ್ರತಿ ಪಿಂಚಣಿದಾರವು ಕೂಡ ಜೀವನ್ ಪ್ರಮಾಣ ಪತ್ರವನ್ನು (Life Certificate) ಅನ್ನು ಸಲ್ಲಿಸುವುದು ಕಡ್ಡಾಯವಾಗಿದೆ. November 30 ರೊಳಗೆ ಪಿಂಚಣಿದಾರರು Life Certificate ಸಲ್ಲಿಸುವುದು ಕಡ್ಡಾಯವಾಗಿದೆ.

ನಿಗದಿತ ಸಮಯದೊಳಗೆ ಲೈಫ್ ಸರ್ಟಿಫಿಕೇಟ್ ಅನ್ನು ಸಲ್ಲಿಸದಿದ್ದರೆ ಅಂತವರ ಪಿಂಚಣಿ ರದ್ದಾಗಲಿದೆ. ಪಿಂಚಣಿದಾರರು ಪ್ರತಿ ವರ್ಷ ತಮ್ಮ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಲೈಫ್ ಸರ್ಟಿಫಿಕೇಟ್ ಸಲ್ಲಿಸಿದರೆ ನೀವು ಬದುಕಿದ್ದೀರಿ ಎಂದರ್ಥ. ನೀವು ಇನ್ನೂ ಜೀವನ ಪ್ರಮಾಣಪತ್ರವನ್ನು ಸಲ್ಲಿಸದಿದ್ದರೆ, ನೀವು ಈ ಕೆಲಸವನ್ನು ಆನ್‌ ಲೈನ್ ಮತ್ತು ಆಫ್‌ ಲೈನ್‌ ನಲ್ಲಿ ಮಾಡಬಹುದು. ಈ ಕೆಳಗಿನ ಸುಲಭ ವಿಧಾನದ ಮೂಲಕ ನೀವು ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸಬಹುದು.

Image Credit: Zeebiz

ಜೀವ ಪ್ರಮಾಣಪತ್ರ ಸಲ್ಲಿಸುವ ವಿಧಾನ ಹೇಗೆ..?
•India Post Payments Bank (IPPB) ಮೂಲಕ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬಹುದು. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಪೋಸ್ಟ್‌ ಮ್ಯಾನ್ ಮತ್ತು ಗ್ರಾಮೀಣ ಡಾಕ್ ಸೇವಕ್ ಮೂಲಕ ಈ ಸೌಲಭ್ಯವನ್ನು ಒದಗಿಸುತ್ತಿದೆ.

•ಪಿಂಚಣಿದಾರರು ಜೀವನ್ ಪ್ರಮಾಣ್ ಪೋರ್ಟಲ್‌ ಗೆ ಭೇಟಿನೀಡುವ ಮೂಲಕ ಮನೆಯಲ್ಲೇ ಕುಳಿತು ಜೀವನ ಪ್ರಮಾಣಪತ್ರವನ್ನು ಸಲ್ಲಿಸಬಹುದು. ಆಧಾರ್ ನಿಯಂತ್ರಕ UIDAI ಪಿಂಚಣಿದಾರರ ಗುರುತನ್ನು ಪರಿಶೀಲಿಸಲು ಎಲ್ಲಾ ಬಯೋಮೆಟ್ರಿಕ್ ಸಾಧನಗಳ ವಿವರಗಳನ್ನು ನೀಡಿದೆ. ಇದನ್ನು ಪಿಂಚಣಿದಾರರು ಆಧಾರ್ ನಿಯಂತ್ರಕ ವೆಬ್‌ ಸೈಟ್‌ ನಲ್ಲಿ ನೋಡಬಹುದು.

•ನಿಮ್ಮ ಬ್ಯಾಂಕ್‌ ಗೆ ಭೇಟಿ ನೀಡುವ ಮೂಲಕ ನೀವು ಮನೆ ಬಾಗಿಲಿನ ಬ್ಯಾಂಕಿಂಗ್ ಸೌಲಭ್ಯವನ್ನು ಪಡೆಯಬಹುದು. ಇದಕ್ಕಾಗಿ ಮೊಬೈಲ್ ಅಪ್ಲಿಕೇಶನ್, ವೆಬ್‌ ಸೈಟ್ ಅಥವಾ ಟೋಲ್ ಫ್ರೀ ಸಂಖ್ಯೆ ಮೂಲಕ ಬುಕಿಂಗ್ ಮಾಡಲಾಗುತ್ತದೆ.

•ವಿದೇಶದಲ್ಲಿ ಕುಳಿತಿರುವ ಪಿಂಚಣಿದಾರರು ಜೀವನ್ ಪ್ರಮಾಣ ವೆಬ್‌ ಸೈಟ್ ಮೂಲಕ ಆನ್‌ ಲೈನ್‌ ನಲ್ಲಿ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬಹುದು.

•ಪಿಂಚಣಿದಾರರು ವೈಯಕ್ತಿಕವಾಗಿ ಜೀವನ ಪ್ರಮಾಣಪತ್ರವನ್ನು Pension Disbursing Authorities (PDA) ಸಲ್ಲಿಸಬಹುದು. ಪಿಂಚಣಿದಾರರು ಭೌತಿಕವಾಗಿ ಇರಲು ಬಯಸದಿದ್ದರೆ. ನಂತರ ಅವರು ಜೀವನ ಪ್ರಮಾಣಪತ್ರವನ್ನು ಗೊತ್ತುಪಡಿಸಿದ ಅಧಿಕಾರಿಯಿಂದ ಸಹಿ ಪಡೆದು ಸಲ್ಲಿಸಬಹುದು.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in