Online Facilities: ಪಿಂಚಣಿ ಪಡೆಯುವ ವೃದ್ಧರಿಗೆ ಕೇಂದ್ರದಿಂದ ಇನ್ನೊಂದು ಹೊಸ ಸೇವೆ, ಇನ್ನುಮುಂದೆ ಆನ್ಲೈನ್ ನಲ್ಲಿ ಈ ಸೇವೆ ಲಭ್ಯ.
ಪಿಂಚಣಿದಾರರಿಗೆ ಗುಡ್ ನ್ಯೂಸ್, ಆನ್ಲೈನ್ ನಲ್ಲಿ ಈ ಸೇವೆ ಲಭ್ಯ.
Life Certificate Submission In Online: ಸದ್ಯ ದೇಶದಲ್ಲಿ ಅನೇಕ ನಿಯಮಗಳ ಬದಲಾವಣೆಯ ಜೊತೆಗೆ ಪಿಂಚಣಿ ಯೋಜನೆಯ ನಿಯಮಗಳು ಕೂಡ ಬದಲಾಗುತ್ತಿದೆ. ನಿವೃತ್ತಿಯ ನಂತರ ಆರ್ಥಿಕವಾಗಿ ಬೆಂಬಲ ನೀಡಲು ಹಾಗೂ ವ್ಯಕ್ತಿಗಳು ನಿವೃತ್ತಿ ಕಾರ್ಪಸ್ ಅನ್ನು ನಿರ್ಮಿಸಲು ಸಹಾಯ ಮಾಡಲು ಸರ್ಕಾರ ವಿವಿಧ ಪಿಂಚಣಿ ಯೋಜನೆಗಳನ್ನು ಪರಿಚಯಿಸಿದೆ.
ಆದರೆ ಪಿಂಚಣಿಯನ್ನು ಪಡೆಯಲು, ವ್ಯಕ್ತಿಗಳು ತಮ್ಮ ಖಾತೆಗೆ ಪಿಂಚಣಿಯನ್ನು ವಿತರಿಸಲು ಅಧಿಕಾರ ಹೊಂದಿರುವ ಸಂಸ್ಥೆಗೆ ಜೀವನ್ ಪ್ರಮಾಣ ಪತ್ರವನ್ನು (Life Certificate) ಒದಗಿಸಬೇಕಾಗುತ್ತದೆ. ಸದ್ಯ 60 ವರ್ಷ ಮೇಲ್ಪಟ್ಟವರಿಗೆ ಈ ಸೇವೆಯನ್ನು ಆನ್ಲೈನ್ ನಲ್ಲಿ ನೀಡಲು ಸರ್ಕಾರ ಮುಂದಾಗಿದೆ. ಈ ಮೂಲಕ ನಿವೃತ್ತಿಯ ನಂತರ ಪಿಂಚಣಿ ಪಡೆಯುವವರು ಸರಕಾರ ಸಹಾಯ ಮಾಡುತ್ತಿದೆ.
ಜೀವನ್ ಪ್ರಮಾಣ ಪತ್ರ (Life Certificate)
ಜೀವನ್ ಪ್ರಮಾಣ ಪತ್ರವು ಭಾರತ ಸರ್ಕಾರದ ಪಿಂಚಣಿ ಯೋಜನೆಯ ಡಿಜಿಟಲ್ ಲೈಫ್ ಪ್ರಮಾಣಪತ್ರವಾಗಿದೆ. ಇದು ಪಿಂಚಣಿದಾರರಿಗೆ ಆಧಾರ್ ಆಧಾರಿತ ಡಿಜಿಟಲ್ ಸೇವೆಯಾಗಿದ್ದು, ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆಯಿಂದ ಬೆಂಬಲಿತವಾಗಿದೆ. ಈ ಜೀವನ್ ಪ್ರಮಾಣ ಪತ್ರವು ಪಿಂಚಣಿ ಪಡೆಯಲು ಅವರ ಅಸ್ತಿತ್ವದ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ.
ಈ ದಿನಾಂಕದೊಳಗೆ ಜೀವನ್ ಪ್ರಮಾಣ ಪತ್ರ ಸಲ್ಲಿಕೆ ಕಡ್ಡಾಯ
ಇನ್ನು 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪಿಂಚಣಿದಾರರು ನವೆಂಬರ್ 30 ರೊಳಗೆ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸಬೇಕು ಎಂದು ಸರ್ಕಾರ ಆದೇಶಿಸಿದೆ. ಆದರೆ ಸಮಯವಾಗಿ ಈ ಪಿಂಚಣಿ ಪಡೆಯುವವರು ವೃದ್ಧರಾಗಿರುತ್ತಾರೆ. ಹೀಗಾಗಿ ಸರ್ಕಾರ ವೃದ್ಧರಿಗೆ ಸಹಾಯವಾಗಲು ಈ ಸೇವೆಯನ್ನು ಆನ್ಲೈನ್ ನಲ್ಲಿಯೇ ನೀಡಲು ಮುಂದಾಗಿದೆ. ನೀವು ಜೀವನ್ ಪ್ರಮಾಣ ಪತ್ರವನ್ನು Online ಅಲ್ಲಿ ಸುಲಭವಾಗಿ ಸಲ್ಲಿಸಬಹುದಾಗಿದೆ.
ಆನ್ಲೈನ್ ನಲ್ಲಿ ಜೀವನ್ ಪ್ರಮಾಣ ಪತ್ರ ಸಲ್ಲಿಸುವುದು ಹೇಗೆ..?
ಜೀವನ್ ಪ್ರಮಾಣ ಪತ್ರವನ್ನು ಆನ್ಲೈನ್ ಅಲ್ಲಿ ಸಲ್ಲಿಸಲು ಪಿಂಚಣಿದಾರರು ವೆಬ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಡಿಜಿಟಲ್ ಜೀವನ್ ಪ್ರಮಾಣ ಪತ್ರವನ್ನು ರಚಿಸಬೇಕು. ಇದಕ್ಕಾಗಿ ನೀವು ನಿಮ್ಮ ಹತ್ತಿರದ ಜೀವನ್ ಪ್ರಮಾಣ ಪತ್ರ ಕೇಂದ್ರಕ್ಕೆ ಭೇಟಿನೀಡಿ ಈ ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕು. ಈ ಕೆಳಗಿನ ಎಲ್ಲ ಮುಖ್ಯ ಧಾಖಲೆಯನ್ನು ಹೊಂದಿದ್ದರೆ ಯಾವುದೇ ಸಮಸ್ಯೆಯಿಲ್ಲದೆ ಮನೆಯಲ್ಲಿಯೇ ಕುಳಿತು ನಿಮ್ಮ ಪಿಂಚಣಿ ಯೋಜನೆಗಳಿಗೆ Life Certificate ಅನ್ನು ಸಲ್ಲಿಸಬಹುದು.
ಕೇಂದ್ರಕ್ಕೆ ಸಲ್ಲಿಸಬೇಕಾದ ದಾಖಲೆಯ ವಿವರ
*ಆಧಾರ್ ಸಂಖ್ಯೆ
*ಪಿಂಚಣಿ ಪಾವತಿ ಆದೇಶ
*ಬ್ಯಾಂಕ್ ಖಾತೆ ವಿವರ
*ಮೊಬೈಲ್ ಸಂಖ್ಯೆ
ಅರ್ಜಿ ಸಲ್ಲಿಕೆಗೆ ಬೇಕಾಗುವ ಮುಖ್ಯ ದಾಖಲೆಗಳ ವಿವರ ಇಲ್ಲಿದೆ
*ಆಧಾರ್ ಸಂಖ್ಯೆ
*ಬಯೋಮೆಟ್ರಿಕ್ಸ್ ಸ್ಕ್ಯಾನ್
*ಇಂಟರ್ನೆಟ್ ಸಂಪರ್ಕ
*ಪಿಂಚಣಿ ಪಾವತಿ ಆದೇಶ
*ಬ್ಯಾಂಕ್ ವಿವರ
*ಪಿಂಚಣಿ ಮಂಜೂರಾತಿ ಪ್ರಾಧಿಕಾರದ ವಿವರಗಳು
*ಪಿಂಚಣಿ ವಿತರಣಾ ಪ್ರಾಧಿಕಾರದ ವಿವರಗಳು