Life Certificate: ಪ್ರತಿ ತಿಂಗಳು ಪಿಂಚಣಿ ಹಣ ಪಡೆಯುವವರು ತಕ್ಷಣ ಈ ಕೆಲಸ ಮುಗಿಸಿಕೊಳ್ಳಿ, ರದ್ದಾಗಲಿದೆ ನಿಮ್ಮ ಪಿಂಚಣಿ ಹಣ.
ಪ್ರತಿ ತಿಂಗಳು ಪಿಂಚಣಿ ಹಣ ಪಡೆಯುವವರು ಆದಷ್ಟು ಬೇಗ ಈ ಕೆಲಸ ಮಾಡಬೇಕಾಗಿದೆ.
Life Certificate Submission Process: Life Certificate ಭಾರತ ಸರ್ಕಾರದ ಪಿಂಚಣಿ ಯೋಜನೆಯ ಡಿಜಿಟಲ್ ಲೈಫ್ (Digital Life) ಪ್ರಮಾಣಪತ್ರವಾಗಿದೆ. ಇದು ಪಿಂಚಣಿದಾರರಿಗೆ ಆಧಾರ್ ಆಧಾರಿತ ಡಿಜಿಟಲ್ ಸೇವೆಯಾಗಿದ್ದು, ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆಯಿಂದ ಬೆಂಬಲಿತವಾಗಿದೆ.
ಈ ಜೀವನ್ ಪ್ರಮಾಣ ಪತ್ರವು ಪಿಂಚಣಿ ಪಡೆಯಲು ಅವರ ಅಸ್ತಿತ್ವದ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಇನ್ನು 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪಿಂಚಣಿದಾರರು ನವೆಂಬರ್ 30 ರೊಳಗೆ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸಬೇಕು ಎಂದು ಸರ್ಕಾರ ಆದೇಶಿಸಿದೆ.
ಜೀವನ್ ಪ್ರಮಾಣ ಪತ್ರ ಸಲ್ಲಿಕೆಗೆ ವಿಶೇಷ ಸೌಲಭ್ಯ
ಸಾಮಾನ್ಯವಾಗಿ ಈ ಪಿಂಚಣಿ ಪಡೆಯುವವರು ವೃದ್ಧರಾಗಿರುತ್ತಾರೆ. ಹೀಗಾಗಿ ಸರ್ಕಾರ ವೃದ್ಧರಿಗೆ ಸಹಾಯವಾಗಲು ಕೆಲವು ಸೇವೆಯನ್ನುನೀಡಲು ಮುಂದಾಗಿದೆ. ನೀವು ಜೀವನ್ ಪ್ರಮಾಣ ಪತ್ರವನ್ನು Online ಅಲ್ಲಿ ಸುಲಭವಾಗಿ ಸಲ್ಲಿಸಬಹುದಾಗಿದೆ. ಸದ್ಯ ಸರ್ಕಾರ ಜೀವನ್ ಪ್ರಮಾಣ ಪತ್ರ ಸಲ್ಲಿಕೆಗೆ 5 ಸುಲಭ ವಿಧಾನವನ್ನು ನೀಡಿದೆ. ಪಿಂಚಣಿದಾರರು ಮನೆಯಲ್ಲಿಯೇ ಕುಳಿತು ಈ ಐದು ವಿಧಾನದ ಮೂಲಕ Life Certificate ಅನ್ನು ಸಲ್ಲಿಸಬಹುದಾಗಿದೆ.
ಪ್ರತಿ ತಿಂಗಳು ಪಿಂಚಣಿ ಹಣ ಪಡೆಯುವವರು ತಕ್ಷಣ ಈ ಕೆಲಸ ಮುಗಿಸಿಕೊಳ್ಳಿ
*ಮುಖದ ದೃಡೀಕರಣ (Facial Recognition)
ಜೀವನ ಪ್ರಮಾಣಪತ್ರವನ್ನು ಸಲ್ಲಿಸಲು ಮುಖದ ದೃಢೀಕರಣ ತಂತ್ರಜ್ಞಾನವನ್ನು ಬಳಸಲು ಸರ್ಕಾರವು ಪಿಂಚಣಿದಾರರಿಗೆ ಸೌಲಭ್ಯವನ್ನು ಒದಗಿಸುತ್ತದೆ. ಪಿಂಚಣಿದಾರರು ತಮ್ಮ ಜೀವನ ಪ್ರಮಾಣಪತ್ರವನ್ನು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಸಿ ಸುಲಭವಾಗಿ ಸಲ್ಲಿಸಬಹುದು.
*ಪೋಸ್ಟ್ ಪೇಮೆಂಟ್ ಬ್ಯಾಂಕ್ (post Payment Bank)
ಪಿಂಚಣಿದಾರರು ತಮ್ಮ ಜೀವನ ಪ್ರಮಾಣಪತ್ರವನ್ನು ಪೋಸ್ಟ್ ಮ್ಯಾನ್ ಮೂಲಕ ಹೇಗೆ ಸಲ್ಲಿಸಬಹುದು. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನ ವೆಬ್‌ಸೈಟ್ ಮೂಲಕ ಡಿಜಿಟಲ್ ಜೀವನ ಪ್ರಮಾಣಪತ್ರವನ್ನು ಸಲ್ಲಿಸಲು ಪೋಸ್ಟ್ ಮ್ಯಾನ್ ಗೆ ನೀವು ವಿನಂತಿಯನ್ನು ಸಲ್ಲಿಸಬಹುದು. ಈ ಸೇವೆಯ ಮೂಲಕ ಪೋಸ್ಟ್ ಮ್ಯಾನ್ ನಿಮ್ಮ ಮನೆಗೆ ಬಂದು ನಿಮ್ಮ ಜೀವನ ಪ್ರಮಾಣಪತ್ರವನ್ನು ಸಲ್ಲಿಸುತ್ತಾರೆ.
*ಗೊತ್ತುಪಡಿಸಿದ ಅಧಿಕಾರಿಯ ಸಹಿ (Signature of Designated Officer)
ಪಿಂಚಣಿದಾರರು ಪಿಂಚಣಿ ವಿತರಣಾ ಏಜೆನ್ಸಿ (Pension Distribution Agency) ಮುಂದೆ ಹಾಜರಾಗಲು ಬಯಸದಿದ್ದರೆ, ಅವರು ತಮ್ಮ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬಹುದು ಎಂದು ಕೇಂದ್ರ ಪಿಂಚಣಿ ಲೆಕ್ಕಪತ್ರ ಕಚೇರಿ ಹೇಳಿದೆ. ಇದಕ್ಕಾಗಿ ಪಿಂಚಣಿದಾರರ ಜೀವನ ಪ್ರಮಾಣಪತ್ರವನ್ನು ಗೊತ್ತುಪಡಿಸಿದ ಅಧಿಕಾರಿಯಿಂದ ಸಹಿ ಮಾಡುವುದು ಅವಶ್ಯಕ.
*ಜೀವನ್ ಪ್ರಮಾಣ ಪೋರ್ಟಲ್ (Jeevan Praman Portal)
ಪಿಂಚಣಿದಾರರು ಜೀವನ್ ಪ್ರಮಾಣ ಪೋರ್ಟಲ್ ಮೂಲಕ ತಮ್ಮ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬಹುದು. ಪಿಂಚಣಿದಾರರು ಪೋರ್ಟಲ್ ನಿಂದ ಜೀವನ್ ಪ್ರಮಾಣ್ ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಬೇಕಾಗುತ್ತದೆ. ಇದಲ್ಲದೇ ಪಿಂಚಣಿದಾರರು ಯುಐಡಿಎಐ ಗೆ ಅಗತ್ಯವಿರುವ ಪರಿಕರಗಳನ್ನು ಬಳಸಿಕೊಂಡು ತಮ್ಮ ಬೆರಳಚ್ಚುಗಳನ್ನು ಸಲ್ಲಿಸಬೇಕಾಗುತ್ತದೆ. ಫಿಂಗರ್ ಪ್ರಿಂಟ್ ರೀಡರ್ ಅನ್ನು ಸ್ಮಾರ್ಟ್ ಫೋನ್ ಗೆ ಸಂಪರ್ಕಿಸಲು OTG ಕೇಬಲ್ ಅನ್ನು ಬಳಸಬಹುದು.
*ಡೋರ್ ಸ್ಟೆಪ್ ಬ್ಯಾಂಕಿಂಗ್ (Dore Step Banking)
ಜೀವಿತ ಪ್ರಮಾಣ ಪತ್ರ ಸಲ್ಲಿಸಲು ಬ್ಯಾಂಕ್ ಗೆ ಹೋಗಲಾಗದ ಪಿಂಚಣಿದಾರರು ಮನೆ ಬಾಗಿಲಿನ ಬ್ಯಾಂಕಿಂಗ್ ಸೇವೆಯನ್ನು ಪಡೆದು ಜೀವನ ಪ್ರಮಾಣಪತ್ರವನ್ನು ಸಲ್ಲಿಸಬಹುದು. ಡೋರ್ ಸ್ಟೆಪ್ ಬ್ಯಾಂಕಿಂಗ್ ನಲ್ಲಿ ಬ್ಯಾಂಕ್ ಅಧಿಕಾರಿಯು ಪಿಂಚಣಿದಾರರ ಮನೆಗೆ ಹೋಗುತ್ತಾರೆ ಮತ್ತು ಪುರಾವೆಯನ್ನು ಪರಿಶೀಲಿಸುತ್ತಾರೆ. ಈ ಸೇವೆಯ ಮೂಲಕ ಬ್ಯಾಂಕ್ ಗೆ ಹೋಗಲು ಸಾಧ್ಯವಾಗದ ಜನರಿಗೆ ಮನೆ ಬಾಗಿಲಿಗೆ ಸೇವೆಯನ್ನು ನೀಡಲಾಗುತ್ತದೆ.