Life Insurance: ವ್ಯಕ್ತಿ ಸತ್ತರೆ ಆತನ ಲೈಫ್ ಇನ್ಶೂರೆನ್ಸ್ ಹಣ ಹೆಂಡತಿಗೆ ಸೇರುತ್ತಾ ಅಥವಾ ಅಮ್ಮನಿಗೆ ಸೇರುತ್ತಾ, ಕೋರ್ಟ್ ತೀರ್ಪು ಪ್ರಕಟ.
ಜೀವ ವಿಮಾ ಪಾಲಿಸಿಯನ್ನು ಪಡೆದಿರುವ ವ್ಯಕ್ತಿ ಮರಣ ಹೊಂದಿದರೆ ಹಣವು ಯಾರಿಗೆ ಸೇರುತ್ತದೆ.
Life Insurance Claim: ಭಾರತೀಯ ಜೀವ ವಿಮೆ (LIC) ಜನಸಾಮಾನ್ಯರ ಅನುಕೂಲಕ್ಕಾಗಿ LIC ಯೋಜನೆಗಳನ್ನು ಜಾರಿಗೊಳಿಸುತ್ತದೆ. ಜನರು ಯಾವುದೇ ಸಂಧರ್ಭದಲ್ಲಿ ಮರಣ ಹೊಂದಿದರೆ ಜೀವ ವಿಮೆಯು ಕ್ಲೈಮ್ ಆಗುತ್ತದೆ.
ಇನ್ನು LIC ಯೋಜನೆಯಲ್ಲಿ ವಿವಿಧ ನಿಯಮಗಳನ್ನು ಅಳವಡಿಸಲಾಗುತ್ತದೆ. ಯೋಜನೆಯನ್ನು ಪಡೆಯುವ ಮುನ್ನ ನಿಯಮಗಳ ಬಗ್ಗೆ ತಿಳಿದುಕೊಳ್ಳಬೇಕು. ಸಾಮಾನ್ಯವಾಗಿ ಜೀವ ವಿಮೆಯು ವ್ಯಕ್ತಿಯ ಮರಣದ ನಂತರ ಕ್ಲೈಮ್ ಆಗುತ್ತದೆ. ಇನ್ನು ವಿಮೆಯು ಕ್ಲೈಮ್ ಆಗುವ ಸಂದರ್ಭದಲ್ಲಿ ಹಣವು ಯಾರಿಗೆ ತಲುಪಲಿದೆ ಎನ್ನುವ ಬಗ್ಗೆ ಸಾಕಷ್ಟು ಗೊಂದಲಗಳಿರುತ್ತದೆ.
ವ್ಯಕ್ತಿ ಸತ್ತರೆ ಆತನ ಲೈಫ್ ಇನ್ಶೂರೆನ್ಸ್ ಹಣ ಯಾರಿಗೆ ತಲುಪುತ್ತದೆ
ಜೀವ ವಿಮ ಪಾಲಿಸಿಯನ್ನು ಪಡೆದಿರುವ ವ್ಯಕ್ತಿ ಸತ್ತರೆ ಇನ್ಸ್ಯುರೆನ್ಸ್ ಹಣವು ನಾಮಿನಿಗೆ ಸೇರುತ್ತದೆ. ಪಾಲಿಸಿದಾರರು ಯಾರನ್ನು ನಾಮಿನಿ ಎಂದು ಸೇರಿಸಿರುತ್ತಾರೆ ಆ ವ್ಯಕ್ತಿಗೆ ಹಣವು ವರ್ಗಾವಣೆ ಆಗುತ್ತದೆ. ಇನ್ನು ಪಾಲಿಸಿದಾರರು ಮದುವೆಯಾಗಿದ್ದರೆ ವ್ಯಕ್ತಿಯ ಮರಣದ ನಂತರ ಹಣವು ಹೆಂಡತಿ ಅಥವಾ ತಾಯಿಗೆ ಸೇರುತ್ತದೆ ಎನ್ನುವ ಬಗ್ಗೆ ಕೂಡ ಗೊಂದಲಗಳಿರುತ್ತದೆ.
ಪಾಲಿಸಿದಾರರು ಮದುವೆಯ ಮೊದಲು ತಾಯಿಯನ್ನು ನಾಮಿನಿ ಮಾಡಿದ್ದರೆ ನಂತರ ಅದನ್ನು ತನ್ನ ಹೆಂಡತಿಯ ಹೆಸರಿನಲ್ಲಿ ಬದಲಾಯಿಸಿದರೆ ಪಾಲಿಸಿದಾರರ ಮರಣದ ನಂತರ ಹೆಂಡತಿಯು ಹಣವನ್ನು ಪಡೆಯಬಹದು. ಆದರೆ ವ್ಯಕ್ತಿಯು ಮರಣಕ್ಕೂ ಮುನ್ನ ನಾಮಿನಿಯನ್ನು ಬದಲಾಯಿಸದೆ ತಾಯಿಯ ಹೆಸರಿನಲ್ಲೇ ಇದ್ದರೆ ಇನ್ಸ್ಯುರೆನ್ಸ್ ಹಣ ಹೆಂಡತಿ ಲಭ್ಯವಾಗವುದಿಲ್ಲ.
ಜೀವ ವಿಮಾ ಕಂಪನಿಯು ಹೆಸರಿಸಲಾದ ಫಲಾನುಭವಿಗಳಿಗೆ ಹಣವನ್ನು ನೀಡುತ್ತದೆ. ಜೀವ ವಿಮಾ ಸಾವಿನ ಪ್ರಯೋಜನದ ಪಾವತಿಯನ್ನು ಮೂರು ವಿಧದಲ್ಲಿ ವಿತರಿಸಲಾಗುತ್ತದೆ. ಒಟ್ಟು ಮೊತ್ತದ ರೂಪದಲ್ಲಿ, ಜೀವ ವಿಮಾ ವರ್ಷಾಶನದ ಮೂಲಕ ಅಥವಾ ಉಳಿಸಿಕೊಂಡಿರುವ ಆಸ್ತಿ ಖಾತೆಯ ಮೂಲಕ ಹಣವನ್ನು ನೀಡಲಾಗುತ್ತದೆ. ವಿಮಾದಾರರು 30 ದಿನಗಳಲ್ಲಿ ಸಾವಿನ ಕ್ಲೈಮ್ ಅನ್ನು ಇತ್ಯರ್ಥ ಮಾಡಿಕೊಳ್ಳಬೇಕು.