Property Link: ಆಧಾರ್ ಕಾರ್ಡ್ ಇದ್ದವರಿಗೆ ಇನ್ನೊಂದು ಹೊಸ ನಿಯಮ, ಆಸ್ತಿ ಪತ್ರಗಳಿಗೆ ಲಿಂಕ್ ಮಾಡಬೇಕು ಆಧಾರ್.
ಆಸ್ತಿ ದಾಖಲೆಗಳೊಂದಿಗೆ ಆಧಾರ್ ಲಿಂಕ್ ಕಡ್ಡಾಯ, ಆಧಾರ್ ಕಾರ್ಡ್ ಬಳಕೆದಾರರಿಗೆ ಹೊಸ ನಿಯಮ.
Aadhar Link For Property Document: ಇತ್ತೀಚಿನ ದಿನಗಳಲ್ಲಿ ಯುಐಡಿಎಐ (UIDAI) ಆಧಾರ್ ಕಾರ್ಡ್ (Aadhar Card) ಸಂಬಂದಿತ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಲೇ ಇದೆ. ಆಧಾರ್ ಕಾರ್ಡ್ ವ್ಯಕ್ತಿಯ ಪ್ರಮುಖ ದಾಖಲೆಯಾಗಿದೆ. ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಕೆಲಸಗಳು ಕೂಡ ಪೂರ್ಣಗೊಳ್ಳುವುದಿಲ್ಲ.
ಆಧಾರ್ ಕಾರ್ಡ್ ಜೊತೆ ಇನ್ನಿತರ ಮುಖ್ಯ ದಾಖಲೆಗಳನ್ನು ಲಿಂಕ್ ಮಾಡುವಂತೆ ಸರ್ಕಾರ ಈಗಾಗಲೇ ಸೂಚನೆ ನೀಡಿದೆ. ಇದೀಗ ಆಧಾರ್ ಕಾರ್ಡ್ ನ ಕುರಿತಾಗಿ ಹೊಸ ಅಪ್ಡೇಟ್ ಹೊರಬಿದ್ದಿದೆ. ಇನ್ನುಮುಂದೆ ನೀವು ಈ ದಾಖಲೆಗೂ ಕೂಡ ಆಧಾರ್ ಲಿಂಕ್ ಮಾಡಬೇಕಾಗುತ್ತದೆ.
ಆಸ್ತಿ ದಾಖಲೆಗಳಿಗೆ ಹೊಸ ನಿಯಮ
ಆಸ್ತಿ ದಾಖಲೆಯೊಂದಿಗೆ (Property Document) ಆಧಾರ್ ಲಿಂಕ್ ಅನ್ನು ಕಡ್ಡಾಯಗೊಳಿಸಲಾಗಿದೆ. ಅಶ್ವಿನ್ ಕುಮಾರ್ ಉಪಾದ್ಯಾಯವರು ಆಸ್ತಿ ದಾಖಲೆಯೊಂದಿಗೆ ಆಧಾರ್ ಲಿಂಕ್ ಮಾಡುವಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಚರ ಮತ್ತು ಸ್ಥಿರ ಆಸ್ತಿಗಳಿಗೆ ಆಧಾರ್ ಲಿಂಕ್ ಮಾಡಬೇಕು ಎಂದು ಅರ್ಜಿಯಲ್ಲಿ ನಮೂದಿಸಲಾಗಿದೆ. ಭ್ರಷ್ಟಾಚಾರ, ಬೇನಾಮಿ ವಹಿವಾಟು, ಕಪ್ಪು ಹಣ ನಿಯಂತ್ರಣಕ್ಕೆ ಆಧಾರ್ ಲಿಂಕ್ ಸಹಾಯ ಆಗುತ್ತದೆ ಎಂದು ಪಿಐಎಲ್ ನಲ್ಲಿ ಚರ್ಚಿಸಲಾಗಿದೆ.
ಆಸ್ತಿ ದಾಖಲೆಗಳಿಗೆ ಆಧಾರ್ ಲಿಂಕ್ ಕಡ್ಡಾಯ (Aadhar Link For Property Document)
ಆಸ್ತಿ ದಾಖಲೆಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಕುರಿತು ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸಿ ಹೈಕೋರ್ಟ್ ಆಸ್ತಿ ದಾಖಲೆಗಳಿಗೆ ಆಧಾರ್ ಲಿಂಕ್ ಕಡ್ಡಾಯ ಎಂದು ಘೋಷಣೆ ಹೊರಡಿಸಿದೆ. ವಸತಿ ಸಚಿವಾಲಯ ಮತ್ತು ಗೃಹ ಸಚಿವಾಲಯಕ್ಕೆ ಆದೇಶ ನೀಡಿದೆ. ಈ ಅರ್ಜಿಗಳಿಗೆ ಉತ್ತರ ನೀಡುವಂತೆ ಹೈಕೋರ್ಟ್ ಸಚಿವಾಲಯಗಳಿಗೆ ಸೂಚನೆ ನೀಡಿದೆ.
ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರದ ಚರ ಮತ್ತು ಸ್ಥಿರ ಆಸ್ತಿಗಳನ್ನು ಸಾರ್ವಜನಿಕರ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗಿತ್ತು. ಭ್ರಷ್ಟಾಚಾರ ಮತ್ತು ಬೇನಾಮಿ ಆಸ್ತಿಯನ್ನು ತಡೆಯುವುದು ರಾಜ್ಯದ ಜವಾಬ್ದಾರಿ ಆಗಿದ್ದು ಅಕ್ರಮ ವ್ಯವಹಾರವನ್ನು ತಡೆಯಲು ಆಸ್ತಿ ದಾಖಲೆಗಳಿಗೆ ಆಧಾರ್ ಲಿಂಕ್ ಕಡ್ಡಾಯಗೊಳಿಸಬೇಕು ಎಂದು ಅಶ್ವಿನ್ ಕುಮಾರ್ ಉಪಾದ್ಯಾಯ ಅವರು ಹೇಳಿದ್ದಾರೆ.