RC And Aadhaar Card: ಇಂದೇ ನಿಮ್ಮ ವಾಹನದ RC ಗೆ ಆಧಾರ್ ಲಿಂಕ್ ಮಾಡಿ, ವಾಹನ ಹೊಂದಿರುವ ಎಲ್ಲರಿಗೂ ಹೊಸ ನಿಯಮ.

ಇನ್ನುಮುಂದೆ ಎಲ್ಲಾ ವಾಹನ ಸಂಬಂಧಿತ ವಹಿವಾಟುಗಳಿಗೆ ಕೇಂದ್ರ ಸರ್ಕಾರ Aadhar Card ಅನ್ನು ಕಡ್ಡಾಯಗೊಳಿಸಿದೆ.

Link RC With Aadhaar: ಭಾರತೀಯ ಮೋಟಾರು ವಾಹನಗಳ ಕಾಯಿದೆಯ ಪ್ರಕಾರ ಭಾರತದ ಪ್ರತಿಯೊಂದು ವಾಹನವನ್ನು ಭಾರತೀಯ ರಸ್ತೆಗಳಲ್ಲಿ ಓಡಿಸಲು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು. ನೋಂದಣಿಯ ನಂತರ, ಸಾರಿಗೆ ಪ್ರಾಧಿಕಾರವು ನಿಮಗೆ ನೋಂದಣಿ ಪ್ರಮಾಣಪತ್ರವನ್ನು ಒದಗಿಸುತ್ತದೆ, ಇದನ್ನು RC Book ಎಂದು ಕರೆಯಲಾಗುತ್ತದೆ.

ಈ ದಾಖಲೆಯು ವಾಹನ ಮತ್ತು ಅದರ ಮಾಲೀಕರ ನೋಂದಣಿ ಸಂಖ್ಯೆ, ಮಾಲೀಕರ ಹೆಸರು ಮತ್ತು ವಿಳಾಸ ಸೇರಿದಂತೆ ವಿವರಗಳನ್ನು ಒಳಗೊಂಡಿದೆ. ಈ ನೋಂದಣಿ ಇಲ್ಲದೆ, ವಾಹನಗಳು ಭಾರತೀಯ ರಸ್ತೆಗಳಲ್ಲಿ ಸಂಚರಿಸಲು ಸಾರಿಗೆ ಇಲಾಖೆ ಅನುಮತಿಸುವುದಿಲ್ಲ.

ಇದೀಗ ಹೊಸ ವಾಹನಗಳ ನೋಂದಣಿ ಸೇರಿದಂತೆ 2021 ರಿಂದ ಎಲ್ಲಾ ವಾಹನ ಸಂಬಂಧಿತ ವಹಿವಾಟುಗಳಿಗೆ ಕೇಂದ್ರ ಸರ್ಕಾರ Aadhaar Card ಅನ್ನು ಕಡ್ಡಾಯಗೊಳಿಸಿದೆ. ಆಧಾರ್ ಕಾರ್ಡ್ ಅನ್ನು ಕಡ್ಡಾಯಗೊಳಿಸುವ ಮೂಲಕ, ವಾಹನ ನೋಂದಣಿ ಮತ್ತು ಇತರ ಪ್ರಕ್ರಿಯೆಗಳಲ್ಲಿ ನಕಲಿ ವಹಿವಾಟುಗಳನ್ನು ತಡೆಯಲು ಸರ್ಕಾರ ಮುಂದಾಗಿದೆ.

Link RC With Aadhar
Image Credit: Team-bhp

RC ಜೊತೆಗೆ Aadhar ಲಿಂಕ್ ಕಡ್ಡಾಯ
ಇದೀಗ ಸರ್ಕಾರ ವಾಹನ ನೋಂದಣಿಯಲ್ಲಿನ ನಕಲಿ ವಹಿವಾಟುಗಳನ್ನು ತಡೆಯಲು RC ಜೊತೆಗೆ Aadhar ಲಿಂಕ್ ಕಡ್ಡಾಯಗೊಳಿಸಿದೆ. ವಾಹನ ಸಂಬಂಧಿತ ವಹಿವಾಟುಗಳಲ್ಲಿ ಆಧಾರ್ ಸಂಖ್ಯೆ ಇದ್ದರೆ ಪ್ರತಿ ವ್ಯಕ್ತಿಯ ಬಳಿ ಇರುವ ವಾಹನಗಳ ಸಂಖ್ಯೆ ಬಗ್ಗೆ ಸ್ಪಷ್ಟ ಮಾಹಿತಿಯನ್ನು ತಿಳಿಯಲು ಸರ್ಕಾರಕ್ಕೆ ಸುಲಭವಾಗಲಿದೆ.

ಈ ಕಾರಣಕ್ಕೆ ತಪ್ಪದೆ Aadhar Card ಹಾಗೂ RC ಲಿಂಕ್ ಮಾಡಿ
ಆಧಾರ್‌ನಲ್ಲಿ ನಮೂದಿಸಿದ ದೂರವಾಣಿ ಸಂಖ್ಯೆಯನ್ನು RC ಅಲ್ಲಿ ಕೂಡ ನಮೂದಿಸಬೇಕಾಗುತ್ತದೆ. ಈ ಹಿಂದೆ ಪಡೆಯಲಾದ ಆಧಾರ್‌ ಕಾರ್ಡ್‌ನಲ್ಲಿ ಹಾಗು RC ಅಲ್ಲಿ ಹೆಸರಿನ ಜೊತೆಗೆ ಇನಿಷಿಯಲ್ ಇಲ್ಲದಿದ್ದರೆ ಸಮಸ್ಯೆ ಎದುರಾಗುತ್ತದೆ. ಒಂದು ವೇಳೆ ಆಧಾರ್‌ ಕಾರ್ಡ್‌ ಮತ್ತು ಆರ್‌ಸಿಯಲ್ಲಿ ಹೆಸರು ಮತ್ತು ಮೊಬೈಲ್‌ ಫೋನ್‌ ಸಂಖ್ಯೆ ಬೇರೆ ಬೇರೆಯಾಗಿದ್ದರೆ ವಾಹನಕ್ಕೆ ಸಂಬಂಧಿಸಿದ ಸೇವೆಗಳನ್ನು ಪಡೆಯುವಲ್ಲಿ ಸಮಸ್ಯೆ ಎದುರಾಗಲಿದೆ.

Join Nadunudi News WhatsApp Group

Aadhar Card And RC new Update
Image Credit: Googleinfoblogs

Aadhar Link ಮಾಡಲಾದ ಫೋನ್ ಸಂಖ್ಯೆಯನ್ನು ಸೇರಿಸುವ ಮೂಲಕ ಮಾಲೀಕತ್ವದ ವರ್ಗಾವಣೆಗೆ ಅರ್ಜಿ ಸಲ್ಲಿಸುವಾಗ ವ್ಯಕ್ತಿಯು ಒನ್-ಟೈಮ್ ಪಾಸ್ವರ್ಡ್ ಅನ್ನು ಸ್ವೀಕರಿಸುತ್ತಾನೆ. ಈ Password ಆಧಾರದ ಮೇಲೆ ಒಬ್ಬರು ತಮ್ಮ ಅರ್ಜಿಯನ್ನು ಪೂರ್ಣಗೊಳಿಸಬಹುದಾಗಿದೆ. Aadhar Link ಮಾಡಲಾದ ಸಂಖ್ಯೆಯನ್ನು ಸೇರಿಸಲು MVD ತನ್ನ ವಾಹನ Software ನಲ್ಲಿ 3 ಹೊಸ ಕ್ಷೇತ್ರಗಳನ್ನು ಸೇರಿಸಿದೆ. ಮಾಲೀಕರ ಆಧಾರ್ ಸಂಖ್ಯೆ, ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಬೇಕು. ಅರ್ಜಿಯಲ್ಲಿನ ವಿವರಗಳು ಮತ್ತು ಆಧಾರ್ ಕಾರ್ಡ್ ವಿವರಗಳು ಹೊಂದಾಣಿಕೆಯಾಗದಿದ್ದರೆ ನೋಂದಣಿಯನ್ನು ನಿರಾಕರಿಸಲಾಗುತ್ತದೆ.

Join Nadunudi News WhatsApp Group