Lithium Mineral Deposit: ದೇಶದಲ್ಲಿ ಮೊದಲ ಬಾರಿಗೆ ಲಿಥಿಯಂ ಖನಿಜ ನಿಕ್ಷೇಪ ಪತ್ತೆ, ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ಸಿಹಿ ಸುದ್ದಿ.

Discovery of lithium mineral deposits: ಇದೀಗ ರಾಜ್ಯ ಸರ್ಕಾರದಿಂದ ಜನತೆಗೆ ಭರ್ಜರಿ ಸಿಹಿ ಸುದ್ದಿ ಒಂದು ಹೊರ ಬಿದ್ದಿದೆ. ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ಗುಡ್ ನ್ಯೂಸ್ ಎನ್ನಬಹುದು.

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗುತ್ತಿರುವ ನಡುವೆಯೇ ಸಿಹಿ ಸುದ್ದಿಯೊಂದು ಸಿಕ್ಕಿದೆ. ಭಾರತದಲ್ಲಿ ಇದೆ ಮೊದಲ ಬಾರಿಗೆ ಅಗಾಧ ಪ್ರಮಾಣದ ಲಿಥಿಯಂ ಖನಿಜ ನಿಕ್ಷೇಪ (Lithium Minerol Deposit) ಜಮ್ಮು ಮತ್ತು ಕಾಶ್ಮೀರದಲ್ಲಿ ಪತ್ತೆಯಾಗಿದೆ.

For the first time in India, massive lithium mineral deposits have been discovered in Jammu and Kashmir.
Image Credit: indianexpress

ಕಾಶ್ಮೀರದಲ್ಲಿ 59 ಟನ್ ಲಿಥಿಯಂ ಖನಿಜ ನಿಕ್ಷೇಪ ಪತ್ತೆ
ಕಾಶ್ಮೀರದ ಕಣಿವೆಯಲ್ಲ 59 ಲಕ್ಷ ಟನ್ ಲಿಥಿಯಂ ನಿಕ್ಷೇಪ ಪತ್ತೆಯಾಗಿದ್ದು ಎಲೆಕ್ಟ್ರಿಕ್ ವಾಹನ ಕ್ಷೇತ್ರಕ್ಕೆ ವರದಾನವಾಗಲಿದೆ. ಬ್ಯಾಟರಿ ಎಲೆಕ್ಟ್ರಾನಿಕ್ಸ್ ಉಪಕರಣಗಳ ಉತ್ಪಾದನೆ ಅಗ್ಗವಾಗಲಿದ್ದು, ಆತ್ಮಾ ನಿರ್ಭರ ಭಾರತಕ್ಕೆ ಅನುಕೂಲವಾಗಲಿದೆ.

ಬ್ಯಾಟರಿ ಬಳಕೆಯಲ್ಲಿ ಪ್ರಧಾನ ಖನಿಜವಾಗಿರುವ ಲಿಥಿಯಂ ಅನ್ನು ಎಲೆಕ್ಟ್ರಿಕ್ ವಾಹನಗಳನ್ನು ಮೊಬೈಲ್ ಫೋನ್, ಲ್ಯಾಪ್ಟ್ಯಾಪ್, ಡಿಜಿಟಲ್ ಕ್ಯಾಮೆರಾ ಮೊದಲಾದ ಎಲ್ಲ ರೀಚಾರ್ಜೆಬಲ್ ವಿದ್ಯುತ್ ಸಾಧನಗಳ ಬ್ಯಾಟರಿಗಳಲ್ಲಿ ಬಳಸಲಾಗುತ್ತದೆ.

59 lakh ton lithium deposit discovered in Kashmir valley, boon for electric vehicle sector
Image Credit: timesnownews

ಹೃದಯಕ್ಕೆ ಅಳವಡಿಸುವ ಫೇಸ್ ಮೇಕರ್, ಗೊಂಬೆ, ಗಡಿಯಾರಗಳಲ್ಲಿ ಬಳಸುವ ರಿಚಾರ್ಜ್ ಮಾಡಲಾಗದ ಬ್ಯಾಟರಿಗಳ ತಯಾರಿಕೆಗಳಿಗೂ ಲಿಥಿಯಂ ಬಳಕೆ ಮಾಡಲಾಗುವುದು, ಸೆರಾಮಿಕ್, ಗಾಜು, ಗ್ರೀಸ್, ಔಷಧ ಉತ್ಪಾದನಾ, ಎಸಿ, ಅಲ್ಯೂಮಿನಿಯಂ ಉತ್ಪಾದನೆಯಲ್ಲೂ ಲೀಥಿಯೂಯಂ ಬಳಕೆ ಮಾಡಲಾಗುತ್ತದೆ.

Join Nadunudi News WhatsApp Group

Geological Survey of India has discovered the deposit in Jammu and Kashmir during an exploration operation.
Image Credit: deccanherald

ಜಮ್ಮು ಮತ್ತು ಕಾಶ್ಮೀರಲ್ಲಿ ಲಿಥಿಯಂ ನಿಕ್ಷೇಪ ಪತ್ತೆ
ಜಮ್ಮು ಕಾಶ್ಮೀರದಲ್ಲಿ ಭಾರತೀಯ ಭೂಗರ್ಭ ಶಾಸ್ತ್ರ ಸರ್ವೇಕ್ಷಣಾ ಸಂಸ್ಥೆ ನಡೆಸಿದ ಶೋಧನಾ ಕಾರ್ಯಾಚರಣೆಯಲ್ಲಿ ನಿಕ್ಷೇಪ ಇರುವುದು ಕಂಡು ಬಂದಿದೆ. ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಸಾಲಾಲ್ ಹೈಮಾನ್ ಎಂಬಲ್ಲಿ 59 ಲಕ್ಷ ಟನ್ ಗಳಷ್ಟು ಲಿಥಿಯಂ ನಿಕ್ಷೇಪ ಕಂಡುಬಂದಿದೆ ಎಂದು ಗಣಿ ಇಲಾಖೆ ಕಾರ್ಯದರ್ಶಿ ವಿವೇಕ್ ಭಾರದ್ವಾಜ್ ಹೇಳಿದ್ದಾರೆ.

Join Nadunudi News WhatsApp Group