Ads By Google

Loan Repayment: ಬ್ಯಾಂಕ್ ಸಾಲ ಪಡೆದ ಎಲ್ಲರಿಗೂ RBI ನಿಂದ ಹೊಸ ನಿಯಮ, ಬ್ಯಾಂಕುಗಳಿಗೆ ಹೊಸ ಆದೇಶ.

RBI Loan Repayment Rule

Image Source: Mint

Ads By Google

RBI Loan Repayment Rule: Reserve Bank Of India ಇತ್ತೀಚಿಗೆ ಗ್ರಾಹಕರಿಗೆ ಅನುಕೂಲವಾಗಲು ಹೊಸ ಹೊಸ ನಿಯಮವನ್ನು ಜಾರಿಗೆ ತರುತ್ತಿದೆ. ಬ್ಯಾಂಕುಗಳು ಗ್ರಾಹಕರಿಗೆ ವಿವಿಧ ಸೌಲಭ್ಯವನ್ನು ನೀಡುವ ಸಲುವಾಗಿ RBI ವಿವಿಧ ನಿಯಮವನ್ನು ಪರಿಚಯಿಸಿದೆ.

RBI ನಿಯಮಾನುಸಾರ ಬ್ಯಾಂಕುಗಳು ಗ್ರಾಹಕರ ಜೊತೆ ವ್ಯವಹಾರ ಮಾಡಬೇಕಿದೆ. ಸಾಮಾನ್ಯವಾಗಿ Bank ನಲ್ಲಿ Loan ಅನ್ನು ಹೆಚ್ಚಿನ ಜನರು ಪಡೆಯುತ್ತಾರೆ. ಇತ್ತೀಚಿಗೆ RBI ಸಾಲಕ್ಕೆ ಸಂಬಂಧಿಸಿದಂತೆ ಗ್ರಾಹಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿದೆ.

Image Source: India Today

ಬ್ಯಾಂಕುಗಳಿಗೆ RBI ಹೊಸ ಮಾರ್ಗಸೂಚಿ ಬಿಡುಗಡೆ
ಈ ಹಿಂದೆ ಬ್ಯಾಂಕ್ ಸಾಲಗಾರರಿಗೆ ವಿಧಿಸುವ ದಂಡದಲ್ಲಿ ಆರ್ ಬಿಐ ಹೊಸ ನಿಯಮವನ್ನು ಜಾರಿಗೊಳಿಸಿತ್ತು. ಸಾಲವನ್ನು ನಿಗದಿತ ಸಮಯದೊಳಗೆ ಪಾವತಿ ಮಾಡದಿದ್ದರೆ ಬ್ಯಾಂಕ್ ಗಳು ಅಥವಾ ಕೆಲವು ಹಣಕಾಸು ಸಂಸ್ಥೆಗಳು ಸಾಮಾನ್ಯ ಬಡ್ಡಿದರದ ಜೊತೆಗೆ ಹೆಚ್ಚಿನ ದಂಡವನ್ನು ವಿಧಿಸುತ್ತದೆ.

ಈ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಾಲಗಳ ಖಾತೆಯ ದಂಡದ ಬಗ್ಗೆ ಹೊಸ ನಿಯಮವನ್ನು ಜಾರಿಗೊಳಿಸಿತ್ತು. ಸಾಲದ ಖಾತೆಗೆ ಸಂಬಂಧಿಸಿದ ದಂಡವನ್ನು ಶುಲ್ಕ ಎಂದು ಪರಿಗಣಿಸಬೇಕೇ ಹೊರತು ಒಟ್ಟು ಬಡ್ಡಿದರ ಎಂದು ಪರಿಗಣಿಸಿ ಬಡ್ಡಿಯ ಜತೆಗೆ ಸೇರಿಸಬಾರದು ಎಂದು RBI ಸ್ಪಷ್ಟಪಡಿಸಿತ್ತು. RBI ಸಾಲದ ದಂಡದ ನಿಯಮ ಬದಲಿಸಿದ ಬೆನ್ನಲ್ಲೇ ಇದೀಗ ಸಾಲಗಾರರಿಗೆ ಮತ್ತೊಂದು ಮಹತ್ವದ ಮಾಹಿತಿ ನೀಡಿದೆ. ಬ್ಯಾಂಕುಗಳಿಗೆ RBI ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

Image Source: India Today

ಬ್ಯಾಂಕ್ ಸಾಲ ಪಡೆದ ಎಲ್ಲರಿಗೂ RBI ನಿಂದ ಹೊಸ ನಿಯಮ
ಸಾಮಾನ್ಯವಾಗಿ ಬ್ಯಾಂಕ್ ನಲ್ಲಿ ಸಾಲ ಪಡೆಯುವಾಗ ಆಸ್ತಿ ಪತ್ರಗಳನ್ನು ಅಡಮಾನವಾಗಿ ಇರಿಸಬೇಕಾಗುತ್ತದೆ. ಗ್ರಾಹಕರು ಇರಿಸುವ ಆಸ್ತಿ ಪುರಾವೆಯ ಆಧಾರದ ಮೇಲೆ ಬ್ಯಾಂಕುಗಳು ಸಾಲವನ್ನು ನೀಡುತ್ತವೆ. ಸಾಲ ಪಡೆದ ನಂತರ ಸಾಲಗಾರರು ನಿಗದಿತ ಸಮಯದೊಳಗೆ ಸಾಲವನ್ನು ಪಾವತಿಸಬೇಕು. ಇನ್ನು ಸಾಲಗಾರರು ನಿಗದಿತ ಸಮಯೋದೊಳಗೆ ಸಾಲವನ್ನು ಮರುಪಾವತಿಸಿದರೆ ಬ್ಯಾಂಕ್ ಅಡಮಾನವಾಗಿ ಇರಿಸಿಕೊಂಡ ವಸ್ತುಗಳನ್ನು ತಕ್ಷಣವೇ ಹಿಂತಿರುಗಿಸಬೇಕಿದೆ.

ಸಾಲ ಮರು ಪಾವತಿಸಿದ 30 ದಿನದೊಳಗೆ ಬ್ಯಾಂಕುಗಳು ಈ ಕೆಲಸ ಮಾಡಬೇಕು
ಇದೀಗ RBI ಸಾಲ ನೀಡುವ ಬ್ಯಾಂಕುಗಳಿಗೆ ಮಹತ್ವದ ಮಾಹಿತಿಯನ್ನು ನೀಡಿದೆ. ಸಾಲ ಮರುಪಾವತಿಸಿದ 30 ದಿನಗಳ ಅವಧಿಯಲ್ಲಿ ಅಡಮಾನವಾಗಿ ಇರಿಸಿಕೊಂಡಿದ್ದ Property Documents ಗಳನ್ನೂ ಗ್ರಾಹಕರಿಗೆ ಮರಳಿ ನೀಡಬೇಕು. ನಿಗದಿತ ದಿನಗಳ ಒಳಗೆ ಬ್ಯಾಂಕ್ ನಿಮ್ಮ ದಾಖಲೆ ನೀಡದಿದ್ದರೆ ದಿನಕ್ಕೆ 5000 ರೂ ದಂಡವನ್ನ ಬ್ಯಾಂಕುಗಳಿಗೆ ವಿಧಿಸಲಾಗುತ್ತದೆ.

Image Source: Mint

ಒಂದು ತಿಂಗಳೊಳಗೆ ಅಡಮಾನವಾಗಿ ಇರಿಸಿಕೊಂಡಿದ್ದ Property Documents ಗಳನ್ನೂ ಮರಳಿ ನೀಡದಿದ್ದರೆ ಬ್ಯಾಂಕುಗಳು ಗ್ರಾಹಕರಿಗೆ ಪರಿಹಾರದ ಮೊತ್ತ ನೀಡಬೇಕು ಎಂದು RBI ಬ್ಯಾಂಕುಗಳಿಗೆ ಆದೇಶ ಹೊರಡಿಸಿದೆ. ಸಾಲದ ಪೂರ್ಣ ಮರುಪಾವತಿ ಆದ ಬಳಿಕಾ ಸ್ಥಿರಾಸ್ತಿ, ಚರಾಸ್ತಿಗಳ ಮೇಲಿರುವ ಎಲ್ಲಾ ದಾಖಲೆ, ಮಾಲೀಕತ್ವಗಳನ್ನು ಒಂದು ತಿಂಗಳಲ್ಲಿ ವಾಪಾಸ್ ನೀಡುವುದು ಕಡ್ಡಾಯವಾಗಿದೆ. ಇಲ್ಲವಾದರೆ ಬ್ಯಾಂಕುಗಳು ದಂಡದ ರೂಪದಲ್ಲಿ ಗ್ರಾಹಕರಿಗೆ ಮೊತ್ತವನ್ನು ನೀಡಬೇಕಾಗುತ್ತದೆ.

Ads By Google
Ramya M: Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.