Google Pay: ಸಣ್ಣಪುಟ್ಟ ವ್ಯಾಪಾರಸ್ಥರಿಗೆ Google Pay ಇಂದ ಗುಡ್ ನ್ಯೂಸ್, ಸಿಗಲಿದೆ 15000 ರೂಪಾಯಿ.
ಸಾಲ ಸೌಲಭ್ಯ ನೀಡುವ ಬಗ್ಗೆ ಮಹತ್ವದ ಘೋಷಣೆ ಹೊರಡಿಸಿದ Google pay.
Google Pay Loan Facility: ಸದ್ಯ ದೇಶದಲ್ಲಿ UPI ವಹಿವಾಟು ಜನಸ್ನೇಹಿಯಾಗಿದೆ. ಮೊಬೈಲ್ ಬಳಸುವ ಪ್ರತಿಯೊಬ್ಬರು ಕೂಡ UPI ವಹಿವಾಟನ್ನು ಬಳಸುತ್ತಾರೆ. UPI ವಹಿವಾಟುಗಳು ಬಂದ ಮೇಲೆ ದೇಶದಲ್ಲಿ ನಗದು ವಹಿವಾಟು ಕಡಿಮೆ ಆಗುತ್ತಿದೆ ಎಂದರೆ ತಪ್ಪಾಗಲಾರದು.
UPI ಬಳಕೆ ಹೆಚ್ಚುತ್ತಿದ್ದಂತೆ ಯುಪಿಐ ವಹಿವಾಟುಗಳಲ್ಲಿ ಇತ್ತೀಚಿಗೆ ಸಾಕಷ್ಟು ಸೌಲಭ್ಯಗಳನ್ನು ಕೂಡ ಪರಿಚಯಿಸಲಾಗಿದೆ. ಫೋನ್ ಪೇ, ಗೂಗಲ್ ಪೇ, ಪೆಟಿಎಂ ಸೇರಿದಂತೆ ಅನೇಕ ಯುಪಿಐ ವಹಿವಾಟುಗಳು ಚಾಲ್ತಿಯಲ್ಲಿವೆ. ಇದೀಗ Google Pay ಬಳಕೆದಾರರಿಗೆ ಇನ್ನಷ್ಟು ಸೌಲಭ್ಯವನ್ನು ನೀಡಲು ಮುಂದಾಗಿದೆ. ಇನ್ನುಮುಂದೆ ನೀವು ಗೂಗಲ್ ಪೇ ಮೂಲಕ ಈ ವಿಶೇಷ ಸೌಲಭ್ಯಗಳನ್ನು ಪಡೆಯಬಹುದು.
Google pay ಬಳಕೆದಾರರಿಗೆ ಬಿಗ್ ಅಪ್ಡೇಟ್
ಗೂಗಲ್ ಪೇ ಇದೀಗ ವೈಯಕ್ತಿಕ ಸಾಲ ಪಡೆಯುವಲ್ಲಿ ಸಹಾಯವಾಗಲಿದೆ. ಗೂಗಲ್ ಪೇ ನ ಮೂಲಕ ನೀವು ವೈಯಕ್ತಿಕ ಸಾಲವನ್ನು ಪಡೆಯಬಹುದು. ಈ ಮೂಲಕ ಗೂಗಲ್ ಪೇ ತನ್ನ ಸೇವೆಯನ್ನು ಇನ್ನಷ್ಟು ವಿಸ್ತರಿಸಿಕೊಂಡಿದೆ. ಗೂಗಲ್ ಪೇ ಸಾಲ ನೀಡಲು Google pay DMI Finance ಸಂಸ್ಥೆಯೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ. ಸಣ್ಣ ವ್ಯವರಿಗಳ ಸ್ವಂತ ಉದ್ಯೋಗದ ಕನಸಿಗೆ ಸಹಾಯವಾಗಲು ಇದೀಗ Google Pay ಸಜ್ಜಾಗಿದೆ. Google India ಇಂದು ಸಾಲ ಸೌಲಭ್ಯ ನೀಡುವ ಬಗ್ಗೆ ಮಹತ್ವದ ಘೋಷಣೆ ಹೊರಡಿಸಿದೆ.
Google Pay ನಲ್ಲಿ ಪಡೆಯಿರಿ 15000 ರೂ. ಸಾಲ
ಜನಪ್ರಿಯ UPI Application ಆದ ಗೂಗಲ್ ಪಿ ಇದೀಗ ಸ್ಯಾಚೆಟ್ ಸಾಲವನು ನೀಡಲು ಮುಂದಾಗಿದೆ. ಸ್ಯಾಚೆಟ್ ಸಾಲವು ನ್ಯಾನೋ ಕ್ರೆಡಿಟ್ ಸಾಲದ ಒಂದು ರೂಪವಾಗಿದೆ. ಈ ಸಾಲವನ್ನು ಕೆಲವೇ ನಿಮಿಷಗಳಲ್ಲಿ ಮೊಬೈಲ್ ನ ಮೂಲಕವೇ ಪಡೆಯಬಹುದಾಗಿದೆ. ಗೂಗಲ್ ಪೆ ಸಧ್ಯ ಈ ಸ್ಯಾಚೆಟ್ ಸಾಲದಲ್ಲಿ ರೂ. 15000 ಸಾಲವನ್ನು ನೀಡುತ್ತದೆ. ನೀವು ಗೂಗಲ್ ಪೆ ನ ಮೂಲಕ 15,000 ರೂಪಾಯಿ ಸಾಲವನ್ನು ಪಡೆದರೆ ಮಾಸಿಕ 111 ರೂ. ಪಾವತಿಸಬೇಕಾಗುತ್ತದೆ.
Google Pay Credit line
ಇನ್ನು ಗೂಗಲ್ ಪೆ 15000 ರೂ. ಸಾಲ ಸೌಲಭ್ಯವನ್ನು ನೀಡುವುದರ ಜೊತೆಗೆ ePayLater ಸಹಭಾಗಿತ್ವದಲ್ಲಿ ವ್ಯಾಪಾರಿಗಳಿಗೆ Credit Line ಅನ್ನು ಸಕ್ರಿಯಗೊಳಿಸಲಿದೆ. ವ್ಯಾಪಾರಿಗಳು ತಮ್ಮ ವಸ್ತುಗಳನ್ನು ಪಡೆಯಲು ಆನ್ಲೈನ್ ಮತ್ತು ಆಲಿನ್ ನಲ್ಲಿ ಈ ಸಾಲವನ್ನು ಪಡೆಯಬಹುದು.
ಗೂಗಲ್ ಇಂಡಿಯಾ ICICI ಬ್ಯಾಂಕ್ ಸಹಯೋಗದೊಂದಿಗೆ UPI ಮೇಲೆ ಕ್ರೆಡಿಟ್ ಲೈನ್‌ಗಳನ್ನು ಪ್ರಾರಂಭಿಸಿದೆ. ಇನ್ನು Axis ಬ್ಯಾಂಕ್‌ನೊಂದಿಗೆ ಪಾಲುದಾರಿಕೆ ಹೊಂದುವ ಮೂಲಕ ಗೂಗಲ್ ಪೇ ವೈಯಕ್ತಿಕ ಸಾಲಗಳ ಪೋರ್ಟ್‌ಫೋಲಿಯೊವನ್ನು ನೀಡುತ್ತದೆ. ಮಾಸಿಕ ಆದಾಯ ರೂ. 30,000 ಕ್ಕಿಂತ ಕಡಿಮೆ ಇರುವವರು ಈ ಸಾಲ ಸೌಲಭ್ಯವನ್ನು ಪಡೆಯಬಹುದು.