LIC Loan: LIC ಪಾಲಿಸಿ ಮಾಡಿಸಿದವರಿಗೆ ಗುಡ್ ನ್ಯೂಸ್, ಯಾವುದೇ ಗ್ಯಾರಂಟಿ ಇಲ್ಲದೆ ಸಿಗಲಿದೆ ಕಡಿಮೆ ಬಡ್ಡಿಗೆ ಸಾಲ.
LIC ಈ ಯೋಜನೆಯಲ್ಲಿ ಸಾಲ ಪಡೆದುಕೊಳ್ಳಬಹುದು.
Loan Facility In LIC Saral Pension Scheme: ದೇಶದ ನಂಬರ್ ಒನ್ ಇನ್ಸೂರೆನ್ಸ್ ಕಂಪನಿ ಆಗಿರುವ ಭಾರತೀಯ ಜೀವ ವಿಮೆ (LIC) ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲವನ್ನು ನೀಡುತ್ತಿದೆ. ವಿವಿಧ ರೀತಿಯ ಪಾಲಿಸಿಯನ್ನು LIC ನೀಡುತ್ತಿದೆ.
ಜನರಿಗೆ ತಮ್ಮ ಭವಿಷ್ಯದ ಭದ್ರತೆಗೆ ಹಣಕಾಸಿನ ನೆರವನ್ನು LIC ನೀಡುತ್ತಿದೆ. ಎಲ್ ಐಸಿ ಈಗಾಗಲೇ ಸಾಕಷ್ಟು ಯೋಜನೆಯನ್ನು ಜಾರಿ ಮಾಡಿದೆ. ಜೀವ ವಿಮೆ, ಅಪಘಾತ ವಿಮೆಯ ವಿವಿಧ ಆಯ್ಕೆಗಳು ಜನರಿಗೆ ಸಿಗುತ್ತಿದೆ. LIC ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಜನರು ಹೆಚ್ಚಿನ ಅನುಕೂಲವನ್ನು ಪಡೆದುಕೊಳ್ಳಬಹುದು.
LIC Saral Pension Scheme
ಎಲ್ ಐಸಿಯಲ್ಲಿ ವಿವಿಧ ಪಿಂಚಣಿ ಯೋಜನೆಗಳು ಲಭ್ಯವಿದ್ದು ಅದರಲ್ಲಿ LIC Saral Pension Scheme ಪ್ರಮುಖವಾಗಿದೆ. ನೀವು ಈ ಯೋಜನೆಯಲ್ಲಿ ಕಡಿಮೆ ಹಣವನ್ನು ಹೂಡಿಕೆ ಮಾಡುವ ಆಯ್ಕೆಯನ್ನು ಪಡೆಯಬಹುದು.
ನಿಮ್ಮ ಹೂಡಿಕೆಯ ಮೊತ್ತದ ಆಧಾರದ ಮೇಲೆ ನಿವೃತ್ತಿಯ ನಂತರ ನೀವು ಮಾಸಿಕ ಪಿಂಚಣಿಯನ್ನು ಪಡೆದು ಆರಾಮದಾಯಕ ನಿವೃತ್ತಿಯ ಬದುಕನ್ನು ಸಾಗಿಸಬಹುದು. 40 ವರ್ಷದಿಂದ 80 ವರ್ಷದ ವಯಸ್ಸಿನವರು ಈ ಸರಳ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಿ ಯೋಜನೆಯ ಲಾಭವನ್ನು ಪಡೆಯಬಹುದು. ಈ ಪಾಲಿಸಿಯಲ್ಲಿ ಪ್ರೀಮಿಯಂ ಅನ್ನು ಕೇವಲ ಒಂದು ಬಾರಿ ಮಾತ್ರ ಠೇವಣಿ ಮಾಡಲಾಗುತ್ತದೆ.
LIC ಸರಳ್ ಪಿಂಚಣಿ ಯೋಜನೆಯ ಆಯ್ಕೆಗಳು
LIC ಸರಳ ಪಿಂಚಣಿ ಯೋಜನೆಯ ಪಾಲಿಸಿದಾರರು 6 ತಿಂಗಳ ನಂತರ ಪಾಲಿಸಿಯನ್ನು ಯಾವುದೇ ಸಮಯದಲ್ಲಿ ಬೇಕಾದರೂ ಸರೆಂಡರ್ ಮಾಡಬಹುದಾಗಿದೆ. ಪಾಲಿಸಿ ಪಡೆದ ನಂತರ ಪಾಲಿಸಿದಾರರ ಜೀವತಾವದಿಯವರೆಗೂ ಪಿಂಚಣಿಯ ಪ್ರಯೋಜನವನ್ನು ಪಡೆಯಬಹುದಾಗಿದೆ. ಇನ್ನು 42 ವರ್ಷ ವಯಸ್ಸಿನ ವ್ಯಕ್ತಿಯು 30 ಲಕ್ಷ ರೂ. ವರ್ಷಾಶನವನ್ನು ತೆಗೆದುಕೊಂಡರೆ ಅವರು ಮಾಸಿಕ ಸುಮಾರು 12,388 ರೂ.ಗಳ ಪಿಂಚಣಿ ಪಡೆಯಬಹುದು.
ಈ ಯೋಜನೆಯಡಿ ಮಾಸಿಕವಾಗಿ ಕನಿಷ್ಠ 1000 ರೂ. ಹೂಡಿಕೆ ಮಾಡಬಹುದು ಹೂಡಿಕೆಗೆ ಗರಿಷ್ಟ ಮಿತಿಯಿಲ್ಲ. LIC Saral Pension Scheme ಅಡಿಯಲ್ಲಿ ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಮತ್ತು ವಾರ್ಷಿಕ ಪ್ರೀಮಿಯಂ ಆಯ್ಕೆಯನ್ನು ಆರಿಸಿಕೊಳ್ಳಬಹುದಾಗಿದೆ.
LIC ಸರಳ್ ಪಿಂಚಣಿ ಯೋಜನೆಯಲ್ಲಿ ಸಾಲ ಸೌಲಭ್ಯ
LIC ಸರಳ್ ಪಿಂಚಣಿ ಯೋಜನೆಯಲ್ಲಿ ಸಾಲವನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಯೋಜನೆ ಪ್ರಾರಂಭವಾದ ಆರು ತಿಂಗಳ ನಂತರ ಹೂಡಿಕೆದಾರರು ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಯಾವುದೇ ಕಾಯಿಲೆಯ ಚಿಕಿತ್ಸೆಗೆ ಹಣದ ಅಗತ್ಯವಿದ್ದರೆ, ನೀವು ಪಾಲಿಸಿಯಲ್ಲಿ ಡೆಪಾಸಿಟ್ ಮಾಡಿದ ಹಣವನ್ನು ಹಿಂತೆಗೆದುಕೊಳ್ಳಬಹುದು. ಪಾಲಿಸಿಯನ್ನು ಸರೆಂಡರ್ ಮಾಡಿದಾಗ ಗ್ರಾಹಕರು ಮೂಲ ಬೆಲೆಯ ಶೇಕಡ 95 ರಷ್ಟು ಮೊತ್ತ ಪಡೆಯಬಹುದು.