ಸಾಲ ಪಡೆದುಕೊಂಡವರು ಸತ್ತರೆ ಅವರ ಸಾಲವನ್ನ ಯಾರು ತೀರಿಸಬೇಕು ಗೊತ್ತಾ, ಹೊಸ ನಿಯಮ ಜಾರಿಗೆ.

ಇತ್ತೀಚಿನ ದಿನಗಳಲ್ಲಿ ಸಾಲವನ್ನ ಎಲ್ಲರೂ ಕೂಡ ಮಾಡುತ್ತಾರೆ ಎಂದು ಹೇಳಬಹುದು. ಸಾಲ ಮಾಡದ ಮಾನವನನ್ನ ಹುಡುಕುವುದು ಬಹಳ ಕಷ್ಟ ಎಂದು ಹೇಳಿದರೆ ತಪ್ಪಾಗಲ್ಲ. ಯಾವುದೋ ಒಂದು ಅನಿವಾರ್ಯ ಕಾರಣಗಳಿಂದ ಜನರು ಸಾಲವನ್ನ ಮಾಡುತ್ತಾರೆ ಮತ್ತು ಆ ಸಾಲವನ್ನ ತೀರಿಸಲಾಗದೆ ಬಹಳ ಕಷ್ಟಪಡುತ್ತಾರೆ ಎಂದು ಹೇಳಬಹುದು. ಇನ್ನು ಸಾಲವನ್ನ ತೀರಿಸಲಾಗದೆ ಅದೆಷ್ಟೋ ಜನರು ತಮ್ಮ ಪ್ರಾಣವನ್ನ ಕಳೆದುಕೊಂಡಿದ್ದಾರೆ ಎಂದು ಹೇಳಬಹುದು. ಇನ್ನು ಸಾಲವನ್ನ ಪಡೆಯುವ ಸಮಯದಲ್ಲಿ ಸಾಲ ಕೊಡುವವರು ಅನೇಕ ದಾಖಲೆಗಳನ್ನ ತಮ್ಮ ಬಳಿ ಇರಿಸಿಕೊಂಡು ಸಾಲವನ್ನ ನೀಡುತ್ತಾರೆ ಎಂದು ಹೇಳಬಹುದು ಮತ್ತು ಕೆಲವರು ಸಾಲವನ್ನ ಕೊಡುವ ಸಮಯದಲ್ಲಿ ಸಾಲ ಪಡೆದುಕೊಂಡವರು ಸತ್ತರೆ ಅವರನ್ನ ಸಾಲವನ ಯಾರು ತೀರಿಸುತ್ತಾರೆ ಅನ್ನುವುದನ್ನ ಕೂಡ ಬರೆಸಿಕೊಂಡಿರುತ್ತಾರೆ ಎಂದು ಹೇಳಬಹುದು.

ಇನ್ನು ಸಾಲ ಪಡೆದುಕೊಂಡವರು ಸತ್ತರೆ ಆ ಸಾಲವನ್ನ ಯಾರು ತೀರಿಸಬೇಕು ಅನ್ನುವ ಸಲುವಾಗಿ ದೊಡ್ಡ ಸುದ್ದಿ ಬಂದಿದ್ದು ಈ ಸುದ್ದಿ ತಿಳಿದುಕೊಳ್ಳುವುದು ಅತ್ಯವಶ್ಯಕ ಎಂದು ಹೇಳಬಹುದು. ಇನ್ನು ಈಗ ದೇಶದಲ್ಲಿ ಈಗ ಹೊಸ ನಿಯಮ ಜಾರಿಗೆ ಬಂದಿದ್ದು ಇದು ಜನರ ಶಾಕ್ ಗೆ ಕಾರಣವಾಗಿದೆ ಎಂದು ಹೇಳಬಹುದು. ಸಾಲ ಪಡೆದುಕೊಂಡವರು ಸತ್ತರೆ ಅವರ ಸಾಲವನ್ನ ಯಾರು ತೀರಿಸಬೇಕು ಅನ್ನುವ ಸಲುವಾಗಿ ದೊಡ್ಡ ನಿಯಮ ಜಾರಿಗೆ ಬಂದಿದ್ದು ಈ ಸುದ್ದಿ ಅವಶ್ಯಕವಾಗಿ ತಿಳಿದುಕೊಳ್ಳಬೇಕು ಎಂದು ಹೇಳಬಹುದು. ಹಾಗಾದರೆ ಜಾರಿಗೆ ಬಂದಿರುವ ಆ ಹೊಸ ನಿಯಮ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ನಿಮಗೆಲ್ಲ ತಿಳಿದಿರುವ ಹಾಗೆ ದೇಶದಲ್ಲಿ ಕರೋನ ಮಹಾಮಾರಿ ಕಾಣಿಸಿಕೊಂಡು ಅದೆಷ್ಟೋ ಜನರು ತಮ್ಮ ಪ್ರಾಣವನ್ನ ಕಳೆದುಕೊಂಡಿದ್ದಾರೆ ಎಂದು ಹೇಳಬಹುದು.

Loan in bank

ಅನೇಕ ಕುಟುಂಬಗಳು ತಮ್ಮ ಮನೆಯ ವಾರಸುದಾರರನ್ನ ಕಳೆದುಕೊಂಡಿದ್ದಾರೆ ಎಂದು ಹೇಳಬಹುದು. ಇನ್ನು ಇಂತಹ ಪರಿಸ್ಥಿತಿಯಲ್ಲಿ ಗೃಹ ಸಾಲ, ಹಠಾತ್ ಮರಣ ಹೊಂದಿರುವ ಜನರ ಕ್ರೆಡಿಟ್ ಕಾರ್ಡ್ ನಂತಹ ಹೊಣೆಗಾರಿಕೆಗಳ ಗತಿ ಏನು ಅನ್ನೋ ಪ್ರಶ್ನೆ ಉದ್ಭವಿಸುತ್ತದೆ. ಸತ್ತವರು ಮಾಡಿದ ಸಾಲವನ್ನ ಅವರ ಮನೆಯವರು ಪಾವತಿ ಮಾಡಬೇಕಾ ಅಥವಾ ಇದಕ್ಕೆ ಬೇರೆ ಯಾವುದಾದರು ದಾರಿ ಉಂಟಾ ಅನ್ನುವ ಪ್ರಶ್ನೆ ಎಲ್ಲರಲ್ಲೂ ಇದೆ ಎಂದು ಹೇಳಬಹುದು. ಸಾಲಗಳ ವಿಷಯಕ್ಕೆ ಬಂದಾಗ ಈ ವಿಷಯದಲ್ಲಿ ಎಲ್ಲಾ ರೀತಿಯ ಸಾಲಗಳು ಒಂದೇ ಆಗಿರುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಗೃಹ ಸಾಲ, ವಾಹನ ಸಾಲ, ವಸೂಲಾತಿ ಸಾಲ ಮತ್ತು ವೈಯಕ್ತಿಕ ಸಾಲ, ಕ್ರೆಡಿಟ್ ಕಾರ್ಡ್ ಸಾಲ ಇತ್ಯಾದಿಗಳಲ್ಲಿ ಸ್ವಲ್ಪ ವ್ಯತ್ಯಾಸವಿದೆ.

ಗೃಹ ಸಾಲಗಳು ಬಹಳ ದೀರ್ಘಾವಧಿ ಸಾಲಗಳಾದ ಕಾರಣ ಬ್ಯಾಂಕುಗಳು ಆಸ್ತಿಗಳನ್ನ ಸಾಲಕ್ಕೆ ಲಿಂಕ್ ಮಾಡಿರುತ್ತದೆ ಮತ್ತು ಇನ್ನು ಸಾಲಗಾರನ ಮರಣದ ಸಂದರ್ಭದಲ್ಲಿ ಸಾಲದ ವಸೂಲಾತಿಗೆ ಪರಿಣಾಮ ಬೀರದ ರೀತಿಯಲ್ಲಿ ಸಾಲದ ರಚನೆಯನ್ನ ಉಳಿಸಿಕೊಳ್ಳುತ್ತವೆ. ಬ್ಯಾಂಕುಗಳು ಅಂತಹ ಸಾಲಗಳಲ್ಲಿ ಸಂಗಾತಿ ಅಥವಾ ಇತರ ಯಾವುದೇ ಕುಟುಂಬ ಸದಸ್ಯರನ್ನ ಸಹ ಅರ್ಜಿದಾರರಾಗಿ ಇಡುತ್ತವೆ. ಮತ್ತು ಇಷ್ಟೇ ಅಲ್ಲದೆ ಸಾಲಗಾರನು ಸಾಕಷ್ಟು ವಿಮಾ ಪಾಲಿಸಿಯನ್ನು ಹೊಂದಿದ್ದಾನೆಯೇ ಅಥವಾ ಇಲ್ಲವೇ ಎಂಬುದನ್ನ ಸಹ ಅನೇಕ ಬಾರಿ ನೋಡಲಾಗುತ್ತದೆ. ಇನ್ನು ಮನೆ ಖರೀದಿದಾರ ಹಠಾತ್ ಮರಣ ಹೊಂದಿದರೆ ಬಾಕಿ ಸಾಲವನ್ನು ಮರುಪಾವತಿಸುವುದು ಕುಟುಂಬಕ್ಕೆ ದೊಡ್ಡ ಹೊರೆಯಾಗಬಹುದು, ಆದರೆ ಸಾಲ ತೆಗೆದುಕೊಳ್ಳುವವರಲ್ಲಿ ಹೆಚ್ಚಿನವರು ತಮಗಾಗಿ ಉತ್ತಮ ಅವಧಿಯ ಪಾಲಿಸಿಯನ್ನ ತೆಗೆದುಕೊಂಡಿದ್ದಾರೆ ಅಥವಾ ಸಾಲವನ್ನ ವಿಮೆ ಮಾಡಿರುತ್ತಾರೆ ಮತ್ತು ಕುಟುಂಬಕ್ಕೆ ಅದರ ಬಗ್ಗೆ ತಿಳಿದಿಲ್ಲದಿದ್ದರೆ ಅವರು ದಾಖಲೆಗಳನ್ನು ನೋಡುವ ಮೂಲಕ ಕಂಡುಹಿಡಿಯಬೇಕು ಮತ್ತು ವಿಮ ಮೊತ್ತವನ್ನ ಪಾವತಿ ಮಾಡುವ ಸಾಲವನ್ನ ತೀರಿಸಬೇಕು.

Join Nadunudi News WhatsApp Group

Loan in bank

ಇನ್ನು ಗಂಡ ಅಥವಾ ಹೆಂಡತಿಯಂತಹ ಒಬ್ಬರ ಸಂಗಾತಿಯು ಸಾಲವನ್ನು ಮರುಪಾವತಿಸುವ ಸ್ಥಿತಿಯಲ್ಲಿಲ್ಲ ಎಂದು ಭಾವಿಸಿ ನಂತರ ಅವನ ಮಕ್ಕಳು ಮತ್ತು ಹೆಣ್ಣುಮಕ್ಕಳು ಸಹ ಅದನ್ನು ಮರುಪಾವತಿಸಬಹುದು. ಇನ್ನು ಸಾಲವನ್ನ ಮರುಪಾವತಿ ಮಾಡಲು ಯಾರಿಂದಲೂ ಸಾಧ್ಯವಾಗದೆ ಇದ್ದರೆ ಬ್ಯಾಂಕ್ ಆಸ್ತಿ ಅಥವಾ ಮನೆಯನ್ನ ಸ್ವಾಧೀನ ಪಡಿಸಿಕೊಳ್ಳಬಹುದು. ಇನ್ನು ವೈಯಕ್ತಿಕ ಸಾಲಗಳಲ್ಲಿ ಕೂಡ ಇದೆ ವಿಧಾನ ಇರುತ್ತದೆ ಎಂದು ಹೇಳಬಹುದು. ಇನ್ನು ವೈಯಕ್ತಿಕ ಸಾಲಗಳಲ್ಲಿ ಆ ವಿಮ ಮೊತ್ತವನ್ನ ಸಾಲವನ್ನ ತೀರಿಸಲು ಬಳಸಿಕೊಳ್ಳಬಹುದು. ವಾಹನ ಸಾಲ ಸಂದರ್ಭದಲ್ಲಿ ಸಾಲಗಾರನ ಮರಣದ ಸಂದರ್ಭದಲ್ಲಿ ಸಾಲದಾತನು ಮೊದಲು ಕುಟುಂಬ ಸದಸ್ಯರನ್ನ ಸಂಪರ್ಕಿಸಿ ಈ ಸಾಲವನ್ನು ಮರುಪಾವತಿಸಲು ಕೇಳುತ್ತಾನೆ. ಆದರೆ ಕುಟುಂಬವು ಅದಕ್ಕೆ ಸಿದ್ಧವಾಗಿಲ್ಲದಿದ್ದರೆ ಕಂಪನಿಯು ವಾಹನವನ್ನ ಸ್ವಾಧೀನಪಡಿಸಿಕೊಳ್ಳುತ್ತದೆ ಮತ್ತು ಅದರ ಹರಾಜು ಮಾಡಿ ಅದರ ಬಾಕಿಯನ್ನ ಮರುಪಡೆಯುತ್ತದೆ.

ಇನ್ನು ಶಿಕ್ಷಣದ ಸಾಲದ ವಿಷಯಕ್ಕೆ ಬರುವುದಾದರೆ, ಯಾವುದೇ ಖಾತರಿ ಇಲ್ಲದೆ ಶಿಕ್ಷಣ ಸಾಲವನ್ನ ನೀಡಲಾಗುವುದಿಲ್ಲ. ಇಷ್ಟೇ ಅಲ್ಲದೆ ಸಾಲದ ಮೊತ್ತವು ಹೆಚ್ಚಾಗಿದ್ದರೆ ಅನೇಕ ಬಾರಿ ಪೋಷಕರು ಸಹ ಮೇಲಾಧಾರವನ್ನ ನೀಡಬೇಕಾಗುತ್ತದೆ. ಆದ್ದರಿಂದ ಸಾಲವನ್ನ ತೆಗೆದುಕೊಂಡ ವಿದ್ಯಾರ್ಥಿ ದುರದೃಷ್ಟವಶ ಸತ್ತರೆ ಬ್ಯಾಂಕ್ ಈ ಸಾಲದ ಖಾತರಿದಾರನನ್ನ ಅಂದರೆ ಬಾಕಿ ಇರುವ ಮೊತ್ತವನ್ನ ಪಾವತಿಸಲು ಅವನ ಅಥವಾ ಅವಳ ಪಾಲಕನನ್ನು ಕೇಳುತ್ತದೆ. ಸಾಲ ಪಾವತಿಸದ ಸಂದರ್ಭದಲ್ಲಿ ಭದ್ರತೆಯ ಮೇಲೆ ಹೊಂದಿರುವ ಆಸ್ತಿಯನ್ನು ಹರಾಜು ಮಾಡಬಹುದು. ಸ್ನೇಹಿತರೆ ಈ ಮಾಹಿತಿಯನ್ನ ಸಾಲ ಪಡೆದುಕೊಂಡಿರುವ ಎಲ್ಲರಿಗು ತಲುಪಿಸಿ.

Join Nadunudi News WhatsApp Group