ನಟಿ ರಚಿತಾ ರಾಮ್ ಕನ್ನಡ ಚಿತ್ರರಂಗ ಕಂಡ ಖ್ಯಾತ ನಟಿ ಎಂದು ಹೇಳಬಹುದು. ಕನ್ನಡ ಹತ್ತು ಹಲವು ಸೂಪರ್ ಹಿಟ್ ಚಿತ್ರಗಳನ್ನ ಕೊಟ್ಟಿರುವ ನಟಿ ರಚಿತಾ ರಾಮ್ ಅವರು ಅದೆಷ್ಟೋ ಅಭಿಮಾನಿಗಳನ್ನ ಗಳಿಸಿಕೊಂಡಿದ್ದಾರೆ ಎಂದು ಹೇಳಬಹುದು. ಕನ್ನಡ ಹಲವು ಅಭಿಮಾನಿ ಬಳಗವನ್ನ ಹೊಂದಿರುವ ನಟಿ ರಚಿತಾ ರಾಮ್ ಅವರು ಸದ್ಯ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದ್ದಾರೆ ಎಂದು ಹೇಳಬಹುದು. ಹೌದು ಲವ್ ಯು ರಚ್ಚು ಚಿತ್ರದ ಸುದ್ದಿಗೋಷ್ಠಿಯಲ್ಲಿ ರಚಿತಾ ರಾಮ್ ಆಡಿರುವ ಮಾತುಗಳು ಈಗ ಸಕತ್ ವೈರಲ್ ಆಗುವುದು ಮಾತ್ರವಲ್ಲದೆ ಕೆಲವರು ಅದನ್ನ ಟ್ರೊಲ್ ಕೂಡ ಮಾಡುತ್ತಿದ್ದಾರೆ ಎಂದು ಹೇಳಬಹುದು.
ಹೌದು ಲವ್ ಯು ರಚ್ಚು ಚಿತ್ರದ ಸುದ್ದಿಗೋಷ್ಠಿಯಲ್ಲಿ ನಟಿ ರಚಿತಾ ರಾಮ್ ಅವರು ಫಸ್ಟ್ ನೈಟ್ ಬಗ್ಗೆ ಮಾತನಾಡಿದ್ದು ಸದ್ಯ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ರಚಿತಾ ರಾಮ್ ಗೆ ಇನ್ನೊಂದು ದೊಡ್ಡ ಶಾಕಿಂಗ್ ಸುದ್ದಿ ಬಂದಿದೆ ಎಂದು ಹೇಳಬಹುದು. ಹೌದು ಸುದ್ದಿಗೋಷ್ಠಿಯಲ್ಲಿ ಫಸ್ಟ್ ನೈಟ್ ಕುರಿತು ಹೇಳಿಕೆ ನೀಡಿರುವ ರಚಿತಾ ರಾಮ್ ಅವರನ್ನ ಬ್ಯಾನ್ ಮಾಡಬೇಕು ಅನ್ನುವ ಆದೇಶ ಈಗ ಕೇಳಿಬಂದಿದೆ. ಹಾಗಾದರೆ ಅಷ್ಟಕ್ಕೂ ಆಗಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಲವ್ ಯು ಚಿತ್ರದ ಹಾಡೊಂದರ ಸೀನ್ ಬಗ್ಗೆ ರಚಿತಾ ರಾಮ್ ಅವರಿಗೆ ಮಾದ್ಯಮದವರು ಪ್ರಶ್ನೆಯನ್ನ ಕೇಳಿದ ಸಮಯದಲ್ಲಿ ನಟಿ ರಚಿತಾ ರಾಮ್ ಅವರು ಫಸ್ಟ್ ನೈಟ್ ನಲ್ಲಿ ಎಲ್ಲರೂ ಏನು ಮಾಡುತ್ತಾರೋ ಅದನ್ನೇ ಮಾಡಿದ್ದೀವಿ ಅನ್ನುವ ಹೇಳಿಕೆ ನೀಡಿದರು.
ಸದ್ಯ ರಚಿತಾ ರಾಮ್ ಅವರು ನೀಡಿರುವ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದ್ದಂತೆ ರಚಿತಾ ರಾಮ್ ಅವರನ್ನ ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂದು ಕನ್ನಡ ಕ್ರಾಂತಿದಳ ಒತ್ತಾಯಿಸಿದೆ. ಇನ್ನು ಇದರ ಕುರಿತಂತೆ ಸುದ್ದಿಗೋಷ್ಠಿಯನ್ನ ನಡೆಸಿರುವ ಸಂಘಟನೆಯ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಅವರು, ರಚಿತಾ ರಾಮ್ ಅವರು ಮಾಧ್ಯಮದವರ ಜೊತೆ ಆ ದೃಶ್ಯಕ್ಕೆ ಸಂಬಂಧಿಸಿದಂತೆ ಗೌರಯುತವಾಗಿ ಮಾತನಾಡದೆ ನಾಚಿಕೆಯಿಲ್ಲದೆ ನಾಲಿಗೆ ಹರಿಬಿಟ್ಟಿರುವ ಅವರನ್ನ ಚಲನಚಿತ್ರ ಮಂಡಳಿ ಸೂಕ್ಶ್ಮವಾಗಿ ಪರಿಗಣಿಸಿ ನಿಷೇದ ಹೇರಬೇಕು ಮತ್ತು ಕ್ಷಮೆಯಾಚಿಸದೇ ಇದ್ದರೆ ಚಿತ್ರವನ್ನ ಬಿಡುಗಡೆ ಮಾಡಬಾರದು ಎಂದು ಹೇಳಿದರು.
ಇನ್ನು ಕಳೆದ ಬಾರಿ ನಟಿ ರಚಿತಾ ರಾಮ್ ಐ ಲವ್ ಯು ಚಿತ್ರದಲ್ಲಿ ಅಂತಹ ದೃಶ್ಯದಲ್ಲಿ ಕಾಣಿಸಿಕೊಂಡು ನಂತರ ಮಾಧ್ಯಮದ ಮುಂದೆ ಕಣ್ಣೀರು ಹಾಕಿದ್ದರು, ಆದರೆ ಈಗ ಮತ್ತೆ ಅಂತಹ ದೃಶ್ಯದಲ್ಲಿ ಕಾಣಿಸಿಕೊಂಡಿದ್ದು ಪ್ರಶ್ನೆ ಮಾಡಿದರೆ ನಾಚಿಕೆ ಇಲ್ಲದೆ ಮಾತನಾಡಿದ್ದಾರೆ ಮತ್ತು ರಚಿತಾ ರಾಮ್ ಅವರು ಈ ರೀತಿ ಅಸಭ್ಯವಾಗಿ ಮಾತನಾಡಿ ನಮ್ಮ ಸಂಸ್ಕೃತಿಗೆ ದಕ್ಕೆ ಕೆಲಸ ಮಾಡಿದ್ದಾರೆ ಎಂದು ಸಂಘದ ಗೌರವಾಧ್ಯಕ್ಷರು ಹೇಳಿದರು. ಸ್ನೇಹಿತರೆ ರಚಿತಾ ರಾಮ್ ಅವರ ಈ ಮಾತಿನ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.