Lowest Home Loan Rates 2025: ನಿಮ್ಮ ಕನಸಿನ ಮನೆಯನ್ನು ನಿರ್ಮಿಸಿಕೊಳ್ಳಲು ಬ್ಯಾಂಕುಗಳು ಸಾಲವನ್ನು ನೀಡುತ್ತವೆ. ಎಲ್ಲ ಬ್ಯಾಂಕ್ ನಲ್ಲಿ ಕೂಡ ಗೃಹ ಸಾಲದ ಬಡ್ಡಿದರ ಒಂದೇ ರೀತಿಯಲ್ಲಿ ಇರುವುದಿಲ್ಲ. ಇದೀಗ RBI ರೆಪೋ ದರವನ್ನು 5.50% ಕ್ಕೆ ಇಳಿಸಿದ ನಂತರ, ಡಿಸೆಂಬರ್ 2025 ರಲ್ಲಿ ಮನೆ ಸಾಲದ ಬಡ್ಡಿ ದರಗಳು ಗಣನೀಯವಾಗಿ ಇಳಿಕೆ ಆಗಿದೆ. ಎಲ್ಲ ಬ್ಯಾಂಕ್ ನಲ್ಲಿ ಮಾಹಿತಿ ಪಡೆದು, ನಂತರ ಗೃಹ ಸಾಲಕ್ಕೆ ಅರ್ಜಿಯನ್ನು ಸಲ್ಲಿಸಬೇಕು. ಹಾಗಾದರೆ ಗೃಹಸಾಲ ಮಾಡಲು ಯಾವ ಬ್ಯಾಂಕ್ ಉತ್ತಮ ಮತ್ತು ಬ್ಯಾಂಕುಗಳ ಈಗಿನ ಗೃಹಸಾಲದ ಬಡ್ಡಿದರ ಏನಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
20 ವರ್ಷಕ್ಕೆ 50 ಲಕ್ಷ ಗೃಹ ಸಾಲಕ್ಕೆ ಪಡೆದುಕೊಂಡರೆ ತಿಂಗಳಿಗೆ ಎಷ್ಟು EMI ಪಾವತಿಸಬೇಕು?
* 9% ಬಡ್ಡಿಯಲ್ಲಿ ತಿಂಗಳಿಗೆ 45,000 ರೂಪಾಯಿ EMI ಪಾವತಿಸಬೇಕಾಗುತ್ತದೆ. ಒಟ್ಟು 58 ಲಕ್ಷ ಮರುಪಾವತಿ ಮಾಡಬೇಕು.
* 8% ಬಡ್ಡಿಯಲ್ಲಿ ತಿಂಗಳಿಗೆ 41,800 ರೂಪಾಯಿ EMI ಪಾವತಿಸಬೇಕಾಗುತ್ತದೆ. ಒಟ್ಟು 50 ಲಕ್ಷ ಮರುಪಾವತಿ ಮಾಡಬೇಕು.
* 7.50% ಬಡ್ಡಿಯಲ್ಲಿ ತಿಂಗಳಿಗೆ 40,300 ರೂಪಾಯಿ EMI ಪಾವತಿಸಬೇಕಾಗುತ್ತದೆ. ಒಟ್ಟು 46.7 ಲಕ್ಷ ಮರುಪಾವತಿ ಮಾಡಬೇಕು.
* 7.35% ಬಡ್ಡಿಯಲ್ಲಿ ತಿಂಗಳಿಗೆ 39,800 ರೂಪಾಯಿ EMI ಪಾವತಿಸಬೇಕಾಗುತ್ತದೆ. ಒಟ್ಟು 45.5 ಲಕ್ಷ ಮರುಪಾವತಿ ಮಾಡಬೇಕು.
ಕಡಿಮೆ ಬಡ್ಡಿ ನೀಡುವ ಟಾಪ್ 10 ಬ್ಯಾಂಕ್ ಗಳ ಪಟ್ಟಿ
* ಬ್ಯಾಂಕ್ ಆಫ್ ಮಹಾರಾಷ್ಟ – 7.35% ( ಮಹಿಳೆಯರಿಗೆ 7.30% ಬಡ್ಡಿ , ಪ್ರೊಸೆಸಿಂಗ್ ಫೀ ಕೇವಲ 0.25 % ಮತ್ತು ಗರಿಷ್ಠ 10 ಕೋಟಿ ತನಕ ಸಾಲ ನೀಡುತ್ತದೆ).
* ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ – 7.35% ( 90% LTV, ಸರ್ಕಾರಿ ನೌಕರರಿಗೆ ವಿಶೇಷ ರಿಯಾಯಿತಿ ).
* ಬ್ಯಾಂಕ್ ಆಫ್ ಇಂಡಿಯಾ – 7.35% ( ಪ್ರೀ ಪೇಮೆಂಟ್ ಮತ್ತು ಪಾರ್ಟ್ ಪೇಮೆಂಟ್ ಚಾರ್ಜ್ ಶೂನ್ಯವಾಗಿದೆ ).
* ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ – 7.40% ( ಆನ್ಲೈನ್ ಅಪ್ಲಿಕೇಶನ್ ನಲ್ಲಿ 0.05% ಎಕ್ಸ್ಟ್ರಾ ಡಿಸ್ಕೌಂಟ್ ಲಭ್ಯ).
* ಇಂಡಿಯನ್ ಓವರ್ಸಿಸ್ ಬ್ಯಾಂಕ್ – 7.40% ( ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಉತ್ತಮ ಸೇವೆಯನ್ನು ನೀಡುತ್ತಿದೆ).
* ಪಂಜಾಬ್ ನ್ಯಾಷನಲ್ ಬ್ಯಾಂಕ್ – 7.45% ( PMAY ಅಡಿಯಲ್ಲಿ 2.67 ಲಕ್ಷ ಸಬ್ಸಿಡಿ ಲಭ್ಯ).
* ಬ್ಯಾಂಕ್ ಆಫ್ ಬರೋಡಾ – 7.50% (ಮಹಿಳಾ ಸಹ-ಅರ್ಜಿದಾರರಿದ್ದರೆ 7.45%).
* ಕೆನರಾ ಬ್ಯಾಂಕ್ – 7.55% ( ಜರನಾಟಕದಲ್ಲಿ ಅತಿ ಹೆಚ್ಚು ಶಾಖೆಯನ್ನು ಹೊಂದಿದೆ ).
* SBI – 7.60 % (ಆದರೆ PMAY ಸಬ್ಸಿಡಿ + ಕ್ರೆಡಿಟ್ ಸ್ಕೋರ್ ಬೋನಸ್ ನೊಂದಿಗೆ 7.40 %).
* HDFC ಬ್ಯಾಂಕ್ (ಖಾಸಗಿ) – 7.65% (48 ಗಂಟೆಗಳಲ್ಲಿ ಸಾಲಕ್ಕೆ ಅನುಮೋದನೆ ಸಿಗುತ್ತದೆ).
PMAY 2025 ಅಡಿಯಲ್ಲಿ ಯಾರು ಮತ್ತು ಎಷ್ಟು ಸಬ್ಸಿಡಿ ಪಡೆದುಕೊಳ್ಳುತ್ತಾರೆ ?
* ಆರ್ಥಿಕವಾಗಿ ದುರ್ಬಲ ವಿಭಾಗಕ್ಕೆ (EWS) ಸೇರಿದವರು 2.67 ಲಕ್ಷ ಸಬ್ಸಿಡಿ ಪಡೆದುಕೊಳ್ಳುತ್ತಾರೆ. EWS ವರ್ಗದ ವಾರ್ಷಿಕ ಆದಾಯ 3 ಲಕ್ಷ ಇರಬೇಕು.
* ಕಡಿಮೆ ಆದಾಯದ ಗುಂಪು ವಿಭಾಗಕ್ಕೆ (LIG) ಸೇರಿದವರು 2.67 ಲಕ್ಷ ಸಬ್ಸಿಡಿ ಪಡೆದುಕೊಳ್ಳುತ್ತಾರೆ. LIG ವರ್ಗದ ವಾರ್ಷಿಕ ಆದಾಯ 3 ರಿಂದ 6 ಲಕ್ಷ ಇರಬೇಕು.
* ಮಿಕೊಯಾನ್-ಗುರೆವಿಚ್ -1 ವಿಭಾಗಕ್ಕೆ (MIG-1) ಸೇರಿದವರು 2.30 ಲಕ್ಷ ಸಬ್ಸಿಡಿ ಪಡೆದುಕೊಳ್ಳುತ್ತಾರೆ. MIG-1 ವರ್ಗದ ವಾರ್ಷಿಕ ಆದಾಯ 6 ರಿಂದ 12 ಲಕ್ಷ ಇರಬೇಕು.
* ಮಧ್ಯಮ ಆದಾಯ ಗುಂಪು-2 ವಿಭಾಗಕ್ಕೆ (MIG-2) ಸೇರಿದವರು 2.00 ಲಕ್ಷ ಸಬ್ಸಿಡಿ ಪಡೆದುಕೊಳ್ಳುತ್ತಾರೆ. MIG-2 ವರ್ಗದ ವಾರ್ಷಿಕ ಆದಾಯ 12 ರಿಂದ 18 ಲಕ್ಷ ಇರಬೇಕು.
ಅರ್ಜಿದಾರರು https://pmaymis.gov.in/ ಗೆ ಅಥವಾ ಬ್ಯಾಂಕ್ ಮೂಲಕ PMAY 2025 ಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಗೃಹ ಸಾಲಕ್ಕೆ ಬೇಕಾಗುವ ಅಗತ್ಯ ದಾಖಲೆಗಳು
* ಆಧಾರ್ ಕಾರ್ಡ್
* ಪಾನ್ ಕಾರ್ಡ್
* 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
* ಸಂಬಳ ಪಡೆಯುವವರು, ಫಾರ್ಮ್ 16, ಮತ್ತು 3 ತಿಂಗಳ ಸಾಲಿ ಸ್ಲಿಪ್ ಅನ್ನು ನೀಡಬೇಕು
* ಸ್ವಂತ ಉದ್ಯೋಗ ಮಾಡುವವರು, ITR 3 ವರ್ಷ, GST ರಿಟರ್ನ್ಸ್
* ಆಸ್ತಿ ದಾಖಲೆಗಳು (ಸೇಲ್ ಅಗ್ರಿಮೆಂಟ್, Encumbrance ಸರ್ಟಿಫಿಕೇಟ್)
ಕ್ರೆಡಿಟ್ ಸ್ಕೋರ್ ಹೆಚ್ಚಿಸಿಕೊಳ್ಳಲು ಸಲಹೆ
* ಎಲ್ಲ ಕ್ರೆಡಿಟ್ ಬಿಲ್ ಸಮಯಕ್ಕೆ ಸರಿಯಾಗಿ ಪಾವತಿ ಮಾಡಿ
* ಕ್ರೆಡಿಟ್ ಯುಟಿಲೈಸಷನ್ 30% ಕಿಂತ ಕಡಿಮೆ ಇಟ್ಟುಕೊಳ್ಳಿ
* ಹಳೆಯ ಕ್ರೆಡಿಟ್ ಕಾರ್ಡ್ ಮುಚ್ಚಬೇಡಿ
* ವೆಬ್ ಸೈಟ್ ನಲ್ಲಿ ಉಚಿತವಾಗಿ ಕ್ರೆಡಿಟ್ ವರದಿಯನ್ನು ಪರಿಶೀಲಿಕೊಳ್ಳಿ.
* ಹೊಸ ಸಾಲಕ್ಕಾಗಿ ಒಮ್ಮೆಲೇ ಎಲ್ಲ ಬ್ಯಾಂಕ್ ಗಳಿಗೆ ಅರ್ಜಿ ಸಲ್ಲಿಸಬೇಡಿ
* ಸಮಯಕ್ಕೆ ಸರಿಯಾಗಿ EMI ಪಾವತಿ ಮಾಡಿ
* ಜಾಯಿಂಟ್ ಲೋನ್ ಮಾಡುವುದಾದರೆ, ಮಹಿಳೆಯನ್ನು ಮೊದಲ ಅರ್ಜಿದಾರರನ್ನಾಗಿ ಮಾಡಿ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

