LPG Price Fall: ಮತ್ತಷ್ಟು ಅಗ್ಗವಾಯಿತು ಗ್ಯಾಸ್ ಸಿಲಿಂಡರ್, ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಕೇಂದ್ರದಿಂದ ಗುಡ್ ನ್ಯೂಸ್.
ಸರ್ಕಾರ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ವಿಶೇಷ ಪ್ರಯೋಜನವನ್ನು ನೀಡುವ ಜೊತೆಗೆ ಗ್ಯಾಸ್ ಸಿಲಿಂಡರ್ ವಿತರಕರ ಕಮಿಷನ್ ಹೆಚ್ಚಳ ಮಾಡಿದೆ.
LPG Cylinder Latest Update: ಸದ್ಯ ಕೇಂದ್ರ ಸರ್ಕಾರ Gas Cylinder ಕುರಿತಾಗಿ ಜನತೆಗೆ ಹೊಸ ಹೊಸ ಅಪ್ಡೇಟ್ ನೀಡುತ್ತಿದೆ. ದೇಶದ ಜನರು ಪ್ರತಿ ತಿಂಗಳ ಆರಂಭದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆಯ ಇಳಿಕೆಯ ಬಗ್ಗೆ ನಿರೀಕ್ಷಿಸುತ್ತಾರೆ. ಇನ್ನು October ನಲ್ಲಿ ತೈಲ ಕಂಪನಿಗಳು ಗ್ಯಾಸ್ ಬೆಲೆಯನ್ನು ಪರಿಷ್ಕರಿಸಿ 209 ರೂ. ಏರಿಕೆ ಮಾಡಿದೆ.
ಈ ಮೂಲಕ ಗ್ಯಾಸ್ ಬೆಲೆಯ ಇಳಿಕೆಯ ನಿರೀಕ್ಷೆಯಲ್ಲಿದ್ದವರಿಗೆ ಬೇಸರ ನೀಡಿದೆ. ಗ್ಯಾಸ್ ಬೆಲೆಯ ಏರಿಕೆಯ ಬೇಸರದಲ್ಲಿದ್ದ ಜನತೆಗೆ ಇದೀಗ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಇದೀಗ ಸರ್ಕಾರ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ವಿಶೇಷ ಪ್ರಯೋಜನವನ್ನು ನೀಡುವ ಜೊತೆಗೆ ಗ್ಯಾಸ್ ಸಿಲಿಂಡರ್ ವಿತರಕರ ಕಮಿಷನ್ ಹೆಚ್ಚಳ ಮಾಡಿದೆ.
ಗ್ಯಾಸ್ ಸಿಲಿಂಡರ್ ವಿತರಕರ ಕಮಿಷನ್ ಹೆಚ್ಚಳ
ಗ್ಯಾಸ್ ಸಿಲಿಂಡರ್ ವಿತರಕರ ಕಮಿಷನ್ ಹೆಚ್ಚಳ ಮಾಡಿದೆ. 14 .2 KG ರೀಫಿಲ್ ನ ಕಮಿಷನ್ ಅನ್ನು ಒಟ್ಟಾರೆ 8 .24 ರೂ. ಏರಿಕೆ ಮಾಡಲಾಗಿದೆ. ಈ ಹಿಂದೆ 64 .84 ರೂ. ನೀಡುತ್ತಿದ್ದ ಕಮಿಷನ್ ಇನ್ನುಮುಂದೆ 73 .08 ರೂ. ಗೆ ಹೆಚ್ಚಳವಾಗಲಿದೆ.
ಹಾಗೆಯೆ 5KG ರೀಫಿಲ್ ನ ಕಮಿಷನ್ ಅನ್ನು ಒಟ್ಟಾರೆ 4 ,12 ರೂ. ಏರಿಕೆ ಮಾಡಲಾಗಿದೆ. ಈ ಹಿಂದೆ 32 .42 ರೂ. ನೀಡುತ್ತಿದ್ದ ಕಮಿಷನ್ ಇನ್ನುಮುಂದೆ 36.54 ರೂ. ಗೆ ಹೆಚ್ಚಳವಾಗಲಿದೆ. ಚಿಲ್ಲರೆ ಹಣದುಬ್ಬರ ಮತ್ತು ಮುಂಬರುವ ರಾಜ್ಯ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ನಿರ್ಧಾರಗಳನ್ನು ತೆಗೆದುಕೊಂಡಿದೆ.
PM ಉಜ್ವಲ ಯೋಜನೆಯಡಿ ಕೇವಲ 600 ರೂ. ಗಳಲ್ಲಿ ಸಿಗಲಿದೆ ಗ್ಯಾಸ್ ಸಿಲಿಂಡರ್
ಸದ್ಯ ಕೇಂದ್ರದ ಮೋದಿ ಸರ್ಕಾರ Pradhan Mantri Ujjwala Yojana ಫಲಾನುಭವಿಗಳಿಗೆ ಸಬ್ಸಿಡಿ ಹೆಚ್ಚಿಸಲು ನಿರ್ಧರಿಸಿದೆ. ಸರ್ಕಾರವು ಪ್ರತಿ ಸಿಲಿಂಡರ್ ಗೆ ರೂ. 200 ರಿಂದ 300 ರ ವರೆಗೆ ಸಬ್ಸಿಡಿಯನ್ನು ಹೆಚ್ಚಿಸಲು ನಿರ್ಧರಿಸಿದೆ. ಇನ್ನುಮುಂದೆ Pradhan Mantri Ujjwala ಯೋಜನೆಯಡಿ ಫಲಾನುಭವಿಗಳು ಕೇವಲ 600 ರೂ. ಗಳಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಪಡೆಯಬಹುದಾಗಿದೆ. ಆದರೆ ಸಾಮಾನ್ಯ ಜನರಿಗೆ ಗ್ಯಾಸ್ ಸಿಲಿಂಡರ್ ಬೆಲೆ 903 ರೂಪಾಯಿ ಆಗಿದೆ.