LPG Dealers: ಗ್ಯಾಸ್ ಸಿಲಿಂಡರ್ ಬೆಲೆ ವಿಷಯವಾಗಿ ಕೇಂದ್ರದ ಇನ್ನೊಂದು ಘೋಷಣೆ, ಇಂದಿನಿಂದಲೇ ಹೊಸ ನಿಯಮ ಜಾರಿಗೆ.

ಗ್ಯಾಸ್ ಸಿಲಿಂಡರ್ ಬೆಲೆ ವಿಷಯವಾಗಿ ಕೇಂದ್ರದ ಇನ್ನೊಂದು ಘೋಷಣೆ.

LPG Dealers Commission Increase: ಪ್ರಸ್ತುತ ದೇಶದಲ್ಲಿ Gas Cylinder ವಿಷಯವಾಗಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದೆ. ಹಣಬುಬ್ಬರತೆಯ ಪರಿಣಾಮವನ್ನು ಎದುರಿಸುತ್ತಿರುವ ಜನರು ಸದ್ಯ ಗ್ಯಾಸ್ ಬೆಲೆಯ ಇಳಿಕೆಯ ನಿರೀಕ್ಷೆಯಲ್ಲಿದ್ದರು. ಪ್ರತಿ ತಿಂಗಳು ತಿಲ ಕಂಪನಿಗಳು ಗ್ಯಾಸ್ ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸುತ್ತದೆ. ಸದ್ಯ October ನಲ್ಲಿ ತೈಲ ಕಂಪನಿಗಳು ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿವೆ.

ಇನ್ನು ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ Gas Cylinder Subsidy ಯನ್ನು ಪರಿಚಯಿಸಿತ್ತು. ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಅಡಿಯಲ್ಲಿ 200 ರೂ. ಇಳಿಕೆ ಮಾಡಿತ್ತು. ಇನ್ನು ಸಬ್ಸಿಡಿ ಘೋಷಿಸಿದ ಬೆನ್ನಲ್ಲೇ ಸರ್ಕಾರ ಈ ತಿಂಗಳು ಗ್ಯಾಸ್ ಬೆಲೆಯನ್ನು ಏರಿಸಿದೆ. ಸಾಧ್ಯ ಗ್ಯಾಸ್ ಬೆಲೆಯನ್ನು ಹೆಚ್ಚಿಸಿರುವ ಬೆನ್ನಲ್ಲೇ ಗ್ಯಾಸ್ ಸಿಲಿಂಡರ್ ಬೆಲೆ ವಿಷಯವಾಗಿ ಕೇಂದ್ರ ಇನ್ನೊಂದು ಘೋಷಣೆ ಹೊರಡಿಸಿದೆ.

LPG Dealers Latest Update
Image Credit: Economictimes

ಗ್ಯಾಸ್ ಸಿಲಿಂಡರ್ ಬೆಲೆ ವಿಷಯವಾಗಿ ಕೇಂದ್ರದ ಇನ್ನೊಂದು ಘೋಷಣೆ
ಸದ್ಯ ದೇಶದ LPG ವಿತರಕರಿಗೆ ಸರ್ಕಾರ ಮಹತ್ವದ ಮಾಹಿತಿಯನ್ನು ನೀಡಿದೆ. Ministry of Petroleum and Natural Gas (MOPNG ) ದೇಶಿಯ ಗೃಹ ಬಳಕೆಯ LPG Gas Cylinder ವಿತರಕರಿಗೆ ಕಮಿಷನ್ ಹೆಚ್ಚಿಸಲು ನಿರ್ಧರಿಸಿದೆ. ಈ ಮೂಲಕ ಗ್ಯಾಸ್ ವಿತರಕರಿಗೆ ಸಿಹಿ ಸುದ್ದಿ ನೀಡಿದೆ. October 4 ರಿಂದಲೇ ಗ್ಯಾಸ್ ಸಿಲಿಂಡರ್ ವಿತರಕರ ಕಮಿಷನ್ ಹೆಚ್ಚಳ ಆಗುವುದಾಗಿ ಮಾಹಿತಿ ನೀಡಲಾಗಿದೆ.

ಎಷ್ಟು ಪ್ರಮಾಣದಲ್ಲಿ ಹೆಚ್ಚಳವಾಗಲಿದೆ ಕಮಿಷನ್….?
*ಇನ್ನು 14 .2 KG ರೀಫಿಲ್ ನ ಕಮಿಷನ್ ಅನ್ನು ಒಟ್ಟಾರೆ 8 .24 ರೂ. ಏರಿಕೆ ಮಾಡಲಾಗಿದೆ. ಈ ಹಿಂದೆ 64 .84 ರೂ. ನೀಡುತ್ತಿದ್ದ ಕಮಿಷನ್ ಇಂದಿನಿಂದ 73 .08 ರೂ. ಗೆ ಹೆಚ್ಚಳವಾಗಲಿದೆ.

*ಹಾಗೆಯೆ 5KG ರೀಫಿಲ್ ನ ಕಮಿಷನ್ ಅನ್ನು ಒಟ್ಟಾರೆ 4 ,12 ರೂ. ಏರಿಕೆ ಮಾಡಲಾಗಿದೆ. ಈ ಹಿಂದೆ 32 .42 ರೂ. ನೀಡುತ್ತಿದ್ದ ಕಮಿಷನ್ ಇಂದಿನಿಂದ 36 .54 ರೂ. ಗೆ ಹೆಚ್ಚಳವಾಗಲಿದೆ.

Join Nadunudi News WhatsApp Group

LPG Dealers Commission Increase
Image Credit: Business-standard

October ನಲ್ಲಿ LPG ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಏರಿಕೆ
Septembar ತಿಂಗಳಿನಲ್ಲಿ ಜನರು ಗ್ಯಾಸ್ ಸಿಲಿಂಡರ್ ನಲ್ಲಿ 200 ರೂ. ಇಳಿಕೆಯನ್ನು ಕಂಡಿದ್ದರು. ಕಳೆದ ತಿಂಗಳು ಇಳಿಕೆ ಕಂಡಿದ್ದ ಗ್ಯಾಸ್ ಸಿಲಿಂಡರ್ ಬೆಲೆ ಇದೀಗ October ತಿಂಗಳಿನಲ್ಲಿ ಏರಿಕೆ ಕಂಡಿದೆ. ತೈಲ ಮಾರುಕಟ್ಟೆಯ ಕಂಪನಿಗಳು LPG ವಾಣಿಜ್ಯ Gas Cylinder ಬೆಲೆಯಲ್ಲಿ 209 ರೂ. ಏರಿಕೆ ಮಾಡಿದೆ. October 1 ರಿಂದ ಹೊಸ LPG ದರ ಜಾರಿಗೆ ಬಂದಿದೆ.

Join Nadunudi News WhatsApp Group