LPG Gas: ಮನೆಯಲ್ಲಿ ಗ್ಯಾಸ್ ಬಳಸುವವರಿಗೆ ಭರ್ಜರಿ ಗುಡ್ ನ್ಯೂಸ್, ಈಗ ಕೇವಲ 450 ಕ್ಕೆ ಖರೀದಿಸಿ ಗ್ಯಾಸ್.
ಗ್ಯಾಸ್ ಬೆಲೆಯ ಏರಿಕೆಯ ಬೇಸರದಲ್ಲಿದ್ದ ಜನತೆಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ.
LPG Gas Cylinder Available At 450 Rs: ದೇಶದ ಜನರು ಪ್ರತಿ ತಿಂಗಳ ಆರಂಭದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆಯ ಇಳಿಕೆಯ ಬಗ್ಗೆ ನಿರೀಕ್ಷಿಸುತ್ತಾರೆ. ಇನ್ನು October ನಲ್ಲಿ ತೈಲ ಕಂಪನಿಗಳು ಗ್ಯಾಸ್ ಬೆಲೆಯನ್ನು ಪರಿಷ್ಕರಿಸಿದ್ದು, LPG Gas Cylinder ಗಳಲ್ಲಿ 209 ರೂ. ಏರಿಕೆ ಮಾಡಿದೆ.
ಈ ಮೂಲಕ ಗ್ಯಾಸ್ ಬೆಲೆಯ ಇಳಿಕೆಯ ನಿರೀಕ್ಷೆಯಲ್ಲಿದ್ದವರಿಗೆ ಬೇಸರ ನೀಡಿದೆ. ಸದ್ಯ ಕೇಂದ್ರ ಸರ್ಕಾರ Gas Cylinder ಕುರಿತಾಗಿ ಜನತೆಗೆ ಹೊಸ ಹೊಸ ಅಪ್ಡೇಟ್ ನೀಡುತ್ತಿದೆ. ಗ್ಯಾಸ್ ಬೆಲೆಯ ಏರಿಕೆಯ ಬೇಸರದಲ್ಲಿದ್ದ ಜನತೆಗೆ ಇದೀಗ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಕೇಂದ್ರ ಸರ್ಕಾರ ಗ್ಯಾಸ್ ಬೆಲೆಯ ಬಗ್ಗೆ ಮಹತ್ವದ ಘೋಷಣೆ ಹೊರಡಿಸಿದೆ.
Pradhan Mantri Ujjwala ಯೋಜನೆಯಡಿ ಸಬ್ಸಿಡಿ ದರ ಹೆಚ್ಚಳ
ಈಗಾಗಲೇ ಕೇಂದ್ರದ ಮೋದಿ ಸರಕಾರ Pradhan Mantri Ujjwala ಯೋಜನೆಯಡಿ Gas Cylinder Subsidy ಯನ್ನು ನೀಡುತ್ತಿದೆ. Ujjwala ಯೋಜನೆಯಡಿ ದೇಶದ ಬಡ ಜನತೆ ಸಬ್ಸಿಡಿ ದರದಲ್ಲಿ Gas Cylinder ಅನ್ನು ಪಡೆಯುತ್ತಿದೆ. ಈವರೆಗೆ ಕೇಂದ್ರ ಸರ್ಕಾರ Pradhan Mantri Ujjwala ಯೋಜನೆಯಡಿ ಅರ್ಹರು 200 ರೂ. ಸಬ್ಸಿಡಿಯನ್ನು ಪಡೆಯುತ್ತಿದ್ದರು.
ಈ 200 ರೂ. ಸಬ್ಸಿಡಿ ಮೂಲಕ ಜನರು ಕಡಿಮೆ ಬೆಲೆಗೆ ಗ್ಯಾಸ್ ಸಿಲಿಂಡರ್ ಅನ್ನು ಖರೀದಿಸಬಹುದಾಗಿತ್ತು. ಸದ್ಯ ಕೇಂದ್ರ ಸರ್ಕಾರ ಈ ಯೋಜನೆಯಡಿ ಸಬ್ಸಿಡಿಯನ್ನು ಹೆಚ್ಚಿಸಲು ನಿರ್ಧರಿಸಿದೆ. ಸರ್ಕಾರವು ಪ್ರತಿ ಸಿಲಿಂಡರ್ ಗೆ ರೂ. 200 ರಿಂದ 300 ರವರೆಗೆ ಸಬ್ಸಿಡಿಯನ್ನು ಹೆಚ್ಚಿಸಲು ನಿರ್ಧರಿಸಿದೆ. ಇನ್ನುಮುಂದೆ Pradhan Mantri Ujjwala ಯೋಜನೆಯಡಿ ಫಲಾನುಭವಿಗಳು ಹೆಚ್ಚಿನ ಸಬ್ಸಿಡಿ ದರದಲ್ಲಿ ಸಿಲಿಂಡರ್ ಅನ್ನು ಪಡೆಯಬಹುದು.
ಇನ್ನುಮುಂದೆ ಕೇವಲ 450 ಕ್ಕೆ ಖರೀದಿಸಿ ಗ್ಯಾಸ್ ಸಿಲಿಂಡರ್
ಪ್ರಸ್ತುತ ಮಧ್ಯಪ್ರದೇಶ ಸರ್ಕಾರ (Madya Pradesh Govt) Gas Cylinder ಅನ್ನು ಅತಿ ಕಡಿಮೆ ಬೆಲೆಗೆ ನೀಡಲು ಮುಂದಾಗಿದೆ. ಪ್ರಸ್ತುತ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ಗೃಹಬಳಕೆಯ LPG Gas Cylinder ಬೆಲೆ 908 ರೂ. ಗಳಾಗಿದ್ದು, ಸದ್ಯ ಕೇವಲ 450 ರೂ.ಗೆ ಸಿಲಿಂಡರ್ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ.
ಸದ್ಯ ಚುನಾವಣೆಯ ಕಾರಣ ಮಧ್ಯಪ್ರದೇಶದಲ್ಲಿ ಈ ಯೋಜನೆಗೆ ಜಾರಿಗೆ ಬಂದಿದ್ದು ಅಲ್ಲಿನ ಜನರು ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು. ಇನ್ನು ಮುಂದಿನ ನಮ್ಮ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಕೂಡ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಇಳಿಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸದ್ಯ ಸಬ್ಸಿಡಿ ಹೆಚ್ಚಳದ ಜೊತೆಗೆ ಗ್ಯಾಸ್ ಬೆಲೆ ಇಳಿಕೆ ಜನರ ಸಂತಸಕ್ಕೆ ಕಾರಣವಾಗಿದೆ ಎಂದು ಹೇಳಬಹುದು.
450 ರೂ. ನಲ್ಲಿ ಗ್ಯಾಸ್ ಸಿಲಿಂಡರ್ ಪಡೆಯಲು ಯಾರು ಅರ್ಹರು
ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಎಲ್ಲಾ ಫಲಾನುಭವಿಗಳು ಇದಕ್ಕೆ ಅರ್ಹರಾಗಿರುತ್ತಾರೆ. ಆದರೆ ಉಜ್ವಲ ಯೋಜನೆಯಲ್ಲದ ಸಂದರ್ಭದಲ್ಲಿ, ಲಾಡ್ಲಿ ಬ್ರಾಹ್ಮಣ ಯೋಜನೆಯ ಅರ್ಹ ಮಹಿಳೆಯರು ಈ ಪ್ರಯೋಜನವನ್ನು ಪಡೆಯುತ್ತಾರೆ. ಇನ್ನು ಮಹಿಳೆಯರು ಗ್ಯಾಸ್ ಸಿಲಿಂಡರ್ ಅನ್ನು ತೆಗೆದುಕೊಳ್ಳುವಾಗ ಸಂಪೂರ್ಣ ಮೊತ್ತವನ್ನು ನೀಡಬೇಕಾಗುತ್ತದೆ. ನಂತರ ಸರ್ಕಾರವು ಮಹಿಳೆಯರ ಖಾತೆಗೆ ಸಬ್ಸಿಡಿ ದರವನ್ನು ಜಮಾ ಮಾಡುತ್ತದೆ.