LPG Subsidy 2024: ಮನೆಯ ಯಜಮಾನಿಯರಿಗೆ ಕೇಂದ್ರದಿಂದ ಗುಡ್ ನ್ಯೂಸ್, ಪ್ರತಿ ಗ್ಯಾಸ್ ಸಿಲಿಂಡರ್ ಮೇಲೆ 300 ರೂ ಉಚಿತ.

ಕೇಂದ್ರದಿಂದ LPG ಕುರಿತಂತೆ ಇನ್ನೊಂದು ಘೋಷಣೆ

LPG Subsidy Hike: ದೇಶದಲ್ಲಿ ಹೆಚ್ಚುತ್ತಿರುವ ಗ್ಯಾಸ್ ಸಿಲಿಂಡರ್ ಬೆಲೆಯ ಹೊರೆಯನ್ನು ಕಡಿಮೆ ಮಾಡಲು ಕೇಂದ್ರದ ಮೋದಿ ಸರ್ಕಾರ 2016 ರಲ್ಲಿ ಉಜ್ವಲ ಯೋಜನೆಯನ್ನು ಪ್ರಾರಂಭಿಸಿದೆ.

ಈ ಯೋಜನೆಯಡಿ ದೇಶದ ಕೋಟ್ಯಾಂತರ ಜನರು ಕಡಿಮೆ ಬೆಲೆಯಲ್ಲಿ ಅಂದರೆ ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಪಡೆಯುತ್ತಿದ್ದಾರೆ. ಸದ್ಯ ಕೇಂದ್ರ ಮೋದಿ ಸರ್ಕಾರ PM ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸಿಹಿ ಸುದ್ದಿ ನೀಡಿದೆ. ಹೌದು, PM ಉಜ್ವಲ ಯೋಜನೆಯಡಿ ಫಲಾನುಭವಿಗಳಿಗೆ ನೀಡುತ್ತಿರುವ ಸೌಲಭ್ಯವನ್ನು ಸರ್ಕಾರ ಇನ್ನಷ್ಟು ಹೆಚ್ಚಿಸಿದೆ.

LPG Subsidy Hike
Image Credit: Economic Times

ಮನೆಯ ಯಜಮಾನಿಯರಿಗೆ ಕೇಂದ್ರದಿಂದ ಗುಡ್ ನ್ಯೂಸ್
PM ಉಜ್ವಲ ಯೋಜನೆಯಡಿ ಈವರೆಗೆ ಗ್ಯಾಸ್ ಸಿಲಿಂಡರ್ ಗಳ ಮೇಲೆ 200 ರೂ. ಸಬ್ಸಿಡಿಯನ್ನು ನೀಡಲಾಗುತ್ತಿತ್ತು. ಇನ್ನು ಅಕ್ಟೊಬರ್ ನಲ್ಲಿ 200 ರೂ. ಗಳ ಸಬ್ಸಿಡಿಯನ್ನು 300 ರೂ. ಗೆ ಹೆಚ್ಚಿಸಲಾಗಿತ್ತು. ಜನಸಾಮಾನ್ಯರು ಗ್ಯಾಸ್ ಸಿಲಿಂಡರ್ ಅನ್ನು 300 ರೂ. ಗಳ ಸಬ್ಸಿಡಿ ದರದಲ್ಲಿ ಖರೀದಿಸುತ್ತಿದ್ದರು. ಇದೀಗ ಕೇಂದ್ರ ಮೋದಿ ಸರ್ಕಾರ PM ಉಜ್ವಲ ಯೋಜನೆಯ ಸಬ್ಸಿಡಿ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡು ಮಹಿಳೆಯರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ.

ಪ್ರತಿ ಗ್ಯಾಸ್ ಸಿಲಿಂಡರ್ ಮೇಲೆ 300 ರೂ ಉಚಿತ
ಸದ್ಯ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಪ್ರತಿ LPG ಗ್ಯಾಸ್ ಸಿಲಿಂಡರ್ ಗೆ 300 ರೂ. ಗಳ ಸಬ್ಸಿಡಿಯನ್ನು ಮಾರ್ಚ್ 31 2025 ರ ವರೆಗೆ ಒಂದು ವರ್ಷ ವಿಸ್ತರಿಸಲು ಮೋದಿ ಸರ್ಕಾರ ನಿರ್ಧರಿಸಿದೆ. 2025 ರ ಮಾರ್ಚ್ 31 ರ ವರೆಗೆ ಜನಸಾಮಾನ್ಯರು ಗ್ಯಾಸ್ ಸಿಲಿಂಡರ್ ಗಳ ಮೇಲೆ 300 ರೂ. ಗಳ ಸಬ್ಸಿಡಿಯನ್ನು ಪಡೆಯಬಹುದು. ಮಹಿಳೆಯರು ಗ್ಯಾಸ್ ಸಿಲಿಂಡರ್ ಅನ್ನು ಖರೀದಿಸುವಾಗ ಸಂಪೂರ್ಣ ಮೊತ್ತವನ್ನು ನೀಡಬೇಕಾಗುತ್ತದೆ. ಗ್ಯಾಸ್ ಸಿಲಿಂಡರ್ ಖರೀದಿಯ ನಂತ್ರ ಸಬ್ಸಿಡಿ ಮೊತ್ತವನ್ನು ನೇರವಾಗಿ ಮಹಿಳೆಯರ ಖಾತೆಗೆ ಜಮಾ ಆಗುತ್ತದೆ. ಇನ್ನು ಮುಂದಿನ ವರ್ಷ ಮಾರ್ಚ್ ವರೆಗೆ ಪ್ರತಿ ಗ್ಯಾಸ್ ಸಿಲಿಂಡರ್ ಮೇಲೆ 300 ರೂ. ಉಚಿತವಾಗಿ ಪಡೆಯಬಹುದು.

LPG Subsidy Hike Latest Update
Image Credit: Roshankashmir

ಸಬ್ಸಿಡಿ ಹೆಚ್ಚಳದ ನಂತರ ಇಷ್ಟು ಕಡಿಮೆ ಬೆಲೆಗೆ ಸಿಗಲಿದೆ ಗ್ಯಾಸ್ ಸಿಲಿಂಡರ್
ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ಬಡ ಕುಟುಂಬಗಳಿಗೆ ರೂ. 300 ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ನೀಡುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಇನ್ನು ನವದೆಹಲಿಯಲ್ಲಿ ಕೇಂದ್ರ ಸರ್ಕಾರದ PMU ಯೋಜನೆಯ ಫಲಾನುಭವಿಗಳು 903 ರೂ.ಗೆ ಖರೀದಿಸುತ್ತಿದ್ದರೆ. ರೂ. 300 ಸಬ್ಸಿಡಿಯನ್ನು ನೇರವಾಗಿ ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ. ಈ ಮೂಲಕ ಯೋಜನೆಯ ಫಲಾನುಭವಿಯು ದೆಹಲಿಯಲ್ಲಿ 14.2 ಕೆಜಿ LPG Cylinder ಅನ್ನು ಕೇವಲ 603 ರೂ.ಗೆ ಪಡೆಯಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group