Solar Bus: ಭಾರತದಲ್ಲಿ ತಯಾರಾಯಿತು ಚಾಲಕರಿಲ್ಲದೆ ಚಲಿಸುವ ಸೌರ ಬಸ್, ಮೆಚ್ಚಿಗೆಗೆ ಕಾರಣವಾದ ಬಸ್.
Solar Powered Bus: ಇದೀಗ ಭಾರತದಲ್ಲಿ ಪರಿಸರ ಸ್ನೇಹಿ ವಾಹನ ತಯಾರಾಗಿದೆ. ಚಾಲಕನಿಲ್ಲದೆ ಸೌರಶಕ್ತಿಯಿಂದ ಚಲಿಸುವ ಬಸ್ ಬಿಡುಗಡೆಯಾಗಿದೆ. ಭಾರತದಲ್ಲಿ ತಂತ್ರಜ್ಞಾನಗಳ ಬೆಳವಣಿಗೆ ಇತ್ತೀಚಿಗೆ ಹೆಚ್ಚಾಗಿ ಕಂಡು ಬಂದಿದೆ.
ಹೊಸ ಹೊಸ ವಾಹನ, ಹೊಸ ಹೊಸ ತಂತ್ರಜ್ಞಾನವನ್ನು ಕಂಡು ಹಿಡಿಯುತ್ತಿರುವ ನಮ್ಮ ಭಾರ ದೇಶ ಮುಂದೆ ಸಾಗುತ್ತಿದೆ. ಸೌರ ಶಕ್ತಿಯಿಂದ ಚಲಿಸುವ ಬಸ್ ಅನ್ನು ಭಾರತದಲ್ಲಿ ತಂತ್ರಜ್ಞಾನದ ಮೂಲಕ ತಯಾರಿಸಲಾಗುತ್ತಿದೆ.
ಚಾಲಕನಿಲ್ಲದೆ ಓಡುವ ಬಸ್ ಭಾರತಲ್ಲಿ ತಯಾರಾಗುತ್ತಿದೆ
ಚಾಲಕನಿಲ್ಲದೆ ಓಡುವ ಸೋಲಾರ್ ಬಸ್ ಈಗ ಭಾರತದಲ್ಲಿ ಸಹ ತಯಾರಾಗುತ್ತಿದೆ. ಈ ಬಸ್ ನಲ್ಲಿ ಡ್ರೈವರ್ ಇಲ್ಲದೆ ಸಹ ಪ್ರಯಾಣಿಕರು ಆರಾಮಾಗಿ ಪ್ರಯಾಣ ಮಾಡಬಹುದಾಗಿದೆ. ಈ ಬಸ್ ನೋಡಲು ಸಹ ವಿಭಿನ್ನವಾಗಿದೆ. ಸೋಲಾರ್ ಇಂದ ಈ ಬಸ್ ತನ್ನಷ್ಟಕ್ಕೆ ತಾನೇ ಚಲಿಸುತ್ತದೆ.
ಭಾರತದಲ್ಲಿ ಹೊಸ ಹೊಸ ತಂತ್ರಜ್ಞಾನದ ಬೆಳವಣಿಗೆ
ವಿಶ್ವದಾದ್ಯಂತ ತಂತ್ರಜ್ಞಾನದಲ್ಲಿ ವ್ಯಾಪಕವಾದ ಬೆಳವಣಿಗೆಯಾಗುತ್ತಿದ್ದು, ಇದು ಹೊಸ ಹೊಸ ಆವಿಷ್ಕಾರಗಳಿಗೆ ನಾಂದಿಯಾಗುತ್ತಿದೆ.
ಈ ವಿಚಾರದಲ್ಲಿ ಭಾರತ ಕೂಡ ಹಿಂದೆ ಬಿದ್ದಿಲ್ಲ. ಇಲ್ಲಿನ ಇಂಜಿನಿಯರ್‌ಗಳು ಮತ್ತು ಯುವ ತಂತ್ರಜ್ಞರು ಲಭ್ಯವಿರುವ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅದಕ್ಕೆ ತಮ್ಮ ಬುದ್ಧಿವಂತಿಕೆಯನ್ನು ಸೇರಿಸುವ ಮೂಲಕ ಹೊಸ ಆವಿಷ್ಕಾರಗಳನ್ನು ಮಾಡುತ್ತಿದ್ದಾರೆ.
ಸೌರ ಶಕ್ತಿಯಿಂದ ಚಲಿಸುವ ಬಸ್ ಇನ್ನು ಮುಂದೆಯೇ ಭಾರತದಲ್ಲಿ ವಿನ್ಯಾಸಗೊಳಿಸಲಾಗುತ್ತದೆ
ಹೊಸ ಹೊಸ ತಂತ್ರಜ್ಞಾನದಿಂದ ನಮ್ಮ ದೇಶ ಇತರ ದೇಶಗಳಿಗಿಂತ ಮುಂದೆ ಸಾಗುತ್ತಿದೆ ಎನ್ನಬಹುದು. ಜನರಿಗೆ ಉಪಯುಕ್ತವಾಗುವ ವಾಹನಗಳು ಅಥವಾ ವಸ್ತುಗಳನ್ನು ತಯಾರಿಸುವುದು ದೊಡ್ಡ ವಿಷಯವಲ್ಲ, ಆದರೆ ಎಲ್ ಪಿ ಯು ವಿದ್ಯಾರ್ಥಿಗಳು ಪರಿಸರಕ್ಕೆ ಯಾವುದೇ ಅಪಾಯ ಉಂಟು ಮಾಡಬಾರದೆಂಬ ಆಲೋಚನೆಯೊಂದಿಗೆ ಸೌರ ಶಕ್ತಿಯಿಂದ ಚಲಿಸುವ ಬಸ್ ಅನ್ನು ವಿನ್ಯಾಸಗೊಳಿಸಿದ್ದಾರೆ.