M.M Keeravani Remuneration: RRR ಚಿತ್ರದ ನಾಟು ನಾಟು ಹಾಡಿಗೆ ದುಬಾರಿ ಸಂಭಾವನೆ ಪಡೆದಿರುವ ಎಂ.ಎಂ ಕೀರವಾಣಿ.
M.M Keeravani Salary Per Movie: ಸಂಗೀತ ನಿರ್ದೇಶಕ ಎಂ.ಎಂ ಕೀರವಾಣಿ (M.M Keeravani) ಅವರ ನಿರ್ದೇಶನದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿ ಪಡೆದು ಹೊಸ ದಾಖಲೆ ಬರೆದಿದೆ. ಇನ್ನು ನಾಟು ನಾಟು ಹಾಡಿನ (Natu Natu Song) ಸಂಗೀತ ನಿರ್ದೇಶಕರಾದ ಎಂ.ಎಂ ಕೀರವಾಣಿ ಅವರಿಗೆ ಎಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ. ದೇಶದೆಲ್ಲೆಡೆ ಎಂ.ಎಂ ಕೀರವಾಣಿ ಅವರು ಗುರುತಿಸಿಕೊಂಡಿದ್ದಾರೆ.
RRR ಚಿತ್ರದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿ ಪಡೆದಿರುವುದು ಇಡೀ ಭಾರತೀಯ ಚಿತ್ರರಂಗಕ್ಕೆ ಹೆಮ್ಮೆ ತಂದಿದೆ.
ಸಿನಿಮಾ ಸಂಗೀತ ಲೋಕದಲ್ಲಿ ಎಂ.ಎಂ ಕೀರವಾಣಿ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಪ್ರತಿ ಸಿನಿಮಾಗೆ ಅವರು ದುಬಾರಿ ಸಂಭಾವನೆ ಪಡೆಯುತ್ತಾರೆ. ಈಗ ಪ್ರತಿಷ್ಠಿತ ಆಸ್ಕರ್ ಗೆದ್ದಿರುದರಿಂದ ಅವರಿಗೆ ಇದ್ದ ಬೇಡಿಕೆ ಇನ್ನಷ್ಟು ಹೆಚ್ಚಾಗಿದೆ.
ದುಬಾರಿ ಸಂಭಾವನೆ ಪಡೆದಿರುವ ಎಂಎಂ ಕೀರವಾಣಿ
ನಿರ್ದೇಶಕ ಎಸ್ ಎಸ್ ರಾಜಮೌಳಿ (S.S Rajamouli) ಮಾತು ಎಂಎಂ ಕೀರವಾಣಿ ಅವರದ್ದು ಹಿಟ್ ಕಾಂಬಿನೇಷನ್. ಈವರೆಗೂ ರಾಜಮೌಳಿ ನಿರ್ದೇಶಿಸಿದ ಎಲ್ಲ ಸಿನಿಮಾಗಳಿಗೆ ಕೀರವಾಣಿ ಸಂಗೀತ ನೀಡಿದ್ದಾರೆ. ಇದೀಗ ಕೀರವಾಣಿ ಬಹುಭಾಷೆಗಳಲ್ಲಿ ಬೇಡಿಕೆ ಪಡೆದಿದ್ದಾರೆ.
ಕೀರವಾಣಿ ಅವರು ಪ್ರತಿ ಸಿನಿಮಾಗೆ ಸುಮಾರು 18 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗುತ್ತಿದೆ. ಇನ್ನು ಅವರ ಸಂಬಳದಲ್ಲಿ ಗಣನೀಯ ಏರಿಕೆಯಾಗಲಿದೆ. ರಾಜಮೌಳಿ ಅವರು ಮುಂದಿನ ದಿನಗಳಲ್ಲಿ ಹಾಲಿವುಡ್ ಗೆ ಲಗ್ಗೆ ಇಡುವ ಸಾಧ್ಯತೆ ಇದೆ.
ಒಂದು ವೇಳೆ ಅವರು ಜಾಗತಿಕ ಮಟ್ಟದಲ್ಲಿ ಸಿನಿಮಾ ಮಾಡಿದರೆ ಆ ಚಿತ್ರಕ್ಕೂ ಕೂಡ ಎಂಎಂ ಕೀರವಾಣಿ ಅವರೇ ಸಂಗೀತ ನೀಡುತ್ತಾರೆ ಎನ್ನಬಹುದು. ಆಗ ಕೀರವಾಣಿ ಅವರ ವ್ಯಾಪ್ತಿ ಇನ್ನಷ್ಟು ಹಿರಿದಾಗುತ್ತಾದೆ. ಹಾಲಿವುಡ್ ಪ್ರೊಡಕ್ಷನ್ ಕಂಪನಿಗಳ ಜೊತೆ ಕೈ ಜೋಡಿಸಿದರೆ ನಿರೀಕ್ಷೆಗೂ ಮೀರಿದ ಸಂಭಾವನೆ ಕೀರವಾಣಿ ಅವರ ಕೈ ಸೇರಲಿದೆ.