M.S Dhoni: ವಿಶ್ವಕಪ್ ಅಂತ್ಯಕ್ಕೂ ಮುನ್ನವೇ ಧೋನಿ ಕಡೆಯಿಂದ ಬಂತು ಗುಡ್ ನ್ಯೂಸ್, ಮತ್ತೆ ಅಬ್ಬರಿಸಲಿದ್ದಾರೆ ಧೋನಿ.
ವಿಶ್ವಕಪ್ ಮುಗಿಯುವ ಮುನ್ನವೇ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಮಹೇಂದ್ರ ಸಿಂಗ್ ಧೋನಿ.
M.S Dhoni Latest Update: ಕ್ರಿಕೆಟ್ ಇತಿಹಾಸದಲ್ಲಿ ವಿಶ್ವದ ಜನಪ್ರಿಯ ಕ್ರಿಕೆಟ್ ಆಟಗಾರರಲ್ಲಿ M.S Dhoni ಅವರು ಕೂಡ ಒಬ್ಬರಾಗಿದ್ದಾರೆ. ಧೋನಿ ಅವರು ತಮ್ಮ ಕ್ರಿಕೆಟ್ ಆಟದ ಮೂಲಕ ದೇಶ ವಿದೇಶದಿಂದಲೂ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ಅಂತರಾಷ್ಟ್ರೀಯ್ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ್ದರು ಕೂಡ ಧೋನಿ ಅವರು ಐಪಿಎಲ್ ಪಂದ್ಯದ ಮೂಲಕ ಅಭಿಮಾನಿಗಳಿಗೆ ತಮ್ಮ ಉತ್ತಮ ಆಟವನ್ನು ಪ್ರದಿರ್ಶಿಸುತ್ತ ಇರುತ್ತಾರೆ. ಇನ್ನು 2023 IPL v ನಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗುಜರಾತ್ ತಂಡದ ವಿರುದ್ಧ ಜಯ ಸಾಧಿಸಿದೆ.
ಧೋನಿ ಅಭಿಮಾನಿಗಳಿಗೆ ಬಿಗ್ ನ್ಯೂಸ್
ಈ ಬಾರಿ IPL ನಲ್ಲಿ ಕೂಡ CSK ತಂಡ ಕಪ್ ಗೆದ್ದಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ಬಾರಿ ಸಂತಸವಾಗಿದೆ ಎನ್ನಬಹುದು. ಇನ್ನು IPL ಪಂದ್ಯ ಮುಗಿದ ಬಳಿಕ ಧೋನಿ ಅವರು ತಮ್ಮ ಮೊಣಕಾಲಿನ ಸಮಸ್ಯೆಯಿಂದ ಆಸ್ಪತ್ರೆ ಪಾಲಾಗಬೇಕಾಗಿತ್ತು. ಈ ವೇಳೆ ಧೋನಿ ಅಭಿಮಾನಿಗಳು ಬೇಸರ ಹೊರಹಾಕಿದರು. ಇದೀಗ ಸ್ವತಃ ಧೋನಿ ಅವರೇ ತಮ್ಮ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ್ದಾರೆ. ವಿಶ್ವಕಪ್ ಅಂತ್ಯಕ್ಕೂ ಮುನ್ನವೇ ಧೋನಿ ಕಡೆಯಿಂದ ಅಭಿಮಾನಿಗಳಿಗೆ ಗುಡ್ ನ್ಯೂಸ್ ತಲುಪಿದೆ.
Thala Dhoni provides update on playing IPL 2024 and his knee surgery! 😍💛💥@MSDhoni #MSDhoni #WhistlePodu pic.twitter.com/Nffu5Co2f1
— DHONI Era™ 🤩 (@TheDhoniEra) October 26, 2023
ವಿಶ್ವಕಪ್ ಅಂತ್ಯಕ್ಕೂ ಮುನ್ನವೇ ಧೋನಿ ಕಡೆಯಿಂದ ಬಂತು ಗುಡ್ ನ್ಯೂಸ್
ಈ ಹಿಂದೆ ಧೋನಿ ಅವರು ಮೊಣಕಾಲಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಬಗ್ಗೆ ಮಾಹಿತಿ ನೀಡಿದ್ದರು. ಸದ್ಯ CSK ನಾಯಕ ತಮ್ಮ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಬಿಟ್ಗ್ ಅಪ್ಡೇಟ್ ನೀಡಿದ್ದಾರೆ. 2024 ರ IPL ನಲ್ಲಿ ಭಾಗವಯಿಸುವ ಬಗ್ಗೆ ಸುಳಿವು ನೀಡಿದ್ದಾರೆ. ಧೋನಿ ಅವರು ತಮ್ಮ ಆರೋಗ್ಯದ ಬಗ್ಗೆ ಮಾತನಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಧೋನಿ ಆರೋಗ್ಯದ ಸ್ಥಿತಿಯ ಬಗ್ಗೆ ಇದ್ದ ಆತಂಕ ಕಡಿಮೆ ಆಗಿದೆ ಎನ್ನಬಹುದು.
ಮತ್ತೆ IPL ನಲ್ಲಿ ಅಬ್ಬರಿಸಲಿದ್ದಾರೆ ಧೋನಿ
ನವೆಂಬರ್ ವೇಳೆಗೆ ಚೇತರಿಸಿಕೊಳ್ಳುತ್ತೇನೆ. ಈಗ ಮೊಣಕಾಲಿನ ಯಾವುದೇ ಸಮಸ್ಯೆ ಇಲ್ಲ ಮತ್ತು ಸಂಪೂರ್ಣ ಚೇತರಿಕೆಯ ಹಾದಿಯಲ್ಲಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಧೋನಿ ಹೇಳಿದ್ದಾರೆ. ಮೊಣಕಾಲು ಕಾರ್ಯಾಚರಣೆಯಿಂದ ಬದುಕುಳಿದೆ. ರಿಹ್ಯಾಬ್ ಪ್ಯಾಚ್ ನಡೆಯುತ್ತಿದೆ. ನವೆಂಬರ್ ವೇಳೆಗೆ ನೀವು ಹೆಚ್ಚು ಚೇತರಿಸಿಕೊಳ್ಳುತ್ತೀರಿ ಎಂದು ವೈದ್ಯರು ನನಗೆ ಹೇಳಿದರು. ಆದರೆ ನನ್ನ ದಿನಚರಿಯಲ್ಲಿ ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ. ಇನ್ನು IPL 2024 ರಲ್ಲೂ ಕೂಡ ಧೋನಿ CSK ತಂಡವನ್ನು ಲೀಡ್ ಮಾಡುವುದು ಅಭಿಮಾನಿಗಳಿಗೆ ಖಾತರಿಯಾಗಿದೆ.