ಕರೋನ ಮಹಾಮಾರಿ ಈ ಭೂಮಿಯ ಮೇಲೆ ಕೋಟ್ಯಾಂತರ ಸಂಖ್ಯೆಯ ಜೀವವನ್ನ ಬಲಿ ತೆಗೆದುಕೊಂಡಿದೆ ಎಂದು ಹೇಳಬಹುದು. ಹೌದು ಕರೋನ ಮಹಾಮಾರಿಗೆ ಅದೆಷ್ಟೋ ಗಣ್ಯ ವ್ಯಕ್ತಿಗಳು ತಮ್ಮ ಜೀವವನ್ನ ಕಳೆದುಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಕರೋನ ಆರ್ಭಟ ಇನ್ನೂ ಕೂಡ ಮುಂದುವರೆದಿದ್ದು ಸಾಯುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಕರೋನ ಮಹಾಮಾರಿ ದೇಶದ ಚಿತ್ರರರಂಗಕ್ಕೆ ಆವರಿಸಿದ್ದು ಅದೆಷ್ಟೋ ನಟ ನಟಿಯರು ಕೋರೋಣ ಮಹಾಮಾರಿಗೆ ಜೀವವನ್ನ ಕಳೆದುಕೊಂಡಿದ್ದಾರೆ ಎಂದು ಹೇಳಬಹುದು. ಇನ್ನು ಕರೋನ ಮಹಾಮಾರಿಗೆ ಜೀವವನ್ನ ಕಳೆದುಕೊಂಡ ನಟ ನಟಿಯರ ಸಾಲಿಗೆ ಈಗ ಇನ್ನೊಬ್ಬ ಖ್ಯಾತ ಕಿರುತೆರೆ ನಟಿ ಸೇರಿಕೊಂಡಿದ್ದು ಇಡೀ ದೇಶವೇ ಈ ಖ್ಯಾತ ನಟಿಯ ಅಗಲಿಕೆಗೆ ಕಂಬನಿಯನ್ನ ಮಿಡಿದಿದೆ ಎಂದು ಹೇಳಬಹುದು.
ಹಾಗಾದರೆ ಈ ಈ ಖ್ಯಾತ ನಟಿ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಟಿಯ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆಯನ್ನ ಮಾಡಿಕೊಳ್ಳಿ. ಹೌದು ಸ್ನೇಹಿತರೆ ಹಿಂದೂ ಕಿರುತೆರೆಯ ಖ್ಯಾತ ನಟಿ ಮಾಧವಿ ಗೋಗಟೆ ಅವರು ಕರೋನ ಮಹಾಮಾರಿಯ ಕಾರಣ ತಮ್ಮ ಜೀವವನ್ನ ಕಳೆದುಕೊಂಡಿದ್ದಾರೆ. ಖ್ಯಾತ “ಅನುಪಮಾ” ಧಾರಾವಾಹಿಯಲ್ಲಿ ಅನುಪಮಾ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡು ಅಪಾರ ಜನಮೆಚ್ಚುಗೆಯನ್ನ ಗಳಿಸಿಕೊಂಡಿದ್ದರು ಮಾಧವಿ ಗೋಗಟೆ ಅವರು.
ತಮ್ಮ ಅದ್ಬುತ ನಟನೆಯ ಮೂಲಕ ಕಿರುತೆರೆಯಲ್ಲಿ ಅಪಾರವಾದ ಅಭಿಮಾನಿ ಬಳಗವನ್ನ ಗಳಿಸಿಕೊಂಡಿದ್ದ ನಟಿ ಮಾಧವಿ ಗೋಗಟೆ ಅವರಿಗೆ ಕೆಲವು ದಿನಗಳ ಕರೋನ ಸೋಂಕು ಕಾಣಿಸಿಕೊಂಡಿತ್ತು. ಸುಮಾರು 58 ವರ್ಷ ವಯಸ್ಸಿನ ಮಾಧವಿ ಗೋಗಟೆ ಅವರಿಗೆ ಕರೋನ ಸೋಂಕು ಕಾಣಿಸಿಕೊಂಡು ಅದರ ತೀವ್ರತೆ ಬಹಳ ಹೆಚ್ಚಾದ ಕಾರಣ ಅವರಿಗೆ ಉಸಿರಾಟದ ಸಮಸ್ಯೆ ಹೆಚ್ಚಾಗಿ ಕಾಡಿತ್ತು ಮತ್ತು ಈ ಕಾರಣದಿಂದ ಅವರನ್ನ ಕುಟುಂಬದವರು ಆಸ್ಪತ್ರೆಗೆ ದಾಖಲು ಮಾಡಿದ್ದರು. ಕೆಲವು ದಿನಗಳ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ಪಡೆದುಕೊಂಡರು ಕೂಡ ಮಾಧವಿ ಗೋಗಟೆ ಅವರ ಆರೋಗ್ಯದಲ್ಲಿ ತೀವ್ರವಾದ ಏರುಪೇರು ಆಗಿದ್ದು ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಹಲೋಕವನ್ನ ತ್ಯಜಿಸಿದ್ದಾರೆ.
“ಮಾಧವಿ ಗೋಗಟೆ ಅವರ ಆತ್ಮಸ್ನೇಹಿತೆ, ನೀಲು ಕೊಹ್ಲಿ ಅವರು ನೀವು ನಮ್ಮನ್ನ ಬಿಟ್ಟು ಹೋಗಿದ್ದಿರಿ ಅನ್ನುವುದನ್ನ ನಂಬಲು ನನಗೆ ಸಾಧ್ಯವಾಗುತ್ತಿಲ್ಲ, ನಿಮ್ಮದು ಇನ್ನು ಸಣ್ಣ ವಯಸ್ಸಾಗಿತ್ತು, ನೀವು ನನ್ನ ಮೆಸೇಜ್‌ಗೆ ಉತ್ತರಿಸದಿದ್ದಾಗ ನಾನು ನನ್ನ ಮೊಬೈಲ್ ತೆಗೆದುಕೊಂಡು ನಿಮಗೆ ಕರೆ ಮಾಡಬೇಕಿತ್ತು. ನಾನೀಗ ಪಶ್ಚಾತ್ತಾಪ ಪಡಲಷ್ಟೇ ಸಾಧ್ಯ” ಎಂದು ಬರೆದುಕೊಂಡಿದ್ದಾರೆ. ‘ತುಜಾ ಮಜಾ ಕುನಿಕಡೆ’ ಧಾರಾವಾಹಿ ಮೂಲಕ ಮಾಧವಿ ಅವರು ಮರಾಠಿ ಕಿರುತೆರೆಯಲ್ಲಿ ಕೂಡ ಕಾಣಿಸಿಕೊಂಡಿದ್ದರು. ಕೋಯಿ ಅಪ್ನಾ ಸಾ, ಐಸಾ ಕಭಿ ಸೋಚ್ ನಾ ಥಾ ಅಂತಹ ಮೊದಲಾದ ಹಿಂದಿ ಧಾರಾವಾಹಿಯಲ್ಲಿ ಕೂಡ ಮಾಧವಿ ಅವರು ಕಾಣಿಸಿಕೊಂಡಿದ್ದರು. ಸ್ನೇಹಿತರೆ ಮಾಧವಿ ಗೋಗಟೆ ಅವರ ಕುಟುಂಬಕ್ಕೆ ಈ ನೋವನ್ನ ಭರಿಸಿಕೊಳ್ಳುವ ಶಕ್ತಿ ಆ ದೇವರು ನೀಡಲು ಎಂದು ನಾವು ನೀವು ದೇವರಲ್ಲಿ ಪ್ರಾರ್ಥನೆಯನ್ನ ಮಾಡಿಕೊಳ್ಳೋಣ.