State Pension: ರಾಜ್ಯ ಸರ್ಕಾರೀ ನೌಕರರಿಗೆ ದಸರಾ ಹಬ್ಬದ ಗಿಫ್ಟ್, ಪಿಂಚಣಿ ಕುರಿತಾಗಿ ಘೋಷಣೆ ಮಾಡಿದ ಸಿದ್ದರಾಮಯ್ಯ ಸರ್ಕಾರ.
ರಾಜ್ಯದ ಸರ್ಕಾರೀ ನೌಕರರ Old Pension ಕುರಿತು ಮಹತ್ವದ ನಿರ್ಧಾರ.
Madhu Bangarappa About Old Pension Scheme: ಇತ್ತೀಚಿಗೆ ರಾಜ್ಯ ಸರ್ಕಾರ ಸರ್ಕಾರೀ ನೌಕರರಿಗೆ ಸಾಲು ಸಾಲು ಸಿಹಿಸುದ್ದಿ ನೀಡುತ್ತಿದೆ. ನೌಕರರ ವೇತನ ಹೆಚ್ಚಳದ ಬಗ್ಗೆ ಘೋಷಣೆ ಹೊರಡಿಸುವ ರಾಜ್ಯದ ಸರ್ಕಾರ ಇದೀಗ Old Pension Scheme ಜಾರಿಮಾಡುವುದಾಗಿ ಮಾಹಿತಿ ನೀಡಿದೆ. ರಾಜ್ಯದ ಜನತೆಗೆ ಉಚಿತ ಗ್ಯಾರಂಟಿಗಳ ಜೊತೆಗೆ ಸರ್ಕ್ರಿ ನೌಕರರು ಹಳೆಯ ಪಿಂಚಣಿಯ ಯೋಜನೆಯಡಿ ಸದ್ಯದಲ್ಲೇ ಪಿಂಚಣಿ ಪಡೆಯಬಹುದಾಗಿದೆ.
ಸದ್ಯ ಪಿಂಚಣಿಗೆ ಸಂಬಂಧಿಸಿದಂತೆ ಅನೇಕ ಅಪ್ಡೇಟ್ ಗಳು ಹರಿದಾಡುತ್ತಿವೆ. ಇನ್ನು ಇತ್ತೀಚಿಗೆ ಹಳೆಯ ಪಿಂಚಣಿ (Old Pension) ನೀಡುವ ಕುರಿತು ಸಾಕಷ್ಟು ರೀತಿಯ ಸುದ್ದಿಗಳು ಹರಡಿದ್ದವು. ಇದೀಗ ಸರ್ಕಾರ Old Pension ಕುರಿತು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಈ ಮೂಲಕ ರಾಜ್ಯದ ಸರ್ಕಾರೀ ನೌಕರರಿಗೆ ಗುಡ್ ನ್ಯೂಸ್ ನೀಡಿದೆ.
Old Pension Scheme
ಪ್ರಸ್ತುತ ಸರ್ಕಾರೀ ನೌಕರರಿಗೆ ಹೊಸ ಪಿಂಚಣಿ ಪದ್ದತಿಯಲ್ಲಿ ಪಿಂಚಣಿ ನೀಡಲಾಗುತ್ತಿದೆ. ಹೀಗಾಗಿ ನೌಕರರು ಹಳೆಯ ಪಿಂಚಣಿ ಪದ್ಧತಿ ಪ್ರಕಾರ ಪಿಂಚಣಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈಗಾಗಲೇ ವಿವಿಧ ರಾಜ್ಯ ಸರ್ಕಾರ Old Pension Scheme ಅನ್ನು ಜಾರಿಗೊಳಿಸಿದೆ. ಎಲ್ಲಾ ರಾಜ್ಯದಲ್ಲೂ ಹಳೆಯ ಪಿಂಚಣಿ ವ್ಯವಸ್ಥೆ ಸದ್ಯದಲ್ಲೇ ಜಾರಿಯಾಗುವ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಶೀಘ್ರವೇ ಹಳೆಯ ಪಿಂಚಣಿ ವ್ಯವಸ್ಥೆ ಜಾರಿ
ಸದ್ಯ ಕರ್ನಾಟಕದಲ್ಲಿ Old Pension ಸ್ಕೀಮ್ ಜಾರಿಗೊಳಿಸುವ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಾಹಿತಿ ನೀಡಿದ್ದಾರೆ. ‘ನಮ್ಮ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ಬದ್ಧರಾಗಿದ್ದೇವೆ. ಶೀಘ್ರವೇ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ತರಲಾಗುತ್ತದೆ’ ಎಂದು ಮಧು ಬಂಗಾರಪ್ಪ ಅವರು ಹೇಳಿಕೆ ನೀಡಿದ್ದಾರೆ.
ಸರ್ಕಾರಿ ನೌಕರರಿಗೆ OPS ಜಾರಿ
ಇನ್ನು 2006 ರ ನಂತರ ನೇಮಕವಾಗಿರುವ ಎಲ್ಲಾ ಸರ್ಕಾರೀ ನೌಕರರು ಮತ್ತು ಅವರ ಅವಲಂಭಿತ ಕುಟುಂಬಗಳಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು. 7 ನೇ ವೇತನ ಆಯೋಗದ ವರದಿಗಳನ್ನು ಶೀಘ್ರವಾಗಿ ಪಡೆದು ವೇತನ, ಭತ್ಯೆ ಪರಿಷ್ಕರಿಸಬೇಕು ಎಂದು ಸರಕಾರಿ ನೌಕರರು ಮನವಿ ಮಾಡಿದ್ದರು.
ಪ್ರಸ್ತುತ National Pension Scheme ನ ಅಡಿಯಲ್ಲಿ ನೌಕರರು ಮೂಲ ವೇತನದ 10% ಮತ್ತು ಸರ್ಕಾರಕ್ಕೆ 14% ರಷ್ಟು ಕೊಡುಗೆ ನೀಡಬೇಕಾಗುತ್ತದೆ. ಹಳೆಯ ಪಿಂಚಣಿ ಯೋಜನೆಯಡಿಯಲ್ಲಿ ಕೊನೆಯ ವೇತನದ 50 % ಖಾತರಿ ಪಿಂಚಣಿಯಾಗಿ ನೀಡಲಾಗುತ್ತದೆ. ನೌಕರರು ತಮ್ಮ ಕೊನೆಯ ಸಂಬಳದ 40% ರಿಂದ 45% ರಷ್ಟು ಪಿಂಚಣಿಯಾಗಿ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.